Crime News

ಹಲ್ಲೆ ಪ್ರಕರಣ

ವಿರಾಜಪೇಟೆ ತಾಲೋಕಿನ ಬಿಟ್ಟಂಗಾಲ ಗ್ರಾಮದ ನಿವಾಸಿಯಾದ ಸುಬ್ರಮಣಿ ಎಂಬುವವರು ಅರ್ಜಿ ಗ್ರಾಮದ ಶೇಖರ ಎಂಬುವವರಿಗೆ ಸಾಲವಾಗಿ ನೀಡಿದ್ದ ಹಣವನ್ನು ವಾಪಾಸು ಕೊಡುವಂತೆ ದಿನಾಂಕ 08-10-2018 ರಂದು ಕೇಳಿದಾಗ ಸಂಜೆ ಮನೆಗೆ ಬರುವಂತೆ ಹೇಳಿದ್ದರಿಂದ ಮನೆಗೆ ಹೋದಾಗ ಶೇಖರನು ಹಣ ಕೊಡಲು ಬಾಕಿ ಇರುವುದಿಲ್ಲ ಎಂದು ಹೇಳಿ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ ಕೋವಿ ತೋರಿಸಿ ಕೊಲೆ ಬೆದರಿಕೆ ಹಾಕಿ ಹಲ್ಲೆ ನಡೆಸಿದ್ದು ಈ ಬಗ್ಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕರಿ ಮೆಣಸು ಬಳ್ಳಿ ಕಡಿದು ನಷ್ಠ

ಮಡಿಕೇರಿ ತಾಲೋಕಿನ ಮರಗೋಡು ಗ್ರಾಮದ ನಿವಾಸಿಯಾದ ಗೀತಾ ಎಂಬುವವರ ತೋಟಕ್ಕೆ ಯಾರೋ ದಿನಾಂಕ     07-10-2018 ರಂದು ನುಗ್ಗಿ 100 ಕರಿ ಮೆಣಸು ಬಳ್ಳಿ 10-15 ಕಾಫಿ ಗಿಡಗಳನ್ನು ಹಾಗೂ 3 ಪ್ಲಾಸ್ಟಿಕ್ ಪೈಪುಗಳನ್ನು ಕಡಿದು ನಷ್ಟ ಪಡಿಸಿದ್ದು ಈ ಬಗ್ಗೆ ದಿನಾಂಕ 09-10-2018 ರಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರರಕಣ ದಾಖಲಾಗಿರುತ್ತದೆ.