Crime News

ಹಲ್ಲೆ ಪ್ರಕರಣ

ದಿನಾಂಕ 15/10/2018ರಂದು ಕೇರಳದ ಮಾನಂದವಾಡಿ ನಿವಾಸಿ ಎಂ.ಎಂ.ಜೋತಿಷ್ ಎಂಬವರು ಸಿದ್ದಾಪುರ ಬಳಿಯ ಕರಡಿಗೋಡಿನ ಅವರ ಅಜ್ಜಿಯ ಮನೆಯಲ್ಲಿರುವಾಗ ಪಕ್ಕದ ಮನೆಯ ನಿವಾಸಿಗಳಾದ ರಾಮದಾಸ್ ಮತ್ತು ಅಶೋಕ್ ಎಂಬವರು ಕ್ಷುಲ್ಲಕ ಕಾರಣಕ್ಕ ಜಗಳವಾಡಿ ದಬ್ಬೆ ಕತ್ತಿಯಿಂದ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

 ವ್ಯಕ್ತಿ ಆತ್ಮಹತ್ಯೆ

ದಿನಾಂಕ 14/10/2018ರಂದು ಮೇಕೇರಿ ನಿವಾಸಿ ನಾಗೇಶ್ ಜಿ.ಎಂ. ಎಂಬವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. ಮೃತ ನಾಗೇಶ್‌ರವರು ಅತೀವ ಮದ್ಯ ವ್ಯಸನಿಯಾಗಿದ್ದು ಮದ್ಯದ ಅಮಲಿನಲ್ಲಿ ಯಾವುದೋ ವಿಷ ಪದಾರ್ಥವನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ.

ಮನುಷ್ಯ ಕಾಣೆ ಪ್ರಕರಣ

ಸೋಮವಾರಪೇಟೆ ಬಳಿಯ ಕುಂದಳ್ಳಿ ನಿವಾಸಿ ಕೆ.ಜಿ.ಚಿನ್ನಪ್ಪ ಎಂಬವರು ದಿನಾಂಕ 13/10/2018ರಂದು ಅವರ ಪತ್ನಿಯ ಮನೆಯಾದ ಸುಬ್ರಮಣ್ಯಕ್ಕೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದು ಎಲ್ಲಿಗೂ ಹೋಗದೆ ಕಾಣೆಯಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

ದಿನಾಂಕ 15/10/2018ರಂದು ಕುಶಾಲನಗರದ ಗಂಧದಕೋಟೆಯಲ್ಲಿ ಮೀನು ವ್ಯಾಪಾರ ಮಾಡಿಕೊಂಡಿರುವ ನೆಲ್ಲಿ ಹುದಿಕೇರಿ ನಿವಾಸಿ ದಿರಾರ್‌ ಎಂಬವರ ಅಂಗಡಿಗೆ ಮಾದಾಪಟ್ನ ನಿವಾಸಿ ಸುಬ್ಬು , ಮೈಸೂರಿನ ತಿರುಮಲಾಪುರದ ನಿವಾಸಿ ಆನಂದ ಮತ್ತು ಇತರ 5 ಜನರು ರಿಕ್ಷಾದಲ್ಲಿ ಬಂದು ಕ್ಷುಲ್ಲಕ ಕಾರಣಕ್ಕೆ ಜಗಳವಾಡಿ ಕೆಲಸಗಾರರಿಗೆ ಕೈಯಿಂದ ಹೊಡೆದು ಅಂದಾಜು ರೂ.20,000/- ಮೌಲ್ಯದ ಮೀನನ್ನು ನೆಲಕ್ಕೆ ಚೆಲ್ಲಿ ಹಾಳು ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಪಟ್ಟಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಮಹಿಳೆ ಆತ್ಮಹತ್ಯೆ

ದಿನಾಂಕ 15/10/2018ರಂದು ಸುಂಟಿಕೊಪ್ಪ ಬಳಿಯ ಹರದೂರು ನಿವಾಸಿ ಚಂದ್ರಾವತಿ ಎಂಬವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೃತೆ ಚಂದ್ರಾವತಿಯವರು ಚರ್ಮದ ಕಾಯಿಲೆಯಿಂದ ಬಳಲುತ್ತಿದ್ದು ಕಾಯಿಲೆ ವಾಸಿಯಾಗದ ಕಾರಣಕ್ಕೆ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.