Crime News

ಸ್ಕೂಟರ್-ಬೈಕ್ ಮುಖಾಮುಖಿ ಡಿಕ್ಕಿ:

ಸ್ಕೂಟರ್ ಮತ್ತು ಮೋಟಾರ್ ಸೈಕಲ್ ಮುಖಾಮುಖಿ ಡಿಕ್ಕಿಯಾಗಿ ಶಾಲಾ ಶಿಕ್ಷಕಿಯೊಬ್ಬರು ಗಾಯಗೊಂಡ ಘಟನೆ ಸೋಮವಾರಪೇಟೆ ಸಮೀಪದ ಕಾವಡಿಕಟ್ಟೆ ಎಂಬಲ್ಲಿ ನಡೆದಿದೆ. ಶ್ರೀಮತಿ ಎಂ.ಜೆ. ಅಣ್ಣಮ್ಮ, ಶಿಕ್ಷಕಿ, ಸೋಮವಾರಪೇಟೆ ರವರು ದಿನಾಂಕ 26-9-2018 ರಂದು ಬೆಳಗ್ಗೆ ತಮ್ಮ ಬಾಪ್ತು ಸ್ಕೂಟರ್‍ ನಲ್ಲಿ ಶಾಲೆಗೆ ಹೋಗುತ್ತಿದ್ದಾಗ ಕಾವಾಡಿಕಟ್ಟೆ ಎಂಬಲ್ಲಿ ಎದುರುಗಡೆಯಿಂದ ಬಂದ ಮೋಟಾರ್ ಸೈಕಲೊಂದು  ಶ್ರೀಮತಿ ಎಂ.ಜೆ. ಅಣ್ಣಮ್ಮ ರವರ ಚಲಾಯಿಸುತ್ತಿದ್ದ ಸ್ಕೂಟರಿಗೆ ಡಿಕ್ಕಿಯಾದ ಪರಿಣಾಮ ಸದರಿ ಅಣ್ಣಮ್ಮನವರು ಗಾಯಗೊಂಡಿದ್ದು, ಈ ಸಂಬಂಧ ಅವರ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕತ್ತಿಯಿಂದ ಕಡಿದು ವ್ಯಕ್ತಿಯ ಕೊಲೆಗೆ ಯತ್ನ:

ಪಿರಿಯಾಪಟ್ಟಣ ತಾಲೋಕಿನ ಅಬ್ಬಳ್ತಿ ಗ್ರಾಮದ ನಿವಾಸಿ ಜೆ.ಎ. ಪುಟ್ಟ ಎಂಬವರ ಮಗ ಅಶೋಕ ಎಂಬವರು ತನ್ನ ಸಂಬಂಧಿ ಅಣ್ಣಪ್ಪ ಎಂಬವರೊಂದಿಗೆ ಕೊಡಗು ಜಿಲ್ಲೆಯ ಕೂಡಿಗೆಗೆ ಕೂಲಿ ಕೆಲಸಕ್ಕೆ ಬಂದಿದ್ದು  ಅವರು ತಿತಿಮತಿಯ ದೊಡ್ಡರೇಷ್ಮೆ ಎಂಬಲ್ಲಿ ವಾಸವಾಗಿದ್ದು ದಿನಾಂಕ 23-9-2018 ರಂದು ರಾತ್ರಿ 9-15 ಗಂಟೆ ಸಮಯದಲ್ಲಿ ಅವರ ಪಕ್ಕದ ಮನೆಯಲ್ಲಿ ವಾಸವಿರುವ ಜೆ.ಕೆ. ಬೋಜಪ್ಪ ಎಂಬವರು ತನ್ನ ಪತ್ನಿಯೊಂದಿಗೆ ಅಶೋಕನು ಅಕ್ರಮ ಸಂಬಂಧ ಇಟ್ಟುಕೊಂಡಿರುವುದಾಗಿ ಜಗಳ ಮಾಡಿ ಅಶೋಕನನ್ನು ಕೊಲೆ ಮಾಡುವ ಉದ್ದೇಶದಿಂದ ಕತ್ತಿಯಿಂದ ತಲೆಯ ಭಾಗಕ್ಕೆ ಕಡಿದು ಗಂಭೀರ ಗಾಯಗೊಳಿಸಿದ್ದು ಈ ಸಂಬಂಧ ಜೆ.ಎ. ಪುಟ್ಟ ರವರು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.