Crime News

ಹಲ್ಲೆ ಪ್ರಕರಣ

ದಿನಾಂಕ 17-09-2018 ರಂದು ಗೋಣಿಮರೂರು ಗ್ರಾಮದ ನಿವಾಸಿಯಾದ ಶಿವ ಎಂಬುವವರು ಬಾಣವಾರದಲ್ಲಿರುವ ತನ್ನ ಚಿಕ್ಕಪ್ಪನ ಮನೆಯಲ್ಲಿರುವಾಗ ರಾಜು ಮತ್ತು ಕರಿಯ ಎಂಬುವವರು ರೇವಣ್ಣನವರಿಗೆ ಬೈಯುತ್ತಿರುವಾಗ ವಿಚಾರಿಸಲು ಹೋದ ಶಿವರವರಿಗೆ ಇಬ್ಬರೂ ಸೇರಿ ಹಲ್ಲೆ ನಡೆಸಿದ್ದು ಈ ಬಗ್ಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ,.

ಆತ್ಮಹತ್ಯೆ ಪ್ರಕರಣ

ಮಹಿಳೆಯೊಬ್ಬರು ಜೀವನದಲ್ಲಿ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುಶಾಲನಗರದ ಮುಳ್ಳುಸೋಗೆ ಎಂಬಲ್ಲಿ ವರದಿಯಾಗಿದೆ. ಮುಳ್ಳುಸೋಗೆಯ ನಿವಾಸಿ ಮಂಜುಳಾ ಎಂಬುವವರು ಜೀವನದಲ್ಲಿ ಜುಗುಪ್ಸೆಗೊಂಡು ದಿನಾಂಕ 18-08-2018 ರಂದು ಮನೆಯಲ್ಲಿ ನೇಣೂ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ಕುಶಾಲನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಪರಿಚಿತ ವ್ಯಕ್ತಿಯ ಶವ ಪತ್ತೆ

ದಿನಾಂಕ 18-09-2018 ರಂದು ವಿರಾಜಪೇಟೆ ನಗರದ ಮಾರ್ಕೆಟ್ ಆವರಣದಲ್ಲಿ 65 ವರ್ವ ಪ್ರಾಯದ ಜೋಸೆಫ್ ಎಂಬುವವರು ನಿತ್ರಾಣದಿಂದ ಮಲಗಿದ್ದವರನ್ನು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯರು ಪರೀಕ್ಷಿಸುವಾಗ ಮೃತಪಟ್ಟಿದ್ದು, ಇವರ ವಿಳಾಸ ತಿಳಿಯದೇ ಇದ್ದು ಶವವನ್ನು ಆಸ್ಪತ್ರೆಯ ಶವಾಗಾರದಲ್ಲಿ ಇಟ್ಟಿದ್ದು, ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.