Crime News

ರಸ್ತೆ ಅಪಘಾತ

ದಿನಾಂಕ 19/10/2018ರಂದು ರಾತ್ರಿ 2:30 ಗಮಟೆಗೆ ಬೆಂಗಳೂರಿನ ಕಗ್ಗಲೀಪುರ ನಿವಾಸಿ ಎನ್.ಶ್ರೀಧರ್ ಎಂಬವರು ಬೆಂಗಳೂರಿನ ಅವಿನಾಶ್‌ ರಾವ್ ಎಂಬವರು ಚಾಲಿಸುತ್ತಿದ್ದ ಕಾರಿನಲ್ಲಿ ಮಡಿಕೇರಿಗೆ ಬರುತ್ತಿರುವಾಗ ಆನೆಕಾಡು ಬಳಿ ಯಾವುದೋ ಕಾಡು ಪ್ರಾಣಿ ರಸ್ತೆಗೆ ಅಡ್ಡ ಬಂದಿದ್ದು ಚಾಲಕ ಅವಿನಾಶ್‌ ರಾವ್‌ರವರು ಏಕಾ ಏಕಿ ಅಜಾಗರೂಕತೆಯಿಂದ ಕಾರನ್ನು ಬ್ರೇಕ್‌ ಹಾಕಿದ ಪರಿಣಾಮ ಕಾರು ರಸ್ತೆಯಲ್ಲಿ ಮಗುಚಿಕೊಂಡು ಕಾರಿನಲ್ಲಿದ್ದ ವಿ.ಮುನಿರಾಜ್ ಹಾಗೂ ಡಿ.ಆರ್.ಮುನಿರಾಜ್‌ ಎಂಬವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಸ್ಕೂಟರ್ ಅವಘಢ

ದಿನಾಂಕ 21/10/2018ರಂದು ಕುಶಾಲನಗರದ ಬಿ.ಎಂ.ರಸ್ತೆಯ ಫಾತಿಮಾ ಜಂಕ್ಷನ್ ಬಳಿ ಕೊಪ್ಪ ಕಡೆಯಿಂದ ಬಾಬು ಲಾಲ್ ನಾಯ್ಕ ಎಂಬವರು ಒಂದು ಸ್ಕೂಟರನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಏಕಾ ಏಕಿ ಬ್ರೇಕ್ ಹಾಖಿದ ಪರಿಣಾಮ ಸ್ಕೂಟರ್ ಆತನ ನಿಯಂತ್ರಣ ತಪ್ಪಿ ಮಗುಚಿಕೊಂಡು ಬಾಬು ಲಾಲ್ ನಾಯ್ಕ್‌ರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಪಾದಚಾರಿಗೆ ಕಾರು ಡಿಕ್ಕಿ

ದಿನಾಂಕ 21/10/2018ರಂದು ಭಾಗಮಂಡಲ ನಿವಾಸಿ ನಿಡ್ಯಮಲೆ ರವಿ ಎಂಬವರು ಭಾಗಮಂಡಲದ ನಿಡ್ಯಮಲೆ ದಾಮೋದರ ಎಂಬವರ ಮನೆಯ ಬಳಿಯ ಸಾರ್ವಜನಿಕ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ತಲಕಾವೇರಿ ಕಡೆಗೆ ಹೋಗುತ್ತಿದ್ದ ಒಂದು ಕಾರನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ರವಿವರವರಿಗೆ ಡಿಕ್ಕಿಪಡಿಸಿ ಕಾರನ್ನು ನಿಲ್ಲಿಸದೆ ಹೋಗಿದ್ದು ರವಿರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಭಾಗಮಂಡಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವಿದ್ಯುತ್ ಸ್ಪರ್ಷ ; ವ್ಯಕ್ತಿ ಸಾವು

ದಿನಾಂಕ 21/10/2018ರಂದು ಮೇಕೇರಿ ಬಳಿಯ ಪೊಕ್ಕಳಂಡ್ರ ಭೋಜಪ್ಪ ಎಂಬವರು ಅವರ ಕಾಫಿ ತೋಟಕ್ಕೆ ಹೋಗಿದ್ದು ಮರಳಿ ಬರುವಾಗ ಅಲ್ಯುಮಿನಿಯಂ ಏಣಿಯನ್ನು ತರುವಾಗ ಏಣಿಯು ಮೇಲೆ ಹಾದು ಹೋಗಿದ್ದ ವಿದ್ಯುತ್ ತಂತಿಗೆ ತಾಗಿ ವಿದ್ಯುತ್ ಹರಿದು ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ದೇಗುಲ ಕಳವು

ದಿನಾಂಕ 20/10/2018ರ ರಾತ್ರಿ ವೇಳೆ ಶ್ರೀಮಂಗಲ ಬಳಿಯ ತಾವಳಗೇರಿಯ ಮಹಾದೇವರ ದೇವಸ್ಥಾನದ ಬಾಗಿಲ ಬೀಗವನ್ನು ಯಾರೋ ಕಳ್ಳರು ಮುರಿದು ಒಳ ಪ್ರವೇಶಿಸಿ ದೇವಸ್ಥಾನದಲ್ಲಿದ್ದ ಸುಮಾರು ರೂ.20,000/- ಬೆಲೆ ಬಾಳುವ ದೇವರ ಪಂಚ ಲೋಹದ ವಿಗ್ರಹವನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸರು ಪ್ರಕರಣದ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.