Crime News

ನೀರಿಗೆ ಬಿದ್ದು ವ್ಯಕ್ತಿ ಸಾವು:

ಮದ್ಯವನ್ನು ಸೇವಿಸಿದ ವ್ಯಕ್ತಿಯೋರ್ವ ಕೆರೆಗೆ ಬಿದ್ದು ಸಾವನಪ್ಪಿದ ಘಟನೆ ವಿರಾಜಪೇಟೆ ಸಮೀಪದ ಅಮ್ಮತ್ತಿ ಕಾರ್ಮಾಡು ಗ್ರಾಮದಲ್ಲಿ ನಡೆದಿದೆ. ಅಮ್ಮತ್ತಿ ಕಾರ್ಮಾಡು ಗ್ರಾಮದ ನಿವಾಸಿ ಅಗಸ್ಟಿನ್ ಎಂಬವರ ತಂದೆ ಪ್ರಾಯ 75 ವರ್ಷದ ಪೀಟರ್ ರೋಡ್ರಿಗಸ್ ಎಂಬವರಿಗೆ ಮದ್ಯಪಾನ ಮಾಡುವ ಚಟವಿದ್ದು, ದಿನಾಂಕ 27-8-2018 ರಂದು ರಾತ್ರಿ ಸದರಿಯವರು ಮದ್ಯ ಸೇವಿಸಿ ತಮ್ಮ ಮನೆಯ ಪಕ್ಕದಲ್ಲಿರುವ ಕೆರೆಯ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಕೆರೆಯ ನೀರಿಗೆ ಬಿದ್ದು ಸಾವನಪ್ಪಿದ್ದು, ಈ ಸಂಬಂಧ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಹಣದ ವಿಚಾರದಲ್ಲಿ ಜಗಳ ಹಲ್ಲೆ:

ವಿರಾಜಪೇಟೆ ತಾಲೋಕು ಕದನೂರು ಗ್ರಾಮದ ನಿವಾಸಿ ಎ.ಟಿ. ಗಣಪತಿ ಎಂಬವರಿಗೆ ಜಯ ಎಂಬ ವ್ಯಕ್ತಿ ಸಿಲ್ವರ್ ಮರ ಕೆಲಸ ಮಾಡಿದ ಬಾಪ್ತು ಹಣ ಕೊಡಗು ಬಾಕಿ ಇದ್ದು, ದಿನಾಂಕ 27-9-2018 ರಂದು ಸದರಿ ಹಣವನ್ನು ಕೊಡುವಂತೆ ಎ.ಟಿ. ಗಣಪತಿಯವರು ಜಯನವರೊಂದಿಗೆ ಕೇಳಿದ ವಿಚಾರದಲ್ಲಿ ಅವರ ಇಬ್ಬರ ನಡುವೆ ಜಗಳ ಏರ್ಪಟ್ಟು ಜಯ ಹಾಗು ಅವರ ಜೊತೆಯಲ್ಲಿದ್ದ ಕಿರಣ ಮತ್ತು ಲೋಹಿತ್ ರವರುಗಳು ಸೇರಿ ಎ.ಟಿ.ಗಣಪತಿಯವರ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿ ಗಾಯಪಡಿಸಿದ್ದು ಅಲ್ಲದೆ ಕೊಲೆ ಬೆದರಿಕಿ ಒಡ್ಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಪತ್ನಿ ಮೇಲೆ ಪತಿಯಿಂದ ಹಲ್ಲೆ:

ಸುಂಟಿಕೊಪ್ಪ ಪೊಲೀಸ್ ಠಾಣಾ ಸರಹದ್ದಿನ 7ನೇ ಮೈಲು ಕೆದಕಲ್ ಗ್ರಾಮದ ನಿವಾಸಿ ಜೀತನ್ ರವರು ತನ್ನ ಗಂಡ ಆಲಿ ಮತ್ತು ಮಕ್ಕಳೊಂದಿಗೆ ವಾಸವಾಗಿದ್ದು, ದಿನಾಂಕ 27-9-2018 ರಂದು ರಾತ್ರಿ 8-30 ಗಂಟೆಗೆ ಅವರ ಗಂಡ ಆಲಿ ಮದ್ಯಪಾನ ಮಾಡಿಕೊಂಡು ಮನೆಗೆ ಬಂದು ವಿನಾಕಾರಣ ಗಲಾಟೆ ಮಾಡಿದ್ದು ಅಲ್ಲದೆ ಪತ್ನಿ ಜೀತನ್ ಮೇಲೆ ಮತ್ತು ಅವರ ಮಕ್ಕಳ ಮೇಲೆ ಹಲ್ಲೆ ನಡೆಸಿ, ಕೊಲೆ ಮಾಡುವುದಾಗಿ ಜೀವ ಬೆದರಿಕೆ ಒಡ್ಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕಳುವಾಗಿದ್ದ ಬೈಕ್ ಪತ್ತೆ:

ಸಕಲೇಶಪುರ ನಗರ ಪೊಲೀಸ್ ಠಾಣಾ ಪಿ.ಎಸ್.ಐ, ರವರು ಸದರಿ ಠಾಣೆಯಲ್ಲಿ ದಾಖಲುಗೊಂಡ ಕಳ್ಳತನ ಪ್ರಕರಣದಲ್ಲಿ ನಡೆಸಿದ ತನಖೆಯ ಸಂದರ್ಭದಲ್ಲಿ ಕೊಡಗು ಜಿಲ್ಲೆಯ ಶನಿವಾರಸಂತೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ ಮೋಟಾರ್ ಸೈಕಲನ್ನು ಆರೋಪಿ ಸ್ವಾಮಿ ಎಂಬವರಿಂದ ವಶ ಪಡೆದುಕೊಂಡಿದ್ದು,  ಅದಕ್ಕೆ ಸಂಬಂಧಿಸಿದಂತೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಶನಿವಾರಸಂತೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಹಲ್ಲೆಗೊಳಗಾದ ವ್ಯಕ್ತಿ ಸಾವು:

ಪಿರಿಯಾಪಟ್ಟಣ ತಾಲೋಕಿನ ಅಬ್ಬಳ್ತಿ ಗ್ರಾಮದ ನಿವಾಸಿ ಜೆ.ಎ. ಪುಟ್ಟ ಎಂಬವರ ಮಗ ಅಶೋಕ ಎಂಬವರು ತನ್ನ ಸಂಬಂಧಿ ಅಣ್ಣಪ್ಪ ಎಂಬವರೊಂದಿಗೆ ಕೊಡಗು ಜಿಲ್ಲೆಯ ಕೂಡಿಗೆಗೆ ಕೂಲಿ ಕೆಲಸಕ್ಕೆ ಬಂದಿದ್ದು  ಅವರು ತಿತಿಮತಿಯ ದೊಡ್ಡರೇಷ್ಮೆ ಎಂಬಲ್ಲಿ ವಾಸವಾಗಿದ್ದು ದಿನಾಂಕ 23-9-2018 ರಂದು ರಾತ್ರಿ 9-15 ಗಂಟೆ ಸಮಯದಲ್ಲಿ ಅವರ ಪಕ್ಕದ ಮನೆಯಲ್ಲಿ ವಾಸವಿರುವ ಜೆ.ಕೆ. ಬೋಜಪ್ಪ ಎಂಬವರು ತನ್ನ ಪತ್ನಿಯೊಂದಿಗೆ ಅಶೋಕನು ಅಕ್ರಮ ಸಂಬಂಧ ಇಟ್ಟುಕೊಂಡಿರುವುದಾಗಿ ಜಗಳ ಮಾಡಿ ಅಶೋಕನನ್ನು ಕೊಲೆ ಮಾಡುವ ಉದ್ದೇಶದಿಂದ ಕತ್ತಿಯಿಂದ ತಲೆಯ ಭಾಗಕ್ಕೆ ಕಡಿದು ಗಂಭೀರ ಗಾಯಗೊಳಿಸಿದ್ದು, ಗಾಯಾಳು ಅಶೋಕನನ್ನು ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿ ಅದರ ಸಂಬಂಧ ಜೆ.ಎ. ಪುಟ್ಟ ರವರು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಕೊಲೆಗೆ ಯತ್ನ ಪ್ರಕರಣ ದಾಖಲಾಗಿತ್ತು. ಚಿಕೆತ್ಸೆ ಪಡೆಯುತ್ತಿದ್ದ ಅಶೋಕ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 27-9-2018 ರಂದು ಮೃತಪಟ್ಟ ಹಿನ್ನೆಲೆಯಲ್ಲಿ ಸಿದ್ದಾಪುರ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.