Crime News

ಮೋಟಾರ್ ಸೈಕಲ್‍ಗೆ ಜಿಪ್ಸಿ ಡಿಕ್ಕಿ:

ಮೋಟಾರ್ ಸೈಕಲಿಗೆ ಹಿಂದಿನಿಂದ ಬಂದ ಜಿಪ್ಸಿ ವಾಹನ ಡಿಕ್ಕಿಯಾಗಿ ಬೈಕಿನಲ್ಲಿದ್ದ ಮೂವರು ಗಾಯಗೊಂಡ ಘಟನೆ ಮಡಿಕೇರಿ ತಾಲೋಕು ಮೂರ್ನಾಡುವಿನಲ್ಲಿ ನಡೆದಿದೆ.  ಮಡಿಕೇರಿ ತಾಲೋಕು ತಾಳತ್‍ಮನೆ ನಿವಾಸಿ ಹೆಚ್‍.ಇ. ಪವನ್ ಎಂಬವರು ದಿನಾಂಕ 17-10-2018 ರಂದು ವಿರಾಜಪೇಟೆಗೆ ತಮ್ಮ ಬಾಪ್ತು ಮೋಟಾರ್ ಸೈಕಲಿನಲ್ಲಿ ನಂಜೇಶ್ ಹಾಗು ಮಗಳು ಲಿಪಿಕಾಳೊಂದಿಗೆ ಹೋಗುತ್ತಿದ್ದಾಗ ಮೂರ್ನಾಡು ಬಳಿ ಹಿಂದಿನಿಂದ ಜೀಪನ್ನು (ಜಿಪ್ಸಿ) ಅದರ ಚಾಲಕ ಅತೀ ವೇಗ ಹಾಗು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಹೆಚ್‍.ಇ. ಪವನ್‍ರವರು ಚಲಾಯಿಸುತ್ತಿದ್ದ ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ಮೋಟಾರ್ ಸೈಕಲ್ ಕೆಳಗೆ ಬಿದ್ದು ಬೈಕಿನಲ್ಲಿದ್ದ ಮೂವರು ಗಾಯಗೊಂಡಿದ್ದು, ಈ ಸಂಬಂಧ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕಿಗೆ ಪಿಕ್‍ಅಪ್ ವಾಹನ ಡಿಕ್ಕಿ:

ಮಡಿಕೇರಿ ನಗರದ ಸಂಪಿಗೆಕಟ್ಟೆ ನಿವಾಸಿ ಟಿ.ಆರ್. ರೋಷನ್ ರವರು ದಿನಾಂಕ 17-10-2018 ರಂದು ಮೋಟಾರ್ ಸೈಕಲಿನಲ್ಲಿ ಸಂಪಿಕೆಕಟ್ಟೆ ರಸ್ತೆಯಲ್ಲಿ ಹೋಗುತ್ತಿದ್ದಾಗ ಸಂಪಿಗೆಕಟ್ಟೆ ಜಂಕ್ಷನ್‍ನಲ್ಲಿ ಸೋಮವಾರಪೇಟೆ ಕಡೆಯಿಂದ ಬಂದ ಪಿಕ್‍ಅಪ್‍ ವಾಹನವನ್ನು ಅದರ ಚಾಲಕ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಮೋಟಾರ್ ಸೈಕಲಿಗೆ ಡಿಕ್ಕಿಪಡಿದ ಪರಿಣಾಮ ಮೋಟಾರ್ ಸೈಲಕನ್ನು ಚಲಾಯಿಸುತ್ತಿದ್ದ ಟಿ.ಆರ್. ರೋಷನ್ ರವರು ಗಾಯಗೊಂಡಿದ್ದು, ಮಡಿಕೇರಿ ಟ್ರಾಫಿಕ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಬೈಕ್- ಸ್ಕೂಟರ್ ಮುಖಾಮುಖಿ ಡಿಕ್ಕಿ:

ದಿನಾಂಕ 14.10.2018 ರಂದು ಶನಿವಾರಸಂತೆ ಠಾಣಾ ಸರಹದ್ದಿನ ಗುಡುಗಳಲೆ ಗ್ರಾಮದ ನಿವಾಸಿ ಕೆ.ಆರ್. ರಂಜಿತ್ ಎಂಬವರು ಮೋಟಾರ್ ಬೈಕಿನಲ್ಲಿ ಶನಿವಾರಸಂತೆಯಿಂದ ಗುಡುಗಳಲೆ ಕಡೆಗೆ ಹೋಗುತ್ತಿದ್ದಾಗ ಗುಡುಗಳಲೆಯ ಸುಜುಕಿ ಶೋ ರೂಂ ಮುಂಭಾಗ ತಲುಪುವಾಗ್ಗೆ ಸಮಯ 4.00 ಪಿ.ಎಂ ಗೆ ಎದುರುಗಡೆಯಿಂದ ಕೆಎ-12-ಆರ್-8401 ರ ಸ್ಕೂಟರನ್ನು ಅದರ ಸವಾರ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಕೆ.ಆರ್. ರಂಜಿತ್ ರವರು ಚಲಾಯಿಸುತ್ತಿದ್ದ ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ಸದರಿ ಕೆ.ಆರ್. ವಸಂತ್ ರವರಿಗೆ ಗಾಯಗಳಾಗಿ ಚಿಕಿತ್ಸೆಗೆ ಹಾಸನಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು. ಈ ಸಂಬಂಧ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೀರಿನಲ್ಲಿ ಮುಳುಗಿ ವ್ಯಕ್ತಿ ಸಾವು:

ಸುಂಟಿಕೊಪ್ಪ ಠಾಣಾ ಸರಹದ್ದಿನ ನಾಕೂರು ಶಿರಂಗಾಲ ಗ್ರಾಮದ ಎ.ಪಿ. ವಿಶ್ವನಾಥ ಎಂಬವರ ಮಗ 26 ವರ್ಷ ಪ್ರಾಯದ ಎ.ವಿ. ಸುಜಿತ್ ಎಂಬವರು ದಿನಾಂಕ 15-10-2018 ರಂದು ನಾಕುರು ಶಿರಂಗಾಲ ಗ್ರಾಮಪಂಚಾಯ್ತಿ ಕಛೇರಿಗೆ ಪಾಸ್‍ಪೋರ್ಟ್ ಮಾಡುವ ಸಂಬಂಧ ದಾಖಲಾತಿಗಾಗಿ ಹಾರಂಗಿ ಜಲಾಶಯದ ಹಿನ್ನೀರಿನಲ್ಲಿ ತೆಪ್ಪದ ಮೂಲಕ ಹೋಗಿದ್ದು, ತೆಪ್ಪದ ಮೂಲಕ ಹಿನ್ನೀರನ್ನು ದಾಟಿ ಪಂಚಾಯಯ್ತಿ ಕಛೆರಿಗೆ ಹೋಗುತ್ತಿದ್ದಾಗ ಆಕಸ್ಮಿಕ ಕಾಲು ಜಾರಿ ನೀರಿಗೆ ಬಿದ್ದು  ಸಾವನಪ್ಪಿದ್ದು, ಈ ಸಂಬಂಧ ಮೃತರ ತಂದೆ ಎ.ಪಿ. ವಿಶ್ವನಾಥರವರು ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ವಿದ್ಯುತ್ ಸ್ಪರ್ಷದಿಂದ ಮಹಿಳೆ ದುರ್ಮರಣ:

ಸೋಮವಾರಪೇಟೆ ನಗರದ ರೇಂಜರ್ ಬ್ಲಾಕ್ ನಿವಾಸಿ ಬಿ.ಸಂಜೀವ ಎಂಬವರ ಮಗಳು ಶಶಿಕಲಾ ದಿನಾಂಕ 17-10-2018 ತಮ್ಮ ಮನೆಯ ಕರೆಂಟ್ ಮೋಟರ್ನ್ನು ಆನ್ ಮಾಡುವ ಉದ್ದೇಶದಿಂದ ಸ್ವಿಚ್ ಆನ್ ಮಾಡುವಾಗಿ ಆಕಸ್ಮಿಕವಾಗಿ ಕರೆಂಟ್ ಶಾಕ್ ಹೊಡೆದು ಬಿದ್ದು ಹೋಗಿದ್ದು, ಸದರಿಯವರನ್ನು ಚಿಕಿತ್ಸೆ ಬಗ್ಗೆ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ಅವರು ಮೃತಪಟ್ಟಿದ್ದು, ಬಿ.ಸಂಜೀವರವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.