Crime News

ದರೋಡೆ ಪ್ರಕರಣ

ದಿನಾಂಕ 05-10-2018 ರಂದು ವಿರಾಜಪೇಟೆ ನಗರದಲ್ಲಿರುವ  ಅಂಚೆ ಕಚೇರಿಯಲ್ಲಿ ಪೋಸ್ಟ್ ಮಾಸ್ಟರ್ ಆಗಿ ಕೆಲಸ ಮಾಡುತ್ತಿರುವ ಕುಶಾಲನಗರದ ನಂಜುಂಡೇಶ್ವರ ಬಡಾವಣೆಯ ನಿವಾಸಿಯಾದ ಕೃಷ್ಣಪ್ಪ ಎಂಬುವವರು ಎಂದಿನಂತೆ ಕೆಲಸ ಮುಗಿಸಿ ತನ್ನ ಮನೆಗೆ ಕುಶಾಲನಗರದಲ್ಲಿರುವ ಸರ್ಕಾರಿ ಜೂನಿಯರ್ ಕಾಲೇಜು ರಸ್ತೆಯಲ್ಲಿ ಸಮಯ 7-00 ಪಿ ಎಂ ಗೆ ನಡೆದುಕೊಂಡು ಹೋಗುತ್ತಿರುವಾಗ ಹಿಂದಿನಿಂದ ದ್ವಿಚಕ್ರ ವಾಹನದಲ್ಲಿ ಇಬ್ಬರು ಬಂದವರು ಕೃಷ್ಣಪ್ಪನವರ ಕೈಯಲ್ಲಿದ್ದ ಬ್ಯಾಗನ್ನು ಕಿತ್ತುಕೊಂಡು ಹೋಗಿದ್ದು ಬ್ಯಾಗಿನಲ್ಲಿ 15,000 ರೂ ನಗದು, ಪಾಸ್ ಪುಸ್ತಕ, ಎ.ಟಿ.ಎಂ, ಅಂಚೆ ಕಚೇರಿಯ ದಾಖಲಾತಿಗಳು ಇದ್ದು, ಈ ಬಗ್ಗೆ ದಿನಾಂಕ 07-10-2018 ರಂದು ನೀಡಿದ ದೂರಿನ ಮೇರೆಗೆ ಕುಶಾಲನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಪಘಾತ ಪ್ರಕರಣ

          ದಿನಾಂಕ 07-10-2018 ರಂದು ಕುಶಾಲನಗರದ ಕೂಡುಮಂಗಳೂರುವಿನ ನಿವಾಸಿ ಕಿರಣ್ ರವರು ಮಂಜುರವರ ಆಟೋದಲ್ಲಿ ಕುಶಾಲನಗರದಿಂದ ಕೂಡುಮಂಗಳೂರುವಿಗೆ ಹೋಗುತ್ತಿರುವಾಗ ಕೂಡ್ಲೂರು ತಲುಪುವಾಗ ಕೂಡಿಗೆ ಕಡೆಯಿಂದ ಬಂದ ಲೋಬೋರವರು ಚಾಲನೆ ಮಾಡುತ್ತಿದ್ದ ಆಟೋವನ್ನು ಅಜಾಗರೂಕತೆಯಿಂದ ಚಾಲನೆ ಮಾಡಿ ಡಿಕ್ಕಿಪಡಿಸಿದ ಪರಿಣಾಮ ಆಟೋಗಳು ಮಗುಚಿ ಬಿದ್ದು ಆಟೋದಲ್ಲಿದ್ದವರಿಗೆ ಗಾಯವಾಗಿದ್ದು ಈ ಬಗ್ಗೆ ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಹಲ್ಲೆ ಪ್ರಕರಣ

ದಿನಾಂಕ 07-10-2018 ರಂದು ಸೋಮವಾರಪೇಟೆ ತಾಲೂಕಿನ ಕೊಡ್ಲಿಪೇಟೆಯ ಅಗಲಿ ಗ್ರಾಮದ ಚಿಕ್ಕಪಾರಸನ ಹಳ್ಳಿಯ ನಿವಾಸಿಯಾದ ಮಲ್ಲೇಶ, ಅವರ ಪತ್ನಿ ಚಂದ್ರಮ್ಮ ಮತ್ತು ಅವರ ಮಗಳು ಶಿಲ್ಪಾರವರಿಗೆ ಅದೇ ಗ್ರಾಮದ ನಿವಾಸಿಗಳಾದ ವರದರಾಜು, ವೀರೇಂದ್ರ, ಕುಮಾರ, ಕಿರಣ, ಮಂಜುಳ, ಸಾವಿತ್ರಿ, ಸುಮಿತ ರವರು ಸೇರಿ ಹಲ್ಲೆ ನಡೆಸಿದ್ದು ಈ ಬಗ್ಗೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಕ್ರಮ ಜೂಜಾಟ

ದಿನಾಂಕ 07-10-2018 ರಂದು ಗೋಣಿಕೊಪ್ಪ ಠಾಣಾ ಸರಹದ್ದಿನ ಮಾಯಮುಡಿ ಗ್ರಾಮದಲ್ಲಿ ಅಕ್ರಮವಾಗಿ ಜೂಜಾಡುತ್ತಿದ್ದ ಸ್ಥಳಕ್ಕೆ ಗೋಣಿಕೊಪ್ಪ ಠಾಣೆಯ ಉಪ ನಿರೀಕ್ಷಕರಾದ ಶ್ರೀಧರ್ ಮತ್ತು ಸಿಬ್ಬಂದಿಯವರು ದಾಳಿ ಮಾಡಿ ಜೂಜಾಡುತ್ತಿದ್ದ ಮಾಯಮುಡಿಯವರಾದ ರುದ್ರಮೂರ್ತಿ, ಉಮೇಶ, ಮೂರ್ತಿ, ರವಿ, ನಟೇಶ, ಹರೀಶ, ಸುರೇಂದ್ರ, ಪುಟ್ಟರಾಜುರವರನ್ನು ಬಂಧಿಸಿದ್ದು, ಅವರಿಂದ 4210 ರೂ ನಗದು, 5 ಮೊಬೈಲ್ ಫೋನ್, 2 ಮೋಟಾರು ಸೈಕಲ್ ವಶಕ್ಕೆ ಪಡೆದುಕೊಂಡು ಪ್ರಕಣ ದಾಖಲಿಸಿಕೊಂಡಿರುತ್ತಾರೆ.