Crime News

ಮೋಟಾರ್ ಸೈಕಲಿಗೆ ಕಾರು ಡಿಕ್ಕಿ:

ಭಾಗಮಂಡಲ ಪೊಲೀಸ್ ಠಾಣಾ ವ್ಯಾಪ್ತಿಯ ಪರಂಬು ಪೈಸಾರಿ ಬೇಂಗೂರು ಗ್ರಾಮದ ನಿವಾಸಿ ಬಿ.ಸಿ. ಯೋಗೇಂದ್ರ ಎಂಬವರು ದಿನಾಂಕ 19-9-2018 ರಂದು ಮೋಟಾರು ಸೈಕಲಿನಲ್ಲಿ ಮಡಿಕೇರಿ ಕಡೆಯಿಂದ ಬೇಂಗೂರು ಗ್ರಾಮದಲ್ಲಿರುವ ತಮ್ಮ ಮನೆಯ ಕಡೆಗೆ ಹೋಗುತ್ತಿದ್ದು ಕೊಟ್ಟೂರು ಗ್ರಾಮದಲ್ಲಿ ತಲುಪುವಾಗ್ಗೆ ಎದುರುಗಡೆಯಿಂದ ಕಾರೊಂದನ್ನು ಅದರ ಚಾಲಕ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಮೋಟಾರ್ ಸೈಕಲಿಗೆ ಡಿಕ್ಕಿಪಡಿಸಿದ ಪರಿಣಾಮ ಬಿ.ಸಿ. ಯೋಗೇಂದ್ರನವರು ಗಾಯಗೊಂಡಿದ್ದು, ಈ ಸಂಬಂಧ ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ತವ್ಯದಲ್ಲಿದ್ದ ಕಂದಾಯ ಅಧಿಕಾರಿ ಮೇಲೆ ಹಲ್ಲೆ:

ಸೋಮವಾರಪೇಟೆ ತಾಲೋಕು ತಹಶೀಲ್ದಾರ್ ಮಹೇಶ್ ಎಂಬವರು ದಿನಾಂಕ 18-9-2018 ರಂದು ಕುಶಾಲನಗರದಲ್ಲಿರುವ ವಾಲ್ಮೀಕಿ ಭವನದಲ್ಲಿದ್ದ ನೆರೆ ಸಂತ್ರಸ್ಥರು ಪ್ರತಿಭಟನೆ ಮಾಡುತ್ತಿದ್ದುದನ್ನು ಸಮಾಧಾನ ಪಡಿಸಲು ಹೋಗಿದ್ದ ವೇಳೆ ಕೆಲವು ಸಂತ್ರಸ್ಥರು ಅವರನ್ನು ಬೈದು, ಕರ್ತವ್ಯಕ್ಕೆ ಅಡ್ಡಿಪಡಿಸಿ ಅವರ ಮೇಲ್ ಹಲ್ಲೆ ನಡೆಸಿದ್ದಾರೆಂದು ಸದರಿ ತಹಶೀಲ್ದಾರ್ ರವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚುನಾವಣೆಗೆ ವಿಷಯದಲ್ಲಿ ವ್ಯಕ್ತಿಗೆ ಕೊಲೆ ಬೆದರಿಕೆ:

ವಿರಾಜಪೇಟೆ ನಗರದ ತೆಲುಗರಬೀದಿ ನಿವಾಸಿ ವಕೀಲ ಟಿ.ಪಿ. ಕೃಷ್ಣ ಎಂಬವರು ಪಟ್ಟಣ ಪಂಚಾಯ್ತಿ ಚುನಾವಣೆ ಸಂಬಂಧ ತಮ್ಮ ನಾಮಪತ್ರ ಸಲ್ಲಿಸಿದ ವಿಚಾರದಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ತೆಲುಗರಬೀದಿಯಲ್ಲಿರುವ ಟಿ.ಪಿ. ರಾಜಗೋಪಾಲ ಎಂಬವರ ಅಂಗಡಿ ಬಳಿ ಬಂದು ಚುನಾವಣಾ ನಾಮಪತ್ರಸಲ್ಲಿಸಿದ ವಿಚಾರದಲ್ಲಿ ರಾಜಗೋಪಾಲರವರ ಮಗ ಶಶಿಧರ್ ಹಾಗು ಮಣಿಕಂಠರವರರೊಂದಿಗೆ ಜಗಳ ಮಾಡಿ ಕೊಲೆ ಬೆದರಿಕೆ ಹಾಕಿರುವ ಸಂಬಂಧ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.