Crime News
ರಸ್ತೆ ಅಪಘಾತ
ದಿನಾಂಕ 20/09/2018ರಂದು ಭಾಗಮಂಡಲ ಬಳಿಯ ಕೋಪಟ್ಟಿ ನಿವಾಸಿ ನಾರಾಯಣಪ್ಪ ಎಂಬವರು ಬೊಲೆರೋ ಜೀಪಿನಲ್ಲಿ ಮಡಿಕೇರಿಯಿಂದ ಚೆಟ್ಟಿಮಾನಿಗೆ ಹೋಗುತ್ತಿರುವಾಗ ಕೋಪಟ್ಟಿ ಬಳಿ ಒಂದು ಖಾಸಗಿ ಬಸ್ಸನ್ನು ಅದರ ಚಾಲಕ ಪುಲಕಿತ್ ಎಂಬವರು ಬಸ್ಸನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ನಾರಾಯಣಪ್ಪನವರ ಜೀಪಿಗೆ ಡಿಕ್ಕಿಪಡಿಸಿದ ಪರಿಣಾಮ ನಾರಾಯಣಪ್ಪ ಹಾಗೂ ಜೀಪಿನಲ್ಲಿದ್ದ ಇತರೆ ಮೂವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಭಾಗಮಂಡಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಹಲ್ಲೆ ಪ್ರಕರಣ
ದಿನಾಂಕ 21/09/2018ರಂದು ನಾಪೋಕ್ಲು ಬಳಿಯ ಕಿರುಂದಾಡು ನಿವಾಸಿ ಎ.ಬಿ.ರಾಜೇಶ್ ಯಾನೆ ಮುದ್ದಪ್ಪ ಎಂಬವರು ಅವರ ಸ್ಕೂಟರಿನಲ್ಲಿ ಹೋಗುತ್ತಿರುವಾಗ ಕಿರುಂದಾಡು ಗ್ರಾಮದಲ್ಲಿ ಅದೇ ಗ್ರಾಮದ ನಿವಾಸಿ ಚೆರುಮಂದಂಡ ವಿವೇಕ್ ಎಂಬವರು ರಾಜೇಶ್ರವರ ಸ್ಕೂಟರನ್ನು ಅಡ್ಡ ಹಾಕಿ ಹಳೆ ವೈಷಮ್ಯದಿಂದ ಕತ್ತಿಯಿಂದ ಹಲ್ಲೆ ಮಾಡಲು ಯತ್ನಿಸಿದ್ದು ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಕೆರೆಗೆ ಬಿದ್ದು ವ್ಯಕ್ತಿ ಸಾವು
ದಿನಾಂಕ 21/09/2018ರಂದು ವಿರಾಜಪೇಟೆ ಬಳಿಯ ಕೊಳತ್ತೋಡು ಬೈಗೋಡು ನಿವಾಸಿ ಪೂವಯ್ಯ ಎಂಬವರು ಅದೇ ಗ್ರಾಮದ ಕೇಳಪಂಡ ಕೃಷ್ಣ ಎಂಬವರ ಕೆರೆಗೆ ಬಿದ್ದು ಸಾವಿಗೀಡಾಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಪಾದಚಾರಿಗೆ ಬೈಕ್ ಡಿಕ್ಕಿ
ದಿನಾಂಕ 21/09/2018ರಂದು ವಿರಾಜಪೇಟೆ ಬಳಿಯ ಕೆ.ಬೋಯಿಕೇರಿ ನಿವಾಸಿ ರಾಮು ಎಂಬವರು ವಿರಾಜಪೇಟೆಯಿಂದ ಕೆ.ಬೋಯಿಕೇರಿ ಗ್ರಾಮಕ್ಕೆ ಹೋಗುತ್ತಿರುವಾಗ ಗ್ರಾಮದ ರಸ್ತೆಯಲ್ಲಿ ಧರ್ಮೇಶ್ ಎಂಬಾತನು ಒಂದು ಬೈಕನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ರಾಮುರವರಿಗೆ ಡಿಕ್ಕಿಪಡಿಸಿದ ಪರಿಣಾಮ ರಾಮೂರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ
ದಿನಾಂಕ 21/09/2018ರಂದು ವಿರಾಜಪೇಟೆ ನಗರದ ಅಯ್ಯಪ್ಪ ಬೆಟ್ಟದ ನಿವಾಸಿ ವಾಸು ಎಂಬವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಮೃತ ವಾಸು ಅತೀವ ಮದ್ಯ ವ್ಯಸನಿಯಾಗಿದ್ದು ಕೈಸಾಲ ಮಾಡಿದ್ದು ತೀರಿಸಲು ಸಾಧ್ಯವಾಗದೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನ ಮೇರೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.