Crime News

ವ್ಯಕ್ತಿಯ ಮೇಲೆ ಹಲ್ಲೆ

ದಿನಾಂಕ 28-09-2018 ರಂದು ಸೋಮವಾರಪೇಟೆ ನಗರದ ಬಸ್ಸು ನಿಲ್ದಾಣದಲ್ಲಿರುವ ಹಣ್ಣಿನ ಅಂಗಡಿಗೆ ನಗರದ ರೇಂಜರ್ ಬ್ಲಾಕ್ ನಿವಾಸಿ ನವೀನ ತನ್ನ ಇಬ್ಬರು ಸ್ನೇಹಿತರೊದಿಗೆ ಹೋಗಿ ಕೇಳದೇ ಹಣ್ಣು ತೆಗೆದುಕೊಂಡು ತಿನ್ನುತ್ತಿದ್ದವನನ್ನು ಅಂಗಡಿ ಮಾಲಿಕರಾದ ದೇವರಾಜುರವರು ವಿಚಾರಿಸಿದಾಗ ಮಾತಿಗೆ ಮಾತು ಬೆಳೆದು ಉಭಯ ಕಡೆಯವವರು ಹಲ್ಲೆ ಮಾಡಿಕೊಂಡಿದ್ದು ಈ ಬಗ್ಗೆ ಸೋಮವಾರಪೇಟೆ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿರುತ್ತದೆ.

ವಿದ್ಯುತ್ ತಂತಿ ತಗುಲಿ ಬಾಲಕನ ಸಾವು

ದಿನಾಂಕ 29-09-2018 ರಂದು ವಿರಾಜಪೇಟೆ ತಾಲೂಕಿನ ಕಣ್ಣಂಗಾಲ ಗ್ರಾಮದ ಶಶಿಕುಮಾರ್ರವರ 6 ವರ್ಷ ಪ್ರಾಯದ ಮಗ ಕಾಶಿಯಪ್ಪ ಎಂಬುವವನಿಗೆ ರಸ್ತೆಯ ಬದಿಯಲ್ಲಿದ್ದ ಸರ್ವಿಸ್ ವಯರ್ ನ ತಂತಿ ತಗುಲಿ ಮೃತಪಟ್ಟಿದ್ದು ಈ ಬಗ್ಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಪರಿಚಿತ ಮಹಿಳೆಯ ಸಾವು

ಕುಟ್ಟ ಠಾಣಾ ಸರಹದ್ದಿನ ನಾಥಂಗಲ್ ಎಂಬಲ್ಲಿ ಮಾನಸಿಕ ಅಸ್ವಸ್ಥಳಾಗಿ ಭಿಕ್ಷೆ ಬೇಡುತ್ತಾ ಇದ್ದ ಚೋಮಿಯವರು ದಿನಾಂಕ 18-09-2018 ರಂದು ನಾಥಂಗಲ್ ಗೆ ಹೋಗುವ ರಸ್ತೆ ಬದಿಯಲ್ಲಿ ನಿತ್ರಾಣವಾಗಿ ಬಿದ್ದಿದ್ದವರನ್ನು ಕುಟ್ಟ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಯ ಬಗ್ಗೆ ಸೇರಿದ್ದು, ಚಿಕಿತ್ಸೆ ಫಲಕಾರಿಯಾಗದೇ ಇವರು ಮೃತಪಟ್ಟಿದ್ದು, ಇವರ ವಿಳಾಸ ತಿಳಿಯದೇ ಇದ್ದು, ಈ ಬಗ್ಗೆ ಕುಟ್ಟ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಪಘಾತ ಪ್ರಕರಣ

ದಿನಾಂಕ 29-09-2018 ರಂದು ಮಡಿಕೇರಿ ನಗರದ ಬಿ.ಸಿ ಶಂಕರ್ ರಸ್ತೆಯಲ್ಲಿ ನಾಗೇಶ್ ಎಂಬುವವರು ಕೆ.ಇ.ಬಿ ಗುತ್ತಿಗೆದಾರರಾದ ರಾಜರವರ ಜೊತೆಯಲ್ಲಿ ವಿದ್ಯುತ್ ಕಂಬವನ್ನು ಕ್ರೇನ್ ಮೂಲಕ ಸಾಗಿಸುತ್ತಿರುವಾಗ ಕ್ರೇನ್ ನ ಚಾಲಕ ಪ್ರೇಮ್ ಕ್ರಾಸ್ತರವರು ನಿರ್ಲಕ್ಷ ತನದಿಂದ ಕ್ರೇನ್ ಚಾಲನೆ ಮಾಡಿ ಶಂಕರ್ ರವರ ಪಾದ ಮೇಲೆ ಚಕ್ರ ಹತ್ತಿಸಿದ ಪರಿಣಾಮ ಗಾಯವಾಗಿದ್ದು ಈ ಬಗ್ಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರರಕಣ ದಾಖಲಾಗಿರುತ್ತದೆ.

ಹಲ್ಲೆ ಪ್ರಕರಣ

ದಿನಾಂಕ 29-09-2018 ರಂದು ಮಡಿಕೇರಿ ತಾಲೂಕಿನ ಎಮ್ಮೆಮಾಡು ಗ್ರಾಮದ ನಿವಾಸಿಯಾದ ಅಬ್ದುಲ್ ರಶೀದ್ ಎಂಬುವವರು ಪಿಕ್ ಅಪ್ ಜೀಪಿನಲ್ಲಿ ಮನೆಗೆ ಹೋಗುತ್ತಿರುವಾಗ ಅದೇ ಗ್ರಾಮದ ನಿವಾಸಿಗಳಾದ ಹನೀಫ, ಸುಬೈರ್, ಗಫೂರ್ ಹಾಗೂ ಮಮ್ಮದ್ ರವರು ಹಳೇ ದ್ವೇಷದಿಂದ ಜಗಳ ಮಾಡಿ ಹಲ್ಲೆ ನಡೆಸಿದ್ದು ಈ ಬಗ್ಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.