Crime News

ಕ್ಷುಲ್ಲಕ ಕಾರಣಕ್ಕೆ ಪರಸ್ಪರ ಹಲ್ಲೆ:

ಸೋಮವಾರಪೇಟೆ ಠಾಣಾ ಸರಹದ್ದಿನ ಅಬ್ಬೂರುಕಟ್ಟೆ ಗ್ರಾಮದ ನಿವಾಸಿ ಕೆ.ಕೆ. ಪ್ರಸನ್ನ ರವರು ತಮ್ಮ ಮನೆಯ ಮುಂದೆ ನಿಲ್ಲಿಸಿದ್ದ ಸ್ಕೂಟಿಯ ಮೇಲೆ ಅವರ ಪಕ್ಕದ ಮನೆಯ ನಿವಾಸಿ ರವಿ ಎಂಬವರ ಮಕ್ಕಳು ಸೈಕಲನ್ನು ಬೀಳಿಸಿದ ವಿಚಾರದಲ್ಲಿ ಕೆ.ಕೆ. ಪ್ರಸನ್ನ ಹಾಗು ರವಿ ಮತ್ತು ಅವರ ಪತ್ನಿ ಸುಮ ಎಂಬವರು ಪರಸ್ಪರ ಜಗಳವಾಡಿಕೊಂಡಿದ್ದು ಈ ಸಂಬಂಧ ಉಭಯಕಡೆಯವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರತ್ಯೇಕ ಎರಡು ಪ್ರಕರಣಗಳು ದಾಖಲಾಗಿವೆ.

ನಕಲಿ ಚಿನ್ನ ಮಾರಾಟ:

ದಿನಾಂಕ 27-9-2018 ರಂದು ಸಮಯ ಮದ್ಯಾಹ್ನ 1-00 ಗಂಟೆಗೆ ವಿರಾಜಪೇಟೆಯ ಸ್ವಿಜ್ ಗೋಲ್ಡ್ & ಡೈಮಂಡ್ ಅಂಗಡಿಗೆ ಆಟೋ ಚಾಲಕ ಜಕರಿಯಾರವರೊಂದಿಗೆ ಬಲ್ಲಮಾವಟಿ ಗ್ರಾಮದ ರತೀಶ್ ಹಾಗು ಅಪರಿಚಿತ ಹೆಂಗಸು ಬಂದು 83 ಗ್ರಾಂ ತೂಕದ ನಕಲಿ ಚಿನ್ನದ ಸರವನ್ನು ಚಿನ್ನದ ಸರ ಎಂದು ನಂಬಿಸಿ ಕ್ಯಾಶಿಯರ್, ಇಸ್ ಹಾಕ್ ರವರಿಗೆ ಮಾರಾಟ ಮಾಡಿ ಕ್ಯಾಶಿಯರ್ ನಿಂದ ರೂ 80,500/= ಬೆಲೆಯ ಒಟ್ಟು 24.539 ಗ್ರಾಂ ತೂಕದ ಮೂರು ಚಿನ್ನದ ಬಳೆಗಳನ್ನು ಹಾಗೂ ರೂ 1,51,000/= ನಗದನ್ನು ಪಡೆದು ಮೋಸ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಕೂಟರಿಗೆ ಕಾರು ಡಿಕ್ಕಿ:

ವಿರಾಜಪೇಟೆ ನಗರದ ವಿಜಯನಗರ ಬಡಾವಣೆಯ ನಿವಾಸಿ ಶ್ರೀಮತಿ ಖುರ್ಷಿದಾಬಾನು ಎಂಬವರ ಪತಿ ಹಸನ್ ಅಶ್ರಫ್ ಎಂಬವರು ದಿನಾಂಕ 13-10-2018 ರಂದು ತಮ್ಮ ಬಾಪ್ತು ಸ್ಕೂಟರಿನಲ್ಲಿ ಸಾಯಂಕಾಲ ಗೋಣಿಕೊಪ್ಪದಿಂದ ವಿರಾಜಪೇಟೆಯ ಕಡೆಗೆ ಬರುತ್ತಿರುವಾಗ ಕೊಳ್ತೋಡು ಬೈಗೋಡು ಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ ಹಿಂದಿನಿಂದ ಅಪರಿಚಿತ ವ್ಯಕ್ತಿಯೋರ್ವ ಕಾರನ್ನು ಚಲಾಯಿಸಿಕೊಂಡು ಬಂದು ಹಸನ್ ಅಶ್ರಫ್ ರವರು ಚಲಾಯಿಸುತ್ತದ್ದ ಸ್ಕೂಟರಿಗೆ ಡಿಕ್ಕಿಪಡಿಸಿದ ಪರಿಣಾಮವಾಗಿ ಹಸನ್ ಅಶ್ರಫ್ ರವರು ರಸ್ತೆಯ ಮೇಲೆ ಬಿದ್ದು ಗಾಯಗೊಂಡಿದ್ದು ಅವರನ್ನು ಮೈಸೂರಿನ ಜೆ.ಎಸ್‍.ಎಸ್‍ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಸಂಬಂಧ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಆಸ್ತಿ ವಿಚಾರದಲ್ಲಿ ಜಗಳ:

ಮಡಿಕೇರಿ ತಾಲೋಕು ಕುಂಜಿಲ ಗ್ರಾಮದ ನಿವಾಸಿ ಶ್ರೀಮತಿ ಮರಿಯಮ್ಮ ಎಂಬವರೊಂದಿಗೆ ಆಕೆಯ ಮಗ ಹಸನಾರ್ ಎಂಬವರು ದಿನಾಂಕ 14-10-2018 ರಂದು ಆಸ್ತಿ ವಿಚಾರದಲ್ಲಿ ಜಗಳ ಮಾಡಿ ಶ್ರೀಮತಿ ಮರಿಯಮ್ಮನವರ ಮೇಲೆ ಹಲ್ಲೆ ನಡೆಸಿ  ಕೊಲೆ ಮಾಡುವುದಾಗಿ ಜೀವ ಬೆದರಕೆ ಒಡ್ಡಿರುವುದಾಗಿ ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.