Crime News

ವ್ಯಕ್ತಿಯ ಅಸ್ವಾಭಾವಿಕ ಸಾವು

ದಿನಾಂಕ 14/09/2018ರಂದು ಸೋಮವಾರಪೇಟೆ ಬಳಿಯ ಐಗೂರು ನಿವಾಸಿ ಆಶಾ ಎಂಬವರ ಮನೆಗೆ ಅವರ ಮಲ ತಮ್ಮ ತೇಜಸ್ ಎಂಬಾತನು ಬಂದಿದ್ದು ರಾತ್ರಿ ಊಟ ಮಾಡುವಾಗ ತೇಜಸ್‌ಗೆ ಅಪಸ್ಮಾರ ಕಾಯಿಲೆ ಬಂದಂತಾಗಿ ಒದ್ದಾಡುತ್ತಿದ್ದು ಆತನನ್ನು ಚಿಕಿತ್ಸೆಗಾಗಿ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು ಅಲ್ಲಿ ವೈದ್ಯರು ತೇಜಸ್‌ ಮೃತನಾಗಿರುವುದಾಗಿ ತಿಳಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಹಲ್ಲೆ ಪ್ರಕರಣ

ದಿನಾಂಕ 14/09/2018ರಂದು ಸೋಮವಾರಪೇಟೆ ಬಳಿಯ ನಾಡ್ನಳ್ಳಿ ನಿವಾಸಿ ಸವಿತಾ ಎಂಬಾಕೆಯು ನೆರೆಮನೆಯವರಾದ ಬಾಲಕಿ ಎಂಬವರ ಮನೆಗೆ ಹೋಗಿದ್ದ ಸಂದರ್ಭದಲ್ಲಿ ಬಾಲಕಿಯ ಮನೆಯಲ್ಲಿದ್ದ ಮಲ್ಲಪ್ಪ, ದರ್ಶನ್ ಮತ್ತು ಪೊನ್ನಪ್ಪ ಎಂಬವರುಗಳು ಸೇರಿಕೊಂಡು ಕ್ಷುಲ್ಲಕ ಕಾರಣಕ್ಕೆ ಸವಿತಾರವರ ಮೇಲೆ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

ದಿನಾಂಕ 14/09/2018ರಂದು ಸೋಮವಾರಪೇಟೆ ಬಳಿಯ ವಳಗುಂದ ಕಾಲೊನಿ ನಿವಾಸಿ ಶಿವ ಎಂಬವರು ಅವರ ನೆಂಟರ ಮನೆಗೆ ಹೋಗಿ ಮರಳಿ ಬರುತ್ತಿರುವಾಗ ಅಬ್ಬೂರು ಕಟ್ಟೆ ಬಳಿ ನೇಗಳ್ಳಿ ಗ್ರಾಮದ ನಿವಾಸಿ ಸಂತೋಷ್ ಎಂಬಾತನು ತೋಟ ಕೆಲಸದ ವಿಷಯದಲ್ಲಿ ಜಗಳವಾಡಿ ಶಿವರವರ ಮೇಲೆ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಜೂಜಾಟ

ಶನಿವಾರಸಂತೆ ನಗರದ ಗುಂಡೂರಾವ್‌ ಬಡಾವಣೆಯ ಬಳಿ ಕೆಲವರು ಅಕ್ರಮವಾಗಿ ಜೂಜಾಡುತ್ತಿರುವುದಾಗಿ ದೊರೆತ ಮಾಹಿತಿಯ ಮೇರೆಗೆ ಶನಿವಾರಸಂತೆ ಠಾಣೆಯ ಪಿಎಸ್‌ಐ ಹೆಚ್‌.ಎಂ.ಮರಿಸ್ವಾಮಿರವರು ದಿನಾಂಕ 15/09/2018ರಂದು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿದಾಗ ಅಲ್ಲಿ ಎಸ್‌.ಆರ್.ಪ್ರತಾಪ್‌, ಕೆ.ಎಸ್.ಪುಟ್ಟಯ್ಯ, ಎಸ್‌.ಆರ್.ವಿನೋದ್, ಎಸ್‌.ಪಿ.ದೀಪಕ್‌ ಎಂಬವರು ಇಸ್ಪೀಟೆಲೆಗಳನ್ನು ಉಪಯೋಗಿಸಿ ಅಕ್ರಮವಾಗಿ ಜೂಜಾಡುತ್ತಿದ್ದುದನ್ನು ಪತ್ತೆ ಹಚ್ಚಿ ಎಲ್ಲರನ್ನೂ ಬಂಧಿಸಿ ಜೂಜಾಟದಲ್ಲಿ ಪಣವಾಗಿಟ್ಟಿದ್ದ ರೂ.1540/- ನ್ನು ವಶಪಡಿಸಿಕೊಂಡು ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 ಅಕ್ರಮ ಮರ ಸಾಗಾಟ

ಕೊಡಗು ಜಿಲ್ಲೆಯಲ್ಲಿ ಮರಳು ಮತ್ತು ಮರ ಸಾಗಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿಗಳು ಹೊರಡಿಸಿದ ಆದೇಶವನ್ನು ಉಲ್ಲಂಘಿಸಿ ದಿನಾಂಕ 15/09/2018ರಂದು ಸುಂಟಿಕೊಪ್ಪ ಬಳಿಯ ಸ್ಯಾಂಡಲ್‌ ವುಡ್‌ ತೋಟದ ಬಳಿ ಟಿಎನ್‌-36-ಎಎ-2887ರ ಲಾರಿಯಲ್ಲಿ ಪಿ.ರಂಜಿತ್‌ ಕುಮಾರ್ ಎಂಬಾತನು ಅಕ್ರಮವಾಗಿ ಸಿಲ್ವರ್‌ ಓಕ್‌ ಮರಗಳನ್ನು ಸಾಗಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿದ ಸುಂಟಿಕೊಪ್ಪದ ಗ್ರಾಮ ಲೆಕ್ಕಿಗರಾದ ಯಶವಂತ್‌ರವರು ಲಾರಿ ಸಮೇತ ಮರವನ್ನು ಸುಂಟಿಕೊಪ್ಪ ಪೊಲೀಸರ ಸುಪರ್ದಿಗೆ ಒಪ್ಪಿಸಿ ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 ಮಹಿಳೆಯ ಹಣ ಕಳವು

ದಿನಾಂಕ 15/09/2018ರಂದು ಗುಡ್ಡೆಹೊಸೂರು ಬಳಿಯ ನಿವಾಸಿ ನಳಿನಿ ಎಂಬವರು ಅವರ ಪತಿಯೊಂದಿಗೆ ಕುಶಾಲನಗರದ ಕೆ.ಎಸ್‌.ಆರ್‌.ಟಿ.ಸಿ ಬಸ್‌ ನಿಲ್ದಾಣದಲ್ಲಿ ಬೆಂಗಳೂರಿಗೆ ಹೋಗಲು ಬಸ್‌ ಹತ್ತುತ್ತಿರುವಾಗ ಅಪರಿಚಿತ ಮಹಿಳೆಯೊಬ್ಬರು ನಳಿನಿಯವರನ್ನು ದೂಡಿಕೊಂಡು ಬಸ್‌ ಹತ್ತಿದ್ದು ನಂತರ ಇಳಿದು ಹೋಗಿರುತ್ತಾರೆ. ನಂತರ ನಳಿನಿಯವರು ಮೈಸೂರಿನಲ್ಲಿ ಅವರ ಕೈ ಚೀಲದಲ್ಲಿದ್ದ ಸಣ್ಣ ಪರ್ಸ್‌ ಅನ್ನು ತೆರೆದು ನೋಡುವಾಗ ಅದರಲ್ಲಿದ್ದ ರೂ.40,000/- ನಗದು ಹಾಗೂ ಕೆಲವು ಎಟಿಎಂ ಕಾರ್ಡ್‌ಗಳನ್ನು ಕಳವು ಮಾಡಿರುವುದು ತಿಳಿದು ಬಂದಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ

ದಿನಾಂಕ 15/09/2018ರಂದು ಶ್ರೀಮಂಗಲ ಬಳಿಯ ನಾಲ್ಕೇರಿ ನಿವಾಸಿ ಪಿ.ಎಂ.ಮಂಜು ಎಂಬವರು ಅವರ ತೋಟದ ಮಾಲೀಕರ ಪತ್ನಿ ವಿಶಾಲಾಕ್ಷಿ ಎಂಬವರೊಂದಿಗೆ ಪೊನ್ನಂಪೇಟೆಯ ನಿಸರ್ಗ ನಗರದಿಂದ ಕೆಲವರನ್ನು ಕಾರಿನಲ್ಲಿ ಹತ್ತಿಸಿಕೊಂಡು ಬೆಕ್ಕೆಸೊಡ್ಲೂರು ಗ್ರಾಮಕ್ಕೆ ಹೋಗುತ್ತಿರುವಾಗ ಮುಗುಟಗೇರಿ ಗ್ರಾಮದ ಬಳಿ ಎದುರಿನಿಂದ ಒಂದು ಸ್ವಿಫ್ಟ್ ಡಿಸೈರ್ ಕಾರನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ವಿಶಾಲಾಕ್ಷಿಯವರು ಚಾಲಿಸುತ್ತಿದ್ದ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರಿನಲ್ಲಿದ್ದ ಮಂಜು, ವಿಶಾಲಾಕ್ಷಿ, ಶೀಬಾ ಮತ್ತು ಗೌರಿ ಎಂಬವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.