Crime News

ನಕಲಿ ಚಿನ್ನ ಅಡವಿಟ್ಟು ಮೋಸ

ಮಡಿಕೇರಿಯ ಜಿ.ಟಿ.ರಸ್ತೆಯಲ್ಲಿರುವ ಸಿಂಡಿಕೇಟ್ ಬ್ಯಾಂಕ್ ಶಾಖೆಯ ಹಿರಿಯ ವ್ಯವಸ್ಥಾಪಕರಾದ ಗೌರದೇವಿಯವರು ದಿನಾಂಕ 12/09/2018ರಂದು ಚಿನ್ನಾಭರಣ ಸಾಲಗಳಿಗೆ ಸಂಬಂಧಿಸಿದಂತೆ ಚಿನ್ನಾಭರಣಗಳ ಮೌಲ್ಯಮಾಪನವನ್ನು ಮಾಡಿಸುತ್ತಿರುವಾಗ ಒಂದನೇ ಮೊಣ್ಣಂಗೇರಿ ನಿವಾಸಿ ರಾಮ ಮೂರ್ತಿ ಎಂಬವರು ಸುಮಾರು ರೂ.5,34,600/- ರೂಗಳ ಸಾಲಕ್ಕೆ ಅಡವಿಟ್ಟಿದ್ದ ಚಿನ್ನಾಭರಣಗಳ ಪೈಕಿ 129 ಗ್ರಾಂ ತೂಕದ ಒಂದು ಜೋಮಾಲೆ ಸರವು ನಕಲಿಯಾಗಿದ್ದು ಸದ್ರಿ ಚಿನ್ನಾಭರಣಗಳನ್ನು ಮಡಿಕೇರಿಯ ಎ.ವಿ.ಶಾಲೆ ಬಳಿಯ ಕೆ.ಎನ್.ಪ್ರವೀಣ್‌ ಎಂಬವರು ಮೌಲ್ಯ ಮಾಪನ ಮಾಡಿ ಅಸಲಿ ಚಿನ್ನ ಎಂದು ಪ್ರಮಾಣ ಪತ್ರ ನೀಡಿದ್ದು ಇಬ್ಬರೂ ಸೇರಿ ನಕಲಿ ಚಿನ್ನಾಭರಣಗಳನ್ನು ಅಡವಿಟ್ಟು ಬ್ಯಾಂಕಿಗೆ ಮೋಸ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಹಲ್ಲೆ ಪ್ರಕರಣ

ದಿನಾಂಕ 11/10/2018ರಂದು ಅಮ್ಮತ್ತಿ ನಿವಾಸಿ ಮನೆಯಪಂಡ ಮಧು ಮಾದಪ್ಪ ಎಂಬವರು ಅವರ ಮನೆಯ ಅಂಗಳದಲ್ಲಿ ಅವರ ಚಿಕ್ಕಪ್ಪ ಎಂ.ಎಂ.ಬೆಳ್ಯಪ್ಪ ಮತ್ತು ಚಿಕ್ಕಪ್ಪನ ಮಗ ದೇವಯ್ಯನವರೊಂದಿಗೆ ಮಾತನಾಡುತ್ತಾ ನಿಂತಿರುವಾಗ ಮಧು ಮಾದಪ್ಪರವರ ದೊಡ್ಡಪ್ಪನ ಮಗ ಎಂ.ಜಿ.ಪೊನ್ನಪ್ಪ ಎಂಬವರು ಏಕಾ ಏಕಿ ಅಲ್ಲಿಗೆ ಬಂದು ಮಧು ಮಾದಪ್ಪನವರಿಗೆ ಹೊಡೆದು ಹಲ್ಲೆ ಮಾಡಿದ್ದು ಪತ್ನಿ ಮಕ್ಕಳಿಗೆ ಜೀವ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ