Crime News

ಆಕಸ್ಮಿಕ ಗುಂಡು ತಗುಲಿ ವ್ಯಕ್ತಿ ಸಾವು:

ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಹೆಮ್ಮೆತ್ತಾಳು ಮಕ್ಕಂದೂರು ಗ್ರಾಮದ ನಿವಾಸಿ ಅಯ್ಯಕುಟ್ಟೀರ ದೇವಯ್ಯ ಎಂಬವರ ಮಗ ಐಯ್ಯಕುಟ್ಟೀರ ರಂಜಿತ್ ಮಾಚಯ್ಯ ಎಂಬವರು ದಿನಾಂಕ 18-10-2018 ರಂದು ತನ್ನ ಸ್ನೇಹಿತ ಕಾಳಿಮಾಡ ದಿನೇಶನೊಂದಿಗೆ ತೋಟದ ಕಡೆಗೆ ಹೋಗಿದ್ದು  ಹೋಗುವಾದ ಕೋವಿಗಳನ್ನು ಸಹ ತೆಗೆದುಕೊಂಡು ಹೋಗಿದ್ದು,  ಸಮಯ ಸಂಜೆ 6-00 ಗಂಟೆಯ ಸಮಯದಲ್ಲಿ ಕಾಳಿಮಾಡ ದಿನೇಶನ ಕೈಯಲ್ಲಿದ್ದ ಕೋವಿಯಿಂದ ಒಂದು ಗುಂಡು ಹಾರಿ ಅವರ ಜೋತೆಗೆ ಹೋಗಿದ್ದ ಐಯ್ಯಕುಟ್ಟೀರ ರಂಜಿತ್ ಮಾಚಯ್ಯನವರಿಗೆ ತಾಗಿ ಅವರು ಗಂಭೀರವಾಗಿ ಗಾಯಗೊಂಡು ಅವರನ್ನು ಆಸ್ಪತ್ರೆಗೆ ಸಾಗಿಸುವಾಗ ಅವರು ಮೃತಪಟ್ಟಿದ್ದು, ಈ ಸಂಬಂಧ  ಅಯ್ಯಕುಟ್ಟೀರ ದೇವಯ್ಯನವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಆಕಸ್ಮಿಕ ಬಾವಿಗೆ ಬಿದ್ದು ವ್ಯಕ್ತಿ ಸಾವು:

ಮಡಿಕೇರಿ ನಗರದ ಕೊಹಿನೂರು ರಸ್ತೆಯಲ್ಲಿ  ಪಿ.ಆರ್. ರಾಮಶರ್ಮ ಎಂಬವರ ಅಂಗಡಿಯ ಹತ್ತಿರವಿರುವ ಬಾವಿಯಲ್ಲಿ ಒಬ್ಬ ವ್ಯಕ್ತಿಯ ಶವ ಪತ್ತೆಯಾಗಿದ್ದು, ಆತನನ್ನು ಹೊರಗೆ ತೆಗೆದು ನೋಡಿದಾಗ  ಆತನು ಮಡಿಕೇರಿ ನಗರದಲ್ಲಿ ಚಿಂದಿ ಆಯುವ  ಕೆಲಸವನ್ನು ಮಾಡುತ್ತಿದ್ದು ವಿಪರೀತ ಮದ್ಯಪಾನ ಮಾಡುವ ಚಟವಿರುವುದಾಗಿದ್ದು ಆಕಸ್ಮಿಕವಾಗಿ ಬಾವಿಗೆ ಬಿದ್ದು ಸಾವನಪ್ಪಿರಬಹುದಾಗಿ ಕಂಡು ಬಂದಿದ್ದು, ಈ ಸಂಬಂಧ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ನೇಣುಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ:

ಕುಶಾಲನಗರ ಪಟ್ಟಣ ಠಾಣಾ ಸರಹದ್ದಿನ ವೀರಭೂಮಿ, ಗುಮ್ಮನಕೊಲ್ಲಿ ಗ್ರಾಮದಲ್ಲಿ ವಾಸವಾಗಿದ್ದ ತೇಜಸ್ ಎಂಬ ವ್ಯಕ್ತಿ ದಿನಾಂಕ 22-10-2018 ರಂದು ತಮ್ಮ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು  ಮೃತರ ಅಳಿಯ ಕೆ.ಜಿ. ಮಂಜುನಾಥ ಎಂಬವರು ನೀಡಿರುವ ದೂರಿನ ಮೇರೆಗೆ ಕುಶಾಲನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.