Crime News

ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ:

ಜೀವನದಲ್ಲಿ ಜಿಗುಪ್ಸೆಗೊಂಡು ವ್ಯಕ್ತಿಯೊಬ್ಬರು ಕಳೆನಾ಼ಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಪಿ.ಪೆರಾಜೆ ಗ್ರಾಮದಲ್ಲಿ ನಡೆದಿದೆ. ಪಿ. ಪೆರಾಜೆ ಗ್ರಾಮದ ನಿವಾಸಿ ಶ್ರೀಮತಿ ಪಿ. ಉಷಾ ಎಂಬವರ ಪತಿ ಪಿ. ರಾಜೇಶ್ ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 25-9-2018 ರಂದು ಕಳೆನಾಶಕವನ್ನು ಸೇವಿಸಿ ಅಸ್ವಸ್ಥಗೊಂಡವರನ್ನು ಮಂಗಳೂರಿನ ಎ.ಜೆ. ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಸದರಿಯವರು ದಿನಾಂಕ 30-9-2018 ರಂದು ಮೃತಪಟ್ಟಿದ್ದು, ಈ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಗನಿಂದ ತಂದೆ ಮೇಲೆ ಹಲ್ಲೆ:

ನಾಪೋಕ್ಲು ಪೊಲೀಸ್ ಠಾಣಾ ಸರಹದ್ದಿನ ಎಡಪಾಲ ಬಾವಲಿ ಗ್ರಾಮದ ನಿವಾಸಿ ಕೆ.ಎಂ. ಹುಸೇನಾರ್ ಎಂಬವರು ದಿನಾಂಕ 26-9-2018 ರಂದು ಸಂಜೆ 7-30 ಗಂಟೆಗೆ ಕೂಲಿ ಕೆಲಸ ಮುಗಿಸಿ ಮನೆಗೆ ಹೋದಾಗ ಮದ್ಯಪಾನ ಮಾಡಿದ ವಿಚಾರದಲ್ಲಿ ತನ್ನ ಪತ್ನಿ ಹಾಗು ಮಗ ಜಗಳ ಮಾಡಿದ್ದು, ಮಗ ಶಕೀರ್ ತಂದೆ ಕೆ.ಎಂ. ಹುಸೇನಾರ್ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿ ಗಾಯಪಡಿಸಿದ್ದು ಗಾಯಾಳುವನ್ನು ಮಂಗಳೂರಿನ ವೆನ್‍ಲಾಕ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದ್ದು, ಈ ಸಂಬಂಧ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಶ್ರೀಗಂಧದ ಮರ ಕಳವು:

ದಿನಾಂಕ 29-9-2018 ರಂದು ರಾತ್ರಿ ಸೋಮವಾರಪೇಟೆಯ ಪ್ರಧಾನ ಸಿವಿಲ್ ನ್ಯಾಯಾಲಯದ ಆವರಣದಲ್ಲಿದ್ದ ಶ್ರೀಗಂಧದ ಮರವನ್ನು ಯಾರೋ ಕಳ್ಳರು ಗರಗಸದಿಂದ ಬುಡಸಮೇತ ಕತ್ತರಿಸಿ ಕಳ್ಳತನ ಮಾಡಿಕೊಂಡು ಹೋಗಿದ್ದು ಈ ಸಂಬಂಧವಾಗಿ ನ್ಯಾಯಾಲಯದಲ್ಲಿ ಕರ್ತವ್ಯ ನಿರ್ವಹಿಸಿಕೊಂಡಿರುವ ದಫೇದಾರ್ ಹೆಚ್.ಎಸ್‍.ಸುಧೀರ್ ರವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿಯ ಕೊಲೆಗೆ ಯತ್ನ ಪ್ರಕರಣ ದಾಖಲು:

ಸೋಮವಾರಪೇಟೆ ನಗರದ ಲೋಡರ್ಸ್ ಕಾಲೋನಿ ನಿವಾಸಿ ಕೆ.ಡಿ. ಸುರೇಶ್ ರವರು ಚಕ್ರವರ್ತಿ ಬಸ್ಸಿನ ಮಾಲೀಕರಾಗಿದ್ದು ದಿನಾಂಕ 29-9-2018 ರಂದು ರಾತ್ರಿ 7-30 ಗಂಟೆ ಸಮಯದಲ್ಲಿ ತಮ್ಮ ಬಾಪ್ತು ಸ್ಕೂಟರ್ ನಲ್ಲಿ ಹೋಗುತ್ತಿದ್ದಾಗ ಹಿಂದಿನಿಂದ ಬಂದ ಜೀಪಿನ ಚಾಲಕ ಕೆ.ಡಿ. ಸುರೇಶ್ ರವರನ್ನು ಕೊಲೆ ಮಾಡುವುದ ಉದ್ದೇಶದಿಂದ ಜೀಪನ್ನು ಸ್ಕೂಟರಿಗೆ ಡಿಕ್ಕಿಪಡಿಸಿ ಕೆ.ಡಿ. ಸುರೇಶ್‍ರವರು ಸ್ಕೂಟರಿನಿಂದ ಬಿದ್ದಾಗ 4-5 ಬಾರಿ ಸದರಿ ಸ್ಕೂಟರಿಗೆ ಜೀಪಿನಿಂದ ಗುದ್ದಿ ಕೊಲೆ ಮಾಡಲು ಯತ್ನಿಸಿದಾಗ ಕೆ.ಡಿ. ಸುರೇಶ್ ರವರು ಅವರಿಂದ ತಪ್ಪಿಸಿಕೊಂಡು ಓಡಿ ಹೋಗುತ್ತಿದ್ದಾಗ 4 ಮಂದಿ ದೊಣ್ಣೆಗಳನ್ನು ಕೈಯಲ್ಲಿ ಹಿಡಿದುಕೊಂಡು ಬಂದಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಕೇರಳ ಲಾಟರಿ ಮಾರಾಟ ಪತ್ತೆ:

ಕೇರಳ ರಾಜ್ಯದ ಲಾಟರಿ ಟಿಕೇಟುಗಳನ್ನು ಅಕ್ರಮವಾಗಿ ಕೊಡಗು ಜಿಲ್ಲೆಯ ವಿವಿಧಕಡೆಗಳಲ್ಲಿ ಮಾಟಾಟ ಮಾಡುತ್ತಿರುವ ಜಾಲವನ್ನು  ಜಿಲ್ಲಾ ಡಿ.ಸಿ.ಐ.ಬಿ. ಮತ್ತು ಸುಂಟಿಕೊಪ್ಪ ಪೊಲೀಸರು ಪತ್ತೆಹಚ್ಚಿ ಆರೋಪಿಗಳನ್ನು ಬಂಧಿ ಖಚಿತ ವರ್ತಮಾನದ ಮೇರೆಗೆ ಜಿಲ್ಲಾ ಡಿ.ಸಿ.ಐ.ಬಿ. ಘಟಕದ ಪೊಲೀಸ್ ನಿರೀಕ್ಷಕರಾದ ಎಂ. ಮಹೇಶ್‍ರವರ ನೇತೃತ್ವದ ತಂಡ ಸುಂಟಿಕೊಪ್ಪ ಠಾಣಾಧಿಕಾರಿ ಎಸ್‍.ಎನ್. ಜಯರಾಂ ಮತ್ತು ಸಿಬ್ಬಂದಿಯೊಂದಿಗೆ  ದಿನಾಂಕ 30-9-2018 ರಂದು ದಾಳಿ ಮಾಡಿ ಸುಂಟಿಕೊಪ್ಪ ನಗರದ 1ನೇ ಬ್ಲಾಕಿನಲ್ಲಿರುವ ಸಲೀಂ ಎಂಬವರ ಮನೆಯಲ್ಲಿ ಅಕ್ರಮವಾಗಿ ಕೊಡಗಿನ ವಿವಿಧ ಕಡೆಗಳಲ್ಲಿ ಮಾರಾಟ ಮಾಡಲು ಇಟ್ಟಿದ್ದ 3,17,570 ರೂಲ ಮೌಲ್ಯದ ಕೇರಳ ರಾಜ್ಯದ ಲಾಟರಿ ಟಿಕೇಟುಗಳನ್ನು ವಶಕ್ಕೆ ಪಡೆದುಕೊಂಡು ಆರೋಪಿಗಳಾದ ಸಲೀಂ, 1ನೇ ಬ್ಲಾಕ್, ಸುಂಟಿಕೊಪ್ಪ, ಮೂಸ, 7ನೇ ಹೊಸಕೋಟೆ, ಸುಂಟಿಕೊಪ್ಪ ಮತ್ತು ದೇವರಾಜು, ನೇ ಹೊಸಕೋಟೆ ಸುಂಟಿಕೊಪ್ಪ ರವರನ್ನು ಬಂಧಿಸಿ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಬಾರ್ ರೆಷ್ಟೋರೆಂಟ್ ನಲ್ಲಿ ಗಲಾಟೆ:

ಗುಂಪೊಂದು ಬಾರಿನಲ್ಲಿ ಊಟ ಸರಿಯಿಲ್ಲ ಎಂದು ಕ್ಯಾಷಿಯರ್ ಮತ್ತು ಬಾರ್ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿದ ಘಟನೆ ಪೊನ್ನಂಪೇಟೆಯಲ್ಲಿರುವ ದುರ್ಗ ಬೋಜಿ ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ನಡೆದಿದೆ. ದಿನಾಂಕ 30-09-2019 ರಂದು ಮಧ್ಯಾಹ್ನ 3-00 ಗಂಟೆಗೆ ಪೊನ್ನಂಪೇಟೆಯಲ್ಲಿರುವ ದುರ್ಗ ಬೋಜಿ ಬಾರ್ ಅಂಡ್ ರೆಸ್ಟೋರೆಂಟ್ ಗೆ ಟಿ.ಶೆಟ್ಟಿಗೇರಿ ಗ್ರಾಮದ ನಿವಾಸಿಗಳಾದ ಉದಯ, ಮುಕೇಶ್, ನಂದ, ವಿವೇಕ ಮತ್ತು ಇತರರು ಬಂದು ಮದ್ಯಪಾನ ಮಾಡಿ ಊಟಕ್ಕೆ ಆರ್ಡರ್ ಮಾಡಿ ಊಟ ಸರಿಯಿಲ್ಲವೆಂದು ಜಗಳ ಮಾಡಿ ಕ್ಯಾಷ್ ಕೌಂಟರಿನಲ್ಲಿದ್ದ ಕೆ.ಸಿ. ಸುಜನ್ ಎಂಬವರನ್ನು ಎಳೆದು ಅವಾಚ್ಯ ಶಬ್ದಗಳಿಂದ ಬೈದು ಕೈಗಳಿಂದ ಮತ್ತು ಕಾಲಿನಿಂದ ಹಲ್ಲೆ ನಡೆಸಿದ್ದು ಅಲ್ಲದೆ ಬಾರಿನಲ್ಲಿ ಕೆಲಸ ಮಾಡುತ್ತಿದ್ದ ಉಣ್ಣಿಕೃಷ್ಣ ಮತ್ತು ಅನಿಲ್ ಎಂಬವರ ಮೇಲೂ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.