Crime News

ಬೈಕ್ ಕಳವು ಪ್ರಕರಣ

ವಿರಾಜಪೇಟೆ ಬಳಿಯ ಮೇಕೂರು ಹೊಸ್ಕೇರಿ ಗ್ರಾಮದ ನಿವಾಸಿ ಹೆಚ್‌.ಟಿ.ವೆಂಕಟೇಶ್ ಎಂಬವರು ದಿನಾಂಕ 19/09/2018ರಂದು ಅವರು ವಾಸವಿರುವ ಲಕ್ಷ್ಮಿ ತೋಟದ ವಸತಿ ಗೃಹದ ಪಕ್ಕದ ಪಾಲಿಬೆಟ್ಟ ಅಮ್ಮತ್ತಿ ರಸ್ತೆಯ ಪಕ್ಕದಲ್ಲಿ ಅವರ ಕೆಎ-02-ಜೆಬಿ-6258ರ ಬೈಕನ್ನು ನಿಲ್ಲಿಸಿ ಅವರ ವಸತಿ ಗೃಹಕ್ಕೆ ಹೋಗಿದ್ದು ದಿನಾಂಕ 20/09/2018ರಂದು ನೋಡುವಾಗ ಬೈಕನ್ನು ಯಾರೋ ಕಳವು ಮಾಡಿರುವುದು ಕಂಡು ಬಂದಿರುವುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

ದಿನಾಂಕ 21/09/2018ರಂದು ಚೆಂಬು ಗ್ರಾಮದ ಬಳಿಯ ಬಾಲೆಂಬಿ ನಿವಾಸಿ ಶಾಂತಿ ಬಿ ರೈ ಎಂಬವರು ಅವರ ಸ್ಕೂಟಿಯಲ್ಲಿ ಕಲ್ಲುಗುಂಡಿಗೆ ಹೋಗುತ್ತಿರುವಾಗ ಊರು ಬೈಲು ಮತ್ತು ಆನೆಹಳ್ಳ ರಸ್ತೆಯ ಬಳಿ ಬಾಲೆಂಬಿ ನಿವಾಸಿ ಮಹಾಬಲ ಎಂಬವರು ಶಾಂತಿ ಬಿ ರೈರವರ ಸ್ಕೂಟರನ್ನು ಒದ್ದು ನಿಲ್ಲಿಸಿ ಕ್ಷುಲ್ಲಕ ಕಾರಣಕ್ಕೆ ಮರದ ದೊಣ್ಣೆಯಿಂದ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕಾಫಿ ಗಿಡ ನಾಶ ; ಕೊಲೆ ಬೆದರಿಕೆ

ದಿನಾಂಕ 17/09/2018ರಂದು ಮಡಿಕೇರಿ ನಗರದ ರಾಘವೇಂದ್ರ ದೇವಸ್ಥಾನದ ಬಳಿಯ ನಿವಾಸಿ ವಿಜಯ ಕುಮಾರ್ ಹೆಚ್‌.ಎಸ್. ಎಂಬವರು ಗಾಳಿಬೀಡಿನ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಮಡಿಕೇರಿ ನಗರದ ಎಫ್‌ಎಂಸಿ ಕಾಲೇಜು ಬಳಿಯ ನಿವಾಸಿಗಳಾದ ಕುಲದೀಪ್, ಲೋಕೇಶ್ ಮತ್ತು ಸ್ಮಿತಾ ಎಂಬವರು ಕತ್ತಿಯಿಂದ ಕಾಫಿ ಗಿಡಗಳನ್ನು ಕಡಿದು ಹಾನಿಗೊಳಿಸುತ್ತಿದ್ದುದನ್ನು ಕಂಡು ವಿಚಾರಿಸಿದಾಗ ಕುಲದೀಪ್‌ರವರು ವಿಜಯಕುಮಾರ್‌ರವರನ್ನುದ್ದೇಶಿಸಿ ಕೋವಿಯಿಂದ ಗುಂಡು ಹೊಡೆದು ಕೊಲೆಮಾಡುವುದಾಗಿ ಬೆದರಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 ಬೈಕಿಗೆ ಲಾರಿ ಡಿಕ್ಕಿ

ದಿನಾಂಕ 22/09/2018ರಂದು ಸುಂಟಿಕೊಪ್ಪ ಬಳಿಯ ಅತ್ತೂರು ನಲ್ಲೂರು ಬಳಿಯ ಭೂತನಕಾಡು ನಿವಾಸಿ ವಿನೋದ್‌ ಎಂಬವರು ಅವರ ಬೈಕಿನಲ್ಲಿ ಸುಂಟಿಕೊಪ್ಪ ಕಡೆಯಿಂದ ಕುಶಾಲನಗರ ಕಡೆಗೆ ಹೋಗುತ್ತಿರುವಾಗ ಸುಂಟಿಕೊಪ್ಪದ ಶಾಂತಿಗಿರಿ ತೋಟದ ಬಳಿ ಕುಶಾಲನಗರ ಕಡೆಯಿಂದ ಒಂದು ಟಿಪ್ಪರ್ ಲಾರಿಯನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ವಿನೋದ್‌ರವರ ಬೈಕಿಗೆ ಡಿಕ್ಕಿ ಪಡಿಸಿದ ಪರಿಣಾಮ ವಿನೋದ್‌ರವರಿಗೆ  ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ

ದಿನಾಂಕ 22/09/2018ರಂದು ಶನಿವಾರಸಂತೆ ಬಳೀಯ ನಂದಿಗುಂದ ನಿವಾಸಿ ಎನ್‌.ಎಸ್.ಗೋಪಾಲ್ ಎಂಬವರ ತಮ್ಮನ ಮಗ ಸಚಿನ್ ಎಂಬವರು ಪುನೀತ್‌ ಎಂಬವರೊಡನೆ ಪುನೀತ್‌ರವರ ಬೈಕಿನಲ್ಲಿ ಶನಿವಾರಸಂತೆಯ ಪ್ರಥಮ ದರ್ಜೆ ಕಾಲೇಜಿನ ಬಳಿ ಹೋಗುತ್ತಿರುವಾಗ ಶನಿವಾರಸಂತೆಯ ಮಧ್ಯಪೇಟೆಯ ಕಡೆಯಿಂದ ರಾಮೇನಹಳ್ಳಿ ನಿವಾಸಿ ನವೀನ ಎಂಬವರು ಒಂದು ಬೈಕನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಸಚಿನ್‌ರವರು ಹೋಗುತ್ತಿದ್ದ ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ಸಚಿನ್‌ರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.