Crime News

ವ್ಯಕ್ತಿ ಸಾವು ಪ್ರಕರಣ

ದಿನಾಂಕ 11/10/2018ರಂದು ಅಮ್ಮತ್ತಿ ಬಳಿಯ ಪುಲಿಯೇರಿ ನಿವಾಸಿ ವಿಜೇಶ್ ಎಂಬವರು ಕಾವಾಡಿ ಗ್ರಾಮದ ಐನಂಡ ಪ್ರಕಾಶ್‌ ಎಂಬವರ ಮನೆಯಲ್ಲಿ ಕೆಲಸ ಮಾಡುತ್ತಿರುವಾಗ ನೀರಿನ ಬಾಟಲಿ ಎಂದು ಭಾವಿಸಿ ಯಾವುದೋ ವಿಷ ದ್ರವವನ್ನು ಸೇವಿಸಿ ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ

ದಿನಾಂಕ 11/10/2018ರಂದು ಮಡಿಕೇರಿ ಬಳಿಯ ಮೇಕೇರಿ ನಿವಾಸಿ ನಾರಾಯಣ ಎಂಬವರು ಮನೆಯಲ್ಲಿ ಮಾಡಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೃತ ನಾರಾಯಣ ಅತೀವ ಮದ್ಯ ವ್ಯಸನಿಯಾಗಿದ್ದು ಮದ್ಯಪಾನದ ಅಮಲಿನಲ್ಲಿ ಯಾವುದೋ ವಿಚಾರಕ್ಕೆ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.