Crime News

ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ

ದಿನಾಂಕ 15/10/2018ರಂದು ಶನಿವಾರಸಂತೆ ಬಳಿಯ ಹುಲುಕೋಡು ನಿವಾಸಿ ಕೊಮಾರಯ್ಯ ಎಂಬವರು ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಯಾವುದೋ ವಿಷ ಸೇವಿಸಿ ಅಸ್ವಸ್ಥರಾಗಿದ್ದು ಅವರನ್ನು ಚಿಕಿತ್ಸೆಗಾಗಿ ಹಾಸನದ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿದ್ದು ದಿನಾಂಕ 16/10/2018ರಂದು ಚಿಕಿತ್ಸೆ ಫಲಕಾರಿಯಾಗದೆ ಕೊಮಾರಯ್ಯನವರು ಮೃತರಾಗಿರುವುದಾಗಿ ವರದಿಯಾಗಿದೆ. ಮೃತ ಕೊಮಾರಯ್ಯನವರ ಕಿರಿ ಮಗ ಸೋಮಶೇಖರವರು ಕೆಲವು ವರ್ಷಗಳ ಹಿಂದೆ ತೀರಿಕೊಂಡಿದ್ದು ಈ ಬಗ್ಗೆ ಜುಗುಪ್ಸೆಗೊಂಡು ಕೊಮಾರಯ್ಯನವರು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

 ರಸ್ತೆ ಅಪಘಾತ

ದಿನಾಂಕ 15/10/2018ರಂದು ಗೋಣಿಕೊಪ್ಪ ಬಳಿಯ ಕೈಕೇರಿ ನಿವಾಸಿ ಎಂ.ಡಿ.ಮಹದೇವಸ್ವಾಮಿ ಎಂಬವರು ಅವರ ರಿಕ್ಷಾದಲ್ಲಿ ಅರುವತೊಕ್ಲು ಕಡೆಯಿಂದ ಗೋಣಿಕೊಪ್ಪಕ್ಕೆ ಬರುತ್ತಿರುವಾಗ ಕಾಫಿ ಬೋರ್ಡ್‌ ಜಂಕ್ಷನ್ ಬಳಿ ಎದುರಿನಿಂದ ಕಾಟ್ರಕೊಲ್ಲಿ ನಿವಾಸಿ ಸುಲೈಮಾನ್‌ ಎಂಬವರು ಒಂದು ಕಾರನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಮಹದೇವಸ್ವಾಮಿರವರ ರಿಕ್ಷಾಕ್ಕೆ ಡಿಕ್ಕಿಪಡಿಸಿದ ಪರಿಣಾಮ ಮಹದೇವ ಸ್ವಾಮಿರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 ಹಣ ವಂಚನೆ 

ಕೂಡಿಗೆ ಬಳಿಯ ಬಸವನತ್ತೂರು ನಿವಾಸಿ ಜಗದೀಶ್‌ ಪಿ.ಬಿ. ಎಂಬವರ ಮೊಬೈಲಿಗೆ ದಿನಾಂಕ 31/07/2018ರಂದು ಕೆಲವರು ಲೈಮ್‌ ರೋಡ್ ಆನ್‌ಲೈನ್‌ ಶಾಪಿಂಗ್‌ ಪೋರ್ಟಲ್‌ನಿಂದ ಕರೆ ಮಾಡುವುದಾಗಿ ಪರಿಚಯಿಸಿಕೊಂಡು ಲಕ್ಕಿ ಡ್ರಾದಲ್ಲಿ ಜಗದೀಶ್‌ರವರು ಮಹಿಂದ್ರಾ ಎಕ್ಸ್‌ಯುವಿ ವಾಹನವನ್ನು ಗೆದ್ದಿದ್ದು ಅದನ್ನು ಪಡೆದುಕೊಳ್ಳಲು ವಾಹನದ ಇನ್ಷೂರೆನ್ಸ್‌ ಮತ್ತು ರಸ್ತೆ ತೆರಿಗೆಯನ್ನು ಕಟ್ಟ ಬೇಕೆಂದು ಹೇಳಿ ವಿವಿಧ ಬ್ಯಾಂಕ್‌ ಖಾತೆಗಳಿಗೆ ಸುಮಾರು ರೂ.6,15,000/- ಗಳನ್ನು ಕಟ್ಟಿಸಿಕೊಂಡಿದ್ದು ನಂತರ ವಾಹನವನ್ನು ನೀಡದೆ ಜಗದೀಶ್‌ರವರು ಅವರಿಗೆ ಕರೆ ಮಾಡಿದ ದೂರವಾಣಿ ಸಂಖ್ಯೆಗೆ ಕರೆ ಮಾಡಿದಾಗ ಆ ಸಂಖ್ಯೆಯು ಅಸ್ತಿತ್ವದಲ್ಲಿ ಇಲ್ಲ ಎಂಬುದಾಗಿ ಬರುತ್ತಿದ್ದು ತನಗೆ ಹಣವನ್ನು ವಂಚಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಮಹಿಳೆ ಆತ್ಮಹತ್ಯೆ

ದಿನಾಂಕ 15/10/2018ರಂದು ಮಡಿಕೇರಿ ಬಳಿಯ ಬೆಟ್ಟಗೇರಿ ನಿವಾಸಿ ಮಾದೇವಿ ಎಂಬವರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೃತೆ ಮಾದೇವಿರವರಿಗೆ ಮದ್ಯಪಾನದ ಚಟವಿದ್ದು ಮದ್ಯಪಾನ ಮಾಡಿದ ಮತ್ತಿನಲ್ಲಿ ಕುಟುಂಬಸ್ಥರೊಂದಿಗೆ ಜಗಳವಾಡಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣದ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.