Crime News

ಸಹಕಾರ ಸಂಘದ ಹಣ ದುರುಪಯೋಗ:

ಕುಶಾಲನಗರ ಪಟ್ಟಣದ ಕಾರು ಮಾಲೀಕರ ಮತ್ತು ಚಾಲಕರ ವಿವಿದ್ದೋದೇಶ ಸಹಕಾರ ಸಂಘಕ್ಕೆ ಎಂ.ಎನ್. ಕರುಣಾಕರ ಎಂಬವರು ಪ್ರಸ್ತುತ ಅಧ್ಯಕ್ಷರಾಗಿದ್ದು ಹಿಂದೆ 2013 ರಿಂದ 2018ರ ವರೆಗೆ ಅಧ್ಯಕ್ಷರಾಗಿದ್ದ ಹೆಚ್.ಎನ್. ರಾಮಚಂದ್ರ ಮತ್ತು ಅಗ ಿದ್ದ ಹಂಗಾಮಿ ವ್ಯವಸ್ಥಾಪಕರಾಗಿದ್ದ ಜಿ.ಟಿ. ರೋಹಿತ್ ಮತ್ತು ಹಂಗಾಮಿ  ಗುಮಾಸ್ತರಾಗಿದ್ದ ವಿ. ಅಕ್ಷಯ ಎಂಬವರುಗಳು ಸೇರಿ ಸಂಘದ ಹಣದಲ್ಲಿ ರೂ.1,13,35,871/- ಗಳನ್ನು ದುರುಪಯೋಗಪಡಿಸಿ ಸಂಘಕ್ಕೆ ವಂಚಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಕುಶಾಲನಗರ ಪಟ್ಟಣ ಠಾಣೆಯಲ್ಲಿ  ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕತ್ತಿಯಿಂದ ಕಡಿದು ಕೊಲೆಗೆ ಯತ್ನ:

ಸೋಮವಾರಪೇಟೆ ಪೊಲೀಸ್ ಠಾಣಾ ಸರಹದ್ದಿನ ಕುಂಬೂರು ಗ್ರಾಮದ ಪಿ. ವಿನೋದ್ ಎಂಬವರ ತಾಯಿಯೊಂದಿಗೆ ಅದೇ ಗ್ರಾಮದ ವಿನು ನಾಣಯ್ಯ ಎಂಬವರು 2017ನೇ ಇಸವಿಯಲ್ಲಿ ಜಗಳ ಮಾಡಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿ ವಿಚಾರಣೆಯಲ್ಲಿದ್ದು, ಅದೇ ವಿಚಾರದಲ್ಲಿ ವಿನು ನಾಣಯ್ಯನವರು ಪಿ.ವಿನೋದ್‍ರವರೊಂದಿಗೆ ಜಗಳ ಮಾಡುತ್ತಿದ್ದು ದಿನಾಂಕ 3-10-2018 ರಂದು 4-30 ಗಂಟೆಯ ಸಮಯದಲ್ಲಿ ಕುಂಬುರು ಗ್ರಾಮದ ಆಟೋ ನಿಲ್ದಾಣದಲ್ಲಿ ಪಿ. ವಿನೋದ್‍ರವರು ನಿಂತಿದ್ದ ಸಂದರ್ಭದಲ್ಲಿ ಅಲ್ಲಿಗೆ ಬಂದ ವಿನು ನಾಣಯ್ಯನವರು ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಮಾಡುವ ಉದ್ದೇಶದಿಂದ ಕತ್ತಿಯಿಂದ ಪಿ. ವಿನೋದ್ ರವರ ತಲೆಯ ಭಾಗಕ್ಕೆ ಗಾಯಪಡಿಸಿದ್ದು ಅಲ್ಲದೆ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ  ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಬಾಗಿಲು ಮುರಿದು ಕೋವಿ ಕಳವು:

ವಿರಾಜಪೇಟೆ ತಾಲೋಕು ಹೆಗ್ಗಳ ಗ್ರಾಮದ ನಿವಾಸಿ ಶ್ರೀಮತಿ ಬಲ್ಲಚಂಡ ಬೇಬಿ ಮೇದಪ್ಪ ಎಂಬವರ ಮಗ ಬಿ.ಎಂ. ಸೋಮಯ್ಯ @ ರತನ್ ಎಂಬವರು ದಿನಾಂಕ 26-8-18 ರಂದು ಮೃತಪಟ್ಟಿದ್ದು ಆ ದಿನ ಬಲ್ಲಚಂಡ ಬೇಬಿ ಮೇದಪ್ಪನವರು ಮನೆಯ ಹಿಂಬಾಗಿಲನ್ನು ಮುಚ್ಚಿ ಮುಂಬಾಗಿಲಿಗೆ ಬೀಗವನ್ನು ಹಾಕಿ ಕಂಡಂಗಾಲ ಗ್ರಾಮದಲ್ಲಿರುವ ಅವರ ಐನ್ ಮನೆಗೆ ಮಗನ ಶವಸಂಸ್ಕಾರಕ್ಕೆ ಹೋಗಿದ್ದು ದಿನಾಂಕ 28-8-2018 ರಂದು ಹಗ್ಗಳ ಗ್ರಾಮದದಲ್ಲಿರುವ ಅವರ ಮನೆಗೆ ಬಂದು ನೋಡಿದಾಗ ಯಾರೋ ಕಳ್ಳರು ಮನೆಯ ಹಿಂಬಾಗಿಲನ್ನು ಮುರಿದು ಮನೆಯೊಳಗೆ ಪ್ರವೇಶ ಮಾಡಿ ಮನೆಯಲ್ಲಿದ್ದ ಒಂದು ಒಂಟಿನಳಿಗೆಯ ಕೋವಿಯನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಅದರ ಬೆಲೆ ಅಂದಾಜು 4,500/- ಗಳಾಗಬಹುದೆಂದು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ:

ವಿರಾಜಪೇಟೆ ತಾಲೋಕು ಅಮ್ಮತ್ತಿ ಕಾರ್ಮಾಡು ಗ್ರಾಮದ ಲಿಯಾ ಡಿಸೋಜ ಎಂಬವರ ಮಗ ರೋಷನ್, ಪ್ರಾಯ 22 ವರ್ಷ ಈತ ದಿನಾಂಕ 3-10-2018 ರಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು ಈ ಸಂಬಂಧ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ರಮ ಜೂಜಾಟ:

ಅಕ್ರಮ ಇಸ್ಪೀಟ್ ಜೂಜಾಟ ನಡೆಸುತ್ತಿದ್ದವರ ಮೇಲೆ ಮಡಿಕೇರಿ ಗ್ರಾಮಾಂತರ ಪೊಲೀಸರು ದಾಳಿ ಮಾಡಿ ಪ್ರಕರಣ ದಾಖಲಿಸಿದ್ದಾರೆ.ದಿನಾಂಕ 3-10-2018 ರಂದು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ವಿ. ಚೇತನ್ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಠಾಣಾ ಸರಹದ್ದಿನ ಮರಗೋಡು ಗ್ರಾಮದ ಹುಲಿತಾಳದಲ್ಲಿರುವ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಹಣವನ್ನು ಪಣವನ್ನಾಗಿಟ್ಟುಕೊಂಡು ಜೂಜಾಟದಲ್ಲಿ ತೊಡಗಿದವರ ಮೇಲೆ ಪಿಎಸ್‍ಐ ವಿ. ಚೇತನ್ ಹಾಗು ಸಿಬ್ಬಂದಿಗಳು ದಾಳಿ ಮಾಡಿ ಅಕ್ರಮ ಜೂಜಾಟದಲ್ಲಿ ತೊಡಗಿದ್ದ ಆರೋಪಿಗಳಾದ ಹುಲಿತಾಳು ನಿವಾಸಿಗಳಾದ ಸುರೇಶ್, ಹೆಚ್.ಟಿ. ಹರೀಶ್, ಹೆಚ್.ಪಿ ಗಣೇಶ್, ಹೆಚ್.ಆರ್. ರವಿ ಮತ್ತು ಇತರನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಜರುಗಿಸಿದ್ದಾರೆ.

ಕ್ಷುಲ್ಲಕ ಕಾರಣ, ಹಲ್ಲೆ:

ಮಡಿಕೇರಿ ನಗರದ ಇಂದಿರಾನಗರದ ನಿವಾಸಿ ಶ್ರೀಮತಿ ವಿಶಾಲಾಕ್ಷಿಯವರು ದಿನಾಂಕ 3-10-2018 ರಂದು ಬೆಳಗ್ಗೆ ತಮ್ಮ ಮನೆಯ ಹಿಂದೆ ಸುಚಿತ್ವ ಕೆಲಸ ಮಾಡಿಕೊಂಡಿರುವಾಗ್ಗೆ ಅವರ ಪಕ್ಕದ ಮನೆಯ ವಾಸಿಗಳಾದ ಶ್ರೀಮತಿ ಹರಿಣಿ, ಆಕೆಯ ಗಂಡ ಪ್ರಭಾಕರ, ಮಗ ವಿಕಾಸ್  ಮತ್ತು ಮಗಳು ವಿದ್ಯಾರವರು ಸೇರಿ ಮನೆಯ ಹಿತ್ತಲಿನಲ್ಲಿ ಕಸವನ್ನು ಹಾಕುವ ವಿಚಾರದಲ್ಲಿ ಜಗಳ ಮಾಡಿ ಕತ್ತಿಯನ್ನು ಬೀಸಿ ಶ್ರೀಮತಿ ವಿಶಾಲಾಕ್ಷಿಯವರ ಸೊಂಟ ಹಾಗು ಬೆನ್ನಿನ ಭಾಗಕ್ಕೆ ಗಾಯಪಡಿಸಿದ್ದು ಅಲ್ಲದೆ ದೊಣ್ಣೆಯಿಂದ ಹಲ್ಲೆ ಮಾಡಿ ಗಾಯಪಡಿಸಿ ಕೊಲೆ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.