Crime News

ವೃದ್ದೆ ಆತ್ಮಹತ್ಯೆ

ದಿನಾಂಕ 22/09/2018ರಂದು ಪೊನ್ನಂಪೇಟೆ ಬಳೀಯ ಕಿರುಗೂರು ನಿವಾಸಿ 81 ವರ್ಷ ಪ್ರಾಯದ ಅಕ್ಕಮ್ಮ ಎಂಬ ವೃದ್ದ ಮಹಿಳೆಯೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ. ಮೃತೆ ಅಕ್ಕಮ್ಮರವರಿಗೆ ಇತ್ತೀಚೆಗೆ ಮೂರು ತಿಂಗಳಿನಿಂದ ಬಲಗೈ ಸ್ವಾಧೀನ ಕಳೆದುಕೊಂಡಿದ್ದು ಈ ಬಗ್ಗೆ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ದೂರು ನೀಡಲಾಗಿದೆ. ಘಟನೆ ಸಂಬಂಧ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

 ಹಲ್ಲೆ ಪ್ರಕರಣ

ದಿನಾಂಕ 23/09/2018ರಂದು ಕುಶಾಲನಗರ ಬಳಿಯ ಬಸವನತ್ತೂರು ಗ್ರಾಮದ ನಿವಾಸಿಗಳಾದ ಅಣ್ಣಾಜಿ ಹಾಗೂ ಅವರ ಸೋದರರು ಆಸ್ತಿಯ ಹಂಚಿಕೆ ಬಗ್ಗೆ ಸರ್ವೆ ಕಾರ್ಯ ಮಾಡಿದ್ದು ನಂತರ ಅಣ್ಣಾಜಿಯವರ ಓರ್ವ ಸೋದರ ವೆಂಕಟೇಶ್‌ರವರು ಅವರಿಗೆ ಆಸ್ತಿಯಲ್ಲಿ ಹೆಚ್ಚಿನ ಪಾಳು ಬಂದಿಲ್ಲವೆಂಬುದಾಗಿ ಜಗಳವಾಡಿ ಅಣ್ಣಾಜಿಯವರ ಮೇಲೆ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಮರದ ಕೊಂಬೆ ಬಿದ್ದು ವ್ಯಕ್ತಿ ಸಾವು

ದಿನಾಂಕ 09/06/2018ರಂದು ಮರಗೋಡು ಬಳಿಯ ಹೊಸ್ಕೇರಿಯ ಚಿಲಿಪಿಲಿ ಈಶ್ವರ ದೇವಸ್ಥಾನದ ಅರ್ಚಕ ಕೀರ್ತಿ ಭಟ್ ಎಂಬವರು ಹೊಸ್ಕೇರಿಯಿಂದ ಹಾಲು ತೆಗೆದುಕೊಂಡು ಅವರ ಸ್ಕೂಟರಿನಲ್ಲಿ ಮನೆಗೆ ಬರುತ್ತಿರುವಾಗ ದಾರಿ ಮಧ್ಯೆ ಬಿದ್ದಿದ್ದ ಮರದ ಕೊಂಬೆಯನ್ನು ತೆಗೆಯುತ್ತಿರುವಾಗ ಮತ್ತೊಂದು ಮರದ ಕೊಂಬೆ ಅವರ ಮೇಲೆ ಬಿದ್ದು ಗಾಯಗೊಂಡ ಕೀರ್ತಿ ಭಟ್‌ರವರನ್ನು ಚಿಕಿತ್ಸೆಗಾಗಿ ಮಂಗಳುರಿನ ವೆನ್‌ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೀರ್ತಿ ಭಟ್‌ರವರು ದಿನಾಂಕ 22/09/2018ರಂದು ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.