Crime News

ವ್ಯಕ್ತಿ ಮೇಲೆ ಹಲ್ಲೆ, ಪ್ರಕರಣ ದಾಖಲು:

ದಿನಾಂಕ 20-10-2018 ರಂದು ಸಮಯ 02-00 ಕ್ಕೆ ಮಡಿಕೇರಿ ನಗರದ ಭಗವತಿ ನಗರದ ನಿವಾಸಿ ಕೆ.ಪಿ. ಕವಿಕುಮಾರ್ ಎಂಬವರು ದಸರಾ ಉತ್ಸವ ನೋಡಲೆಂದು ದಂಡಿನ ಮಾರಿಯಮ್ಮ ದೇವಾಲಯಕ್ಕೆ ಹೋಗಿ ಅದೇ ರಸ್ತೆಯಲ್ಲಿ ನಡೆದುಕೊಂಡು ಕೋಟೆಮಾರಿಯಮ್ಮ ದೇವಾಲಯದ ಕಡೆಗೆ ಹೋಗುತ್ತಿದ್ದಾಗ ಮಡಿಕೇರಿ ನಗರದ ಡ್ಯಾನಿ ಪೂವಯ್ಯ ಎಂಬ ವ್ಯಕ್ತಿ ಕೆಲವು ಮಂದಿಯೊಂದಿಗೆ ಜಗಳವಾಡುತ್ತಿದ್ದು ಅದೇ ಸಂದರ್ಭದಲ್ಲಿ ಕೆ.ಪಿ. ಕವಿಕುಮಾರ್ ಅಲ್ಲಿ ತಲುಪಿದ್ದು ಡ್ಯಾನಿಪೂವಯ್ಯ ಕತ್ತಿಯೊಂದನ್ನು ಹಿಡಿದು ಬೀಸುತ್ತಾ ಕೆ.ಪಿ.ರವಿಕುಮಾರ್‍ ರವರ ಮೇಲೂ ಬೀಸಿ ಕೈಗೆ, ಅಂಗೈಗೆ ಮತ್ತು ಮಂಡಿಗೆ ಗಾಯಪಡಿಸಿದ್ದು, ಈ ಸಂಬಂಧ ಸದರಿ ಕೆ.ಪಿ. ಕವಿಕುಮಾರ್‍ ರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 ಬಸ್ಸು ಹತ್ತುವಾಗ ವಿದ್ಯಾರ್ಥಿನಿಗೆ ಗಾಯ:

ಕುಶಾಲನಗರದ ಮಾದಾಪಟ್ಟಣದಲ್ಲಿರುವ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ರೇಖಾ ಎಂಬವರು ದಿನಾಂಕ 20-10-2018 ರಂದು ಸಹ ವಿದ್ಯಾರ್ಥಿನಿಯರೊಂದಿಗೆ ಕುಶಾಲನಗರದ ಕಡೆಗೆ ಹೋಗಲು ನಿಂತಿದ್ದು, ಸಮಯ ಮಧ್ಯಾಹ್ನ 1-00 ಗಂಟೆ ಸಮಯದಲ್ಲಿ ಮಡಿಕೇರಿ ಕಡೆಯಿಂದ ಕುಶಾಲನಗರ ಕಡೆಗೆ ಹೋಗುವ ಬಸ್ಸು ಬಂದಿದ್ದು ಅದಕ್ಕೆ ಹತ್ತುವ ಸಮಯದಲ್ಲಿ ಚಾಲಕ ನಿರ್ಲಕ್ಷ್ಯದಿಂದ ಮತ್ತು ದುಡುಕಿನಿಂದ ಬಸ್ಸನ್ನು ಚಾಲನೆ ಮಾಡಿದ ಪರಿಣಾಮ ಸಿಂಧು ಎಂಬ ವಿದ್ಯಾರ್ಥಿನಿಯ ಕಾಲಿನ ಮೇಲೆ ಬಸ್ಸಿನ ಚಕ್ರ ಹರಿದು ಗಾಯವಾಗಿದ್ದು, ಈ ಸಂಬಂಧ ಕುಶಾಲನಗರ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮಹಿಳೆ ಮೇಲೆ ಹಲ್ಲೆ:

ಸೋಮವಾರಪೇಟೆ ತಾಲೋಕು ಮಟ್ನಳ್ಳಿ ಗ್ರಾಮದ ನಿವಾಸಿ ಎಂ.ವೈ, ರೂಪಾ ಎಂಬವರು ದಿನಾಂಕ 20-10-2018 ರಂದು ಎಂದಿನಂತೆ ಕೂಲಿ ಕೆಲಸಕ್ಕೆ ಹೋಗಿ ಸಂಜೆ16-30 ಗಂಟೆ ಸಮಯದಲ್ಲಿ ಮನೆಯ ಕಡೆಗೆ ಹೋಗುತ್ತಿದ್ದಾಗ ಅದೇ ಗ್ರಾಮದ ನಿವಾಸಿ ಸ್ವಾಮಿಯವರ ಮನೆಯ ಮುಂದುಗಡೆ ಶಾರದಾ ಮತ್ತು ಆಕೆಯ ಗಂಡ ಸ್ವಾಮಿರವರು ಅಲ್ಲಿಗೆ ಬಂದು ವಿನಾ ಕಾರಣ ಜಗಳ ಮಾಡಿ ಕೈಯಿಂದ ಮತ್ತು ದೊಣ್ಣೆಯಿಂದ ಹಲ್ಲೆ ನಡೆಸಿ ನೋವನ್ನುಂಟುಮಾಡಿದ್ದು ಅಲ್ಲದೆ ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಮಾಡುವುದಾಗಿ ಬೆದರಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಾರಿ ತಡೆದು ವ್ಯಕ್ತಿ ಮೇಲೆ ಹಲ್ಲೆ:

ವಿರಾಜಪೇಟೆ ಸಮೀಪದ ಕಲ್ಲುಬಾಣೆ ನಿವಾಸಿ ಎ.ನಾಸೀರ್ ಎಂಬವರು ದಿನಾಂಕ 20-10-2018 ರಂದು ಮಧ್ಯಾಹ್ನ 2-00 ಗಂಟೆಗೆ ವಿರಾಜಪೇಟೆ ನಗರದ ಶಿವಾಸ್ ಜಂಕ್ಷನ್ ಬಳಿ ಇರುವ ಮೆಸ್‍ಗೆ ಊಟಕ್ಕೆ ಹೋಗುತ್ತಿದ್ದಾಗ ಮೆಸ್ ಮುಂಭಾಗದ ವೆರಾಂಡದಲ್ಲಿದ್ದ ಮೀನುಪೇಟೆ ನಿವಾಸಿ ಸಂಶುದ್ದೀನ್ ಎಂಬವರು ಎ.ನಾಸೀರ್ ರವರ ದಾರಿ ತಡೆದು ಅವಾಚ್ಯವಾಗಿ ಬೈದು ಕೈಗಳಿಂದ ಮುಖಕ್ಕೆ ಹಲ್ಲೆ ಮಾಡಿ ಗಾಯಪಡಿಸಿದ್ದು ಅಲ್ಲದೆ ಕೊಲೆ ಮಾಡುವುದಾಗಿ ಜೀವ ಬೆದರಿಕಿ ಒಡ್ಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ನೇಣುಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ:

ವಿರಾಜಪೇಟೆ ತಾಲೋಕು ಕುಟ್ಟ ಗ್ರಾಮದ ಫೈತ್ ಕಾಫಿ ಎಸ್ಟೇಟಿನ ಲೈನು ಮನೆಯಲ್ಲಿ ವಾಸವಾಗಿರುವ ಶ್ರೀಮತಿ ಭಾಗ್ಯ ಎಂಬವರ ಗಂಡ ಗೋವಿಂದರಾಜು ಎಂಬವರು ದಿನಾಂಕ 20-10-2018 ರಂದು ತನ್ನ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ಪತ್ನಿ ಶ್ರೀಮತಿ ಭಾಗ್ಯರವರು ನೀಡಿದ ದೂರಿನ ಮೇರೆಗೆ ಕುಟ‍್ಟ ಪೊಲೀಸರು ಪ್ರಕರಣ ದಾಖಲಿ ತನಿಖೆ ಕೈಗೊಂಡಿದ್ದಾರೆ.