Crime News

ರಸ್ತೆ ಅಪಘಾತ

ದಿನಾಂಕ 26/09/2018ರಂದು ಸಂಪಾಜೆ ಬಳಿಯ ಕೊಯನಾಡು ಗ್ರಾಮದ ರಸ್ತೆಯಲ್ಲಿ ಕೆಎ-19-ಎಂಬಿ-3211 ಸಂಖ್ಯೆಯ ಕಾರನ್ನು ಅದರ ಚಾಲಕ ಮಡಿಕೇರಿ ಕಡೆಯಿಂದ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ರಸ್ತೆ ಬದಿಯ ಮೋರಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರು ಸಂಪೂರ್ಣ ಸುಟ್ಟು ಹೋಗಿ ಗಾಯಾಳು ಚಾಲಕನನ್ನು ಸಾರ್ವಜನಿಕರು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 ಪಾದಚಾರಿಗೆ ಸ್ಕೂಟರ್ ಡಿಕ್ಕಿ

ದಿನಾಂಕ 26/09/2018ರಂದು ಮಡಿಕೇರಿ ನಗರದ ಸುಬ್ರಮಣ್ಯ ನಗರ ನಿವಾಸಿ ಕೆ.ಎಂ.ರಾಜು ಎಂಬವರು ನಗರದ ಪತ್ರಿಕಾ ಭವನದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಹಿಂದಿನಿಂದ ಒಂದು ಸ್ಕೂಟರ್ ಅನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಕೆ.ಎಂ.ರಾಜುರವರಿಗೆ ಡಿಕ್ಕಿಪಡಿಸಿ ನಿಲ್ಲಿಸದೆ ಹೋಗಿದ್ದು ರಾಜುರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 ಸ್ಕೂಟರಿಗೆ ಕಾರು ಡಿಕ್ಕಿ

ದಿನಾಂಕ 23/09/2018ರಂದು ವಿರಾಜಪೇಟೆ ಬಳಿಯ ಕದನೂರು ನಿವಾಸಿ ಪಿ.ಸಿ.ನಾಣಯ್ಯ ಎಂಬವರು ಅವರ ಸ್ಕೂಟರಿನಲ್ಲಿ ಕೈಕೇರಿಗೆ ಹೋಗುತ್ತಿರುವಾಗ ಮುಂದೆ ಹೋಗುತ್ತಿದ್ದ ಒಂದು ಟಾಟಾ ಸುಮೋ ಕಾರಿನ ಚಾಲಕನು ಯಾವುದೇ ಸೂಚನೆ ನೀಡದೆ ಏಕಾ ಏಕಿ ಬ್ರೇಕ್ ಹಾಕಿ ಕಾರನ್ನು ನಿಲ್ಲಿಸಿದ ಪರಿಣಾಮ ಹಿಂದೆ ಹೋಗುತ್ತಿದ್ದ ನಾಣಯ್ಯನವರ ಸ್ಕೂಟರ್ ಕಾರಿಗೆ ಡಿಕ್ಕಿಯಾಗಿ ನಾಣಯ್ಯನವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.