Crime News

ಸಾಲದ ವಿಚಾರದಲ್ಲಿ ಹಲ್ಲೆ, ಕೊಲೆ ಬೆದರಿಕೆ:

ಕುಟ್ಟ ಠಾಣಾ ವ್ಯಾಪ್ತಿಯ ಕುಟ್ಟ ಗ್ರಾಮದ ನಿವಾಸಿ ಸಿಂಕೋನ ಕಾಲೋನಿ ನಿವಾಸಿ ಜೆ.ಎಂ. ರಾಜ ರವರು ದಿನಾಂಕ 20-9-2018 ರಂದು ಮಧ್ಯಾಹ್ನ 1-35 ಗಂಟೆಗೆ ಮನೆಯಲ್ಲಿದ್ದಾಗ ಪಲ್ಸರ್ ಬೈಕಿನಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಜೆ.ಎಂ. ರಾಜರವರ ತಮ್ಮ ಅಶೋಕನ ಬಗ್ಗೆ ಕೇಳಿದ್ದು ಆತ ಮನೆಯಲ್ಲಿ ಇಲ್ಲ ಎಂದು ತಿಳಿಸಿದ್ದು  ಅಶೋಕ ಬಜಾಜ್ ಪೈನಾನ್ಸ್ ನಿಂದ ಆಟೋ ರಿಕ್ಷಾಕ್ಕೆ ಸಾಲವನ್ನು ಪಡೆದ ಬಗ್ಗೆ ಜಗಳ ಮಾಡಿ ಜೆ.ಎಂ. ರಾಜ ರವರ ಮೇಲೆ ಹಲ್ಲೆ ನಡೆಸಿ, ಕಾಲಿನಿಂದ ಹೊಟ್ಟೆಯ ಭಾಗಕ್ಕೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಕುಟ್ಟ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.