Crime News

ಕೆಲಸ ಕೊಡಿಸುವುದಾಗಿ ಹಣ ಪಡೆದು ಮೋಸ

ಮಡಿಕೇರಿನ ನಗರದ ಆಜಾದ್ ನಗರದ ನಿವಾಸಿ ಅಪ್ರೀದ್ ಎಂಬುವವರು ನೌಕರಿ ಜಾಬ್ ಡಾಟ್ ಕಾಂ ನಲ್ಲಿ ಆನ್ಲೈನ್ ಅಪ್ಲಿಕೇಶನ್ ಸಲ್ಲಿಸಿದ್ದು ದಿನಾಂಕ 23-03-2018 ರಂದು ಮ್ಯಾನೇಜರ್ ಆದೇಶ್ ಸಿಂಗ್ ಎಂಬುವವರು ದೂರವಾಣಿ ಕರೆ ಮಾಡಿ ಇಂಡಿಗೋ ಏರ್ ಲೈನ್ಸ್ ನಲ್ಲಿ ಕೆಲಸಕ್ಕೆ ಆಯ್ಕೆಯಾಗಿರುವುದಾಗಿ ತಿಳಿಸಿ ವಿವಿಧ ಖಾತೆಗಳಿಗೆ ಹಣ ಜಮಾ ಮಾಡುವಂತೆ ತಿಳಿಸಿದ ಮೇರೆಗೆ ಒಟ್ಟು 1,91,200 ರೂ ಹಣವನ್ನು ಜಮಾ ಮಾಡಿದ್ದು, ಆದರೆ ಇದುವರೆಗೂ ಕೆಲಸ ಕೊಡಿಸದೇ ಮೋಸ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಗಾಂಜಾ ಸೇವನೆ ಮಾಡುತ್ತಿದ್ದ ವ್ಯಕ್ತಿಗಳ ಬಂಧನ

ದಿನಾಂಕ 12-10-2018 ರಂದು ರಾತ್ರಿ ಮಡಿಕೇರಿ ನಗರ ಠಾಣೆಯ ಪಿಎಸ್ಐ ಷಣ್ಮುಗಂ ರವರು ಸಿಬ್ಬಂದಿಯವರೊಂದಿಗೆ ಗಸ್ತು ಮಾಡುತ್ತಿರುವಾಗ ಎಫ್.ಎಂ.ಸಿ ಕಾಲೇಜಿನ ಹಿಂಭಾಗದ ಕಾಡು ಪ್ರದೇಶದಲ್ಲಿ ಯಾರೋ ಗಾಂಜಾ ಸೇವನೆ ಮಾಡುತ್ತಿದ್ದಾರೆಂದು ಸಿಕ್ಕಿದ ಮಾಹಿತಿ ಮೇರೆಗೆ ಹೋಗಿ ಪರಿಶೀಲಿಸಿದಾಗ ತೇಜಸ್ ತಿಮ್ಮಯ್ಯ ಮತ್ತು ಬೋಪಣ್ಣ ಎಂಬುವವರು ಗಾಂಜಾ ಸೇವನೆ ಮಾಡುತ್ತಿದ್ದು ಅವರನ್ನು ವಶಕ್ಕೆ ತೆಗೆದುಕೊಂಡು ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.

ಅಪಘಾತವಾಗಿ ಗಾಯಗೊಂಡಿದ್ದ ವ್ಯಕ್ತಿಯ ಸಾವು

ಸೋಮವಾರಪೇಟೆಯ ನಿವಾಸಿ ಚಂದ್ರಶೇಖರ @ ಗಣೇಶ ಎಂಬುವವರು ಕುಶಾಲನಗರದಲ್ಲಿ ವರ್ಕ್ಸ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದು, ದಿನಾಂಕ 04-10-2018 ರಂದು ಸ್ನೇಹಿತ ರವಿಯವರನ್ನು ಕಣಿವೆಗೆ ಬಿಟ್ಟು ಬೈಕಿನಲ್ಲಿ ಕುಶಾಲನಗರಕ್ಕೆ ಹೋಗುತ್ತಿರುವಾಗ ಕೂಡಿಗೆ ಸೇತುವೆಯ ಬಳಿ ಎದುರಿನಿಂದ ಬರುತ್ತಿದ್ದ ಆಟೋವನ್ನು ಚಾಲಕ ವೆಂಕಟೇಶ್ ರವರು ಅಜಾಗರೂಕತೆಯಿಂದ ಚಾಲನೆ ಮಾಡಿ ಚಂದ್ರಶೇಖರರವರು ಚಾಲನೆ ಮಾಡುತ್ತಿದ್ದ ಮೋಟಾರು ಸೈಕಲಿಗೆ ಡಿಕ್ಕಿಪಡಿಸಿದ್ದು ತಲೆ, ಕೈಗೆ ಪೆಟ್ಟಾಗಿದ್ದು ರಾಜೀ ತೀರ್ಮಾನ ಮಾಡಿಕೊಂಡಿದ್ದರು. ದಿನಾಂಕ 12-10-2018 ರಂದು ಚಂದ್ರಶೇಖರ @ ಗಣೇಶ ರವರು ತಲೆ ನೋವಿನಿಂದ ವಾಂತಿ ಮಾಡಿಕೊಂಡಿದ್ದು ಚಿಕಿತ್ಸೆಯ ಬಗ್ಗೆ ಮೈಸೂರಿನ ಕೆ.ಆರ್ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ ಈ ಬಗ್ಗೆ ಕುಶಾಲನಗರ ಸಂಚಾರಿ ಠಾಣೆಯಲ್ಲಿ ದಿನಾಂಕ 13-10-2018 ರಂದು ಪ್ರಕರಣ ದಾಖಲಾಗಿರುತ್ತದೆ.