Crime News

ಆಟೋ ರಿಕ್ಷಾ ಅವಘಡ ವ್ಯಕ್ತಿಗೆ ಗಾಯ:

ಚಲಿಸುತ್ತಿದ್ದ ಆಟೋ ರಿಕ್ಷಾ ಅಘಾತಕ್ಕೀಡಾಗಿ ವ್ಯಕ್ತಿಯೋರ್ವ ಗಾಯಗೊಂಡ ಘಟನೆ ಮರ್ನಾಡು ಸಮೀಪದ ಮುತ್ತಾರ್ಮುಡಿ ಎಂಬಲ್ಲಿ ನಡೆದಿದೆ. ಮಡಿಕೇರಿ ತಾಲೋಕು ಬಿಳಿಗೇರಿ ಗ್ರಾಮದ ದಂಬೆಕೋಡಿ ಸುಕುಮಾರ್ ಎಂಬವರ ಲೈನು ಮನೆಯಲ್ಲಿ ವಾಸವಾಗಿರುವ ದುಲಾಲ್ ಎಂಬವರು ದಿನಾಂಕ 17-10-2018 ರಂದು ಮುರ್ನಾಡಿಗೆ ಯಶವಂತ್ ಎಂಬವರ ಆಟೋ ರಿಕ್ಷಾದಲ್ಲಿ ಹೋಗಿ ವಾಪಾಸ್ಸು ತಾವು ವಾಸವಾಗಿರುವ ಲೈನು ಮನೆಗೆ ಹೋಗುತ್ತಿದ್ದಾಗ ಮುತ್ತಾರ್ಮುಡಿ ಎಂಬಲ್ಲಿ ಆಟೋ ರಿಕ್ಷಾವನ್ನು ಚಾಲಕ ಯಶವಂತ್ ರವರು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿದ ಪರಿಣಾಮವಾಗಿ ಆಟೋ ರಿಕ್ಷಾ ರಸ್ತೆಯಲ್ಲಿ ಮಗುಚಿ ಬಿದ್ದು ಅದರಲ್ಲಿ ಪ್ರಯಾಣಿಸುತ್ತಿದ್ದ ದುಲಾಲ್ ರವರು ಗಾಯಗೊಂಡಿದ್ದು ಸದರಿಯವರನ್ನು ಮಡಿಕೇರಿ ಸರಕಾರಿ ಆಸ್ಪತ್ರೆಗೆ ದಾಖಲಿಸಿ ನಂತರ  ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಈ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.