Crime News

ದಾರಿ ತಡೆದು ಹಲ್ಲೆ:

ವ್ಯಕ್ತಿಯೊಬ್ಬರ ದಾರಿ ತಡೆದು ಹಲ್ಲೆ ನಡೆಸಿದ ಘಟನೆ ಪೊನ್ನಂಪೇಟೆ ಪೊಲೀಸ್ ಠಾಣಾ ಸರಹದ್ದಿನ ಕಿರಗೂರು ಗ್ರಾಮದಲ್ಲಿ ನಡೆದಿದೆ.   ಕಿರುಗೂರು ಗ್ರಾಮದ ವಿ.ಟಿ. ಗೋಪಾಲ ಎಂಬವರು ದಿನಾಂಕ 16-9-2018 ರಂದು ಸ್ಕೂಟಿಯಲ್ಲಿ ತಮ್ಮ ಮನೆಯ ಕಡೆಗೆ ಹೋಗುತ್ತಿದ್ದಾಗ ಕಿರಗೂರು ಗ್ರಾಮದ ಕಾಕೇರ ಸೋನು ಎಂಬವರು ಸ್ಕೂಟಿಯನ್ನು ತಡೆದು ನಿಲ್ಲಿಸಿ ಅಡಿಕೆ ವ್ಯಾಪಾರ ಮಾಡಿದ ಬಾಪ್ತು ಹಣದ ವಿಚಾರದಲ್ಲಿ ಜಗಳ ಮಾಡಿ ದೊಣ್ಣೆಯಿಂದ ವಿ.ಟಿ.ಗೋಪಾಲರವರ ಮೇಲೆ ಹಲ್ಲೆ ಮಾಡಿದ್ದು ಅಲ್ಲದೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಮೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ದ್ವೇಷದ ಹಿನ್ನಲೆ ವ್ಯಕ್ತಿ ಮೇಲೆ ಹಲ್ಲೆ:

ವಿರಾಜಪೇಟೆ ತಾಲೋಕು ಮತ್ತೂರು ಗ್ರಾಮದ ನಿವಾಸಿ ಪಿ.ಜಿ. ಅನಿಲ್ ಕುಮಾರ್ ಎಂಬವರು ದಿನಾಂಕ 16-9-2018 ರಂದು ಮಧ್ಯಾಹ್ನ 3-45 ಗಂಟೆಯ ಸಮಯದಲ್ಲಿ ಅರವತ್ತೋಕ್ಲು ಗ್ರಾಮದ ಕಾಫಿ ಬೋರ್ಡಿನ ಬಳಿ ಬಸ್ಸಿಗೆ ಕಾಯುತ್ತಿದ್ದಾಗ ಅರುವತ್ತೋಕ್ಲು ಗ್ರಾಮದವರಾದ ಜಮ್ಮಡ ಉಮೇಶ್, ವೆಂಕಟೇಶ್, ಪಣಿಕರ ರತ್ನ ಮತ್ತು ಸತೀಶ್ ರವರುಗಳು ಮಾರುತಿ ವ್ಯಾನಿನಲ್ಲಿ ಅಲ್ಲಿಗೆ ಬಂದು ಹಳೆಯ ದ್ವೇಷವನ್ನಿಟ್ಟುಕೊಂಡು ಕೈಯಿಂದ ಮತ್ತು ಹಾಕಿ ಸ್ಟಿಕ್ ನಿಂದ ಹಲ್ಲೆ ನಡೆಸಿದ್ದು ಅಲ್ಲದೆ ಗುಂಡು ಹೊಡೆದು ಕೊಲೆ ಮಾಡುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಚಿನ್ನಾಭರಣ ಕಳವು:

ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಹುದುಗೂರು ಗ್ರಾಮದ ನಿವಾಸಿ ಕೆ.ಪಿ. ರಮೇಶ್ ಎಂಬವರ ಮನೆಯಿಂದ ದಿನಾಂಕ 1-9-2018 ರಿಂದ 15-9-2018ರ ನಡುವಿನ ಅವಧಿಯಲ್ಲಿ ಸುಮಾರು 32,000 ರೂ. ಮೌಲ್ಯದ ಚಿನ್ನಾಭರಣ ಕಳ್ಳತನವಾಗಿದ್ದು, ಸದರಿ ಚಿನ್ನಾಭರಣಗಳನ್ನು ದಿನಾಂಕ 3-9-2018 ರಂದು ಕೈಲ್ ಮುಹೂರ್ತಕ್ಕೆಂದು ಅವರ ಮನೆಗೆ ಬಂದಿದ್ದ ಅವರ ಸಂಬಂಧಿಕರಾದ ಕಿರಣ ಹಾಗು ಯಶಸ್ವಿನಿ ಎಂಬವರು ಕಳ್ಳತನ ಮಾಡಿರುವ ಸಂಶಯವಿರುವುದಾಗಿ ದೂರನ್ನು ನೀಡಿದ್ದು ಅದರೆ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕತ್ತಿಯಿಂದ ಕಡಿದು ಕೊಲೆಗೆ ಯತ್ನ:

ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಬಸವನತ್ತೂರು ಗ್ರಾಮದ ಲಿಂಗರಾಜು ಎಂಬವರ ಹಾಲೋ ಬ್ರಿಕ್ಸ್ ಪ್ಯಾಕ್ಟರಿಯ ಲೈನು ಮನೆಯಲ್ಲಿ ವಾಸವಾಗಿರುವ ಮೂಲತ: ಉತ್ತರಪ್ರದೇಶದವರಾದ ಸರಲ್ ಪಾಸ್ವಾನ್ ರವರು ದಿನಾಂಕ 15-9-2018 ರಂದು ರಾತ್ರಿ 10-00 ಗಂಟೆಯ ಸಮಯದಲ್ಲಿ ತಾನು ವಾಸವಾಗಿರುವ ಲೈನುಮನೆಯ ಮುಂದುಗಡೆ ಕುಳಿತುಕೊಂಡು ಮೊಬೈಲ್‍ನಲ್ಲಿ ಸಿನಿಮಾವನ್ನು ನೋಡುತ್ತಿದ್ದ ವೇಳೆ ಪಕ್ಕಡ ಲೈನು ಮನೆಯ ವಾಸಿ ರಾಜು ಎಂಬಾತ ಅಲ್ಲಿಗೆ ಬಂದು ವಿನಾಕಾರಣ ಜಗಳ ಮಾಡಿ ಸರಲ್ ಪಾಸ್ವಾನ್‍ರವರನ್ನು ಕೊಲೆ ಮಾಡುವ ಉದ್ದೇಶದಿಂದ ಕತ್ತಿಯಿಂದ ತಲೆಯ ಭಾಗಕ್ಕೆ ಕಡಿದು ಗಾಯಪಡಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ತವ್ಯಕ್ಕೆ ಅಡ್ಡಿ ಪ್ರಕರಣ ದಾಖಲು:

ಕುಶಾಲನಗರ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಡಾ:ಹೆಚ್.ಆರ್. ಪ್ರಥ್ವಿ ಎಂಬವರು ದಿನಾಂಕ 15-9-2018 ರಂದು ರಾತ್ರಿ ಪಾಳಿ ಕರ್ತವ್ಯದಲ್ಲಿದ್ದು ದಿನಾಂಕ 16-9-2018 ರಂದು ಬೆಳಗ್ಗೆ 8-20 ಗಂಟೆಗೆ ಹೆರಿಗೆ ಕೇಸಿನ ಸಂಬಂಧ ಬಂದಿದ್ದ ಮಹಿಳೆಯನ್ನು ಪರೀಕ್ಷಿಸುತ್ತಿದ್ದ ಸಮಯದಲ್ಲಿ ಕುಶಾಲನಗರದ ದಂಡಿನ ಪೇಟೆ ನಿವಾಸಿ ಆರೀಫ್ ರವರು ಜ್ವರವೆಂದು ಆರೋಗ್ಯ ಕೇಂದ್ರಕ್ಕೆ ಬಂದಿದ್ದು, ಅವರನ್ನು ಸ್ವಲ್ಪ ಸಮಯ ಕೂರುವಂತೆ ಹೇಳಿ ನಂತರ ನೋಡುವುದಾಗಿ ತಿಳಿಸಿದಾಗ ಸದರಿ ಆರೀಫ್ ಹಾಗು ಆತನೊಂದಿಗೆ ಬಂದಿದ್ದ ಒಬ್ಬ ಗಂಡಸು ಮತ್ತು ಇಬ್ಬರು ಹೆಂಗಸರು ಸೇರಿ ಡಾ: ಹೆಚ್.ಆರ್. ಪ್ರಥ್ವಿ ರವರನ್ನು ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ಬೈದು ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆಗೆ ಯತ್ನಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಕುಶಾಲನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ:

ಸಿದ್ದಾಪುರ ಠಾಣಾ ಸರಹದ್ದಿನ ನೆಲ್ಲಿಹುದಿಕೇರಿ ಗ್ರಾಮದ ನಿವಾಸಿ ಎಂ.ರಾಜೇಂದ್ರ ಎಂಬವರ ತಂದೆ 75 ವರ್ಷದ ಮುರುಗನ್ ಎಂಬವರು 9 ವರ್ಷಗಳು ಹಿಂದೆ ಯಾವುದೋ ಪ್ರಕರಣದಲ್ಲಿ ಭಾಗಿಯಾಗಿ ಜೈಲು ಶಿಕ್ಷೆ ಅನುಭವಿಸಿ ದಿನಾಂಕ 3-9-2018 ರಂದು ಜೈಲಿನಿಂದ ಬಿಡುಗಡೆಹೊಂದಿ ಬಂದಿದ್ದು, ಪ್ರಸ್ತುತ ಅವರು ಅನಾರೋಗ್ಯದಿಂದ ಬಳಲುತ್ತಿದ್ದು ಅದೇ ವಿಚಾರದಲ್ಲಿ ಮನನೊಂದ ಮುರುಗನ್ ರವರು ದಿನಾಂಕ 15-9-2018 ರಂದು ಯಾವುದೋ ವಿಷವನ್ನು ಸೇವಿಸಿ ಅಸ್ವತ್ಥರಾದವರನ್ನು ಚಿಕಿಸ್ತೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದು, ಈ ಸಂಬಂಧ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.