Crime News

ಗಾಂಜಾ ಸೇವನೆ ಮಾಡುತ್ತಿದ್ದ ವ್ಯಕ್ತಿಗಳ ಬಂಧನ

ದಿನಾಂಕ 22-10-2018 ರಂದು ಮಡಿಕೇರಿ ನಗರ ಠಾಣೆಯ ಪಿ.ಎಸ್.ಐ. ಷಣ್ಮುಗಂ ರವರು ಸಿಬ್ಬಂದಿಯವರೊಂದಿಗೆ ಗಸ್ತು ಮಾಡುತ್ತಿರುವಾಗ ಮ್ಯಾನ್ಸ್ ಕಾಂಪೌಂಡ್ ನ ಈಜು ಕೊಳದ ಬಳಿ ಗಾಂಜಾ ಸೇವನೆ ಮಾಡುತ್ತಿದ್ದಾರೆಂದು ಸಿಕ್ಕಿದ ಮಾಹಿತಿ ಮೇರೆಗೆ ಹೋಗಿ ಪರಿಶೀಲಿಸಿದಾಗ ಸುಮಾರು 9 ಮಂದಿ ಗಾಂಜಾ ಸೇವನೆ ಮಾಡುತ್ತಿದ್ದು ಅವರನ್ನು ವಶಕ್ಕೆ ತೆಗೆದುಕೊಂಡು ವೈಧ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ವೈಧ್ಯಾದಿಕಾರಿಯವರ ಪರೀಕ್ಷಾ ವರದಿಯಿಂದ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿರುವುದರಿಂದ ಮಡಿಕೇರಿ ನಗರ ಠಾಣೆಯಲ್ಲಿ  ಪ್ರಕರಣ ದಾಖಲಿಸಿಕೊಂಡಿರುತ್ತಾರೆ.

ಮಹಿಳೆ ಆತ್ಮಹತ್ಯೆ

ಮಹಿಳೆಯೊಬ್ಬರು ಜೀವನದಲ್ಲಿ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿರಾಜಪೇಟೆ ನಗರದಲ್ಲಿ ವರದಿಯಾಗಿದೆ.ವಿರಾಜಪೇಟೆ ನಗರದ ನಿವಾಸಿ ಮುತ್ತುಲಕ್ಷ್ಮಿ ಎಂಬುವವರು ದಿನಾಂಕ 23-10-2018 ರಂದು ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಜೂಜಾಟ ಪ್ರಕರಣ

ದಿನಾಂಕ 24-10-2018 ರಂದು ಪೊನ್ನಂಪೇಟೆ ಠಾಣೆಯ ಉಪ ನಿರೀಕ್ಷಕರಾದ ಮಹೇಶ್ ರವರಿಗೆ ಕಾನೂರು ಸೇತುವೆಯ ಬಳಿ ತೋಟದಲ್ಲಿ ಅಕ್ರಮವಾಗಿ ಇಸ್ಪೀಟು ಎಲೆಗಳಿಂದ ಜೂಜಾಟ ಆಡುತ್ತಿರುವುದಾಗಿ ಸಿಕ್ಕಿದ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ದಾಳಿ ಮಾಡಿ ಆಟವಾಡುತ್ತಿದ್ದ ಕೋತೂರು ಗ್ರಾಮದವರಾದ ನಾಗರಾಜು, ಉಮೇಶ ಮತ್ತು ಬೆಕ್ಕೆಸೊಡ್ಲೂರು ಗ್ರಾಮದವರಾದ  ಶಮಿ ಮತ್ತು ಲಕ್ಷ್ಮಣ ರವರನ್ನು ವಶಕ್ಕೆ ಪಡೆದಕೊಂಡು, ಆಟಕ್ಕೆ ಬಳಸಿದ ನಗದು ಹಣ 2,500 ರೂಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿರುತ್ತಾರೆ.

ಹಲ್ಲೆ ಪ್ರಕರಣ

ದಿನಾಂಕ 24-10-2018 ರಂದು ಶನಿವಾರಸಂತೆಯ ಮಾದ್ರೆ ಗ್ರಾಮದ ನಿವಾಸಿಯಾದ ಹೊನ್ನಯ್ಯ ಮತ್ತು ಅವರ ಪತ್ನಿ ಕೆಂಚಮ್ಮರವರು ಮನೆಯ ಹೊರಗೆ ಕುಳಿತುಕೊಂಡು ಮಾತನಾಡುತ್ತಿರುವಾಗ ಸುರೇಶ್ ಎಂಬುವವರು ವಿನಾ ಕಾರಣ ಜಗಳ ತೆಗೆದು ಕೆಂಚಮ್ಮನವರ ಮೇಲೆ ಹಲ್ಲೆ ನಡೆಸಿದ್ದು ಈ ಬಗ್ಗೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಜೂಜಾಟ ಪ್ರಕರಣ

ದಿನಾಂಕ 24-10-2018 ರಂದು ಸಿದ್ದಾಪುರ ಠಾಣೆಯ ಉಪ ನಿರೀಕ್ಷಕರಾದ ದಯಾನಂದ ರವರಿಗೆ ನೆಲ್ಲಿಹುದಿಕೇರಿ ಗ್ರಾಮದ ಬೆಟ್ಟದಕಾಡು ಎಂಬಲ್ಲಿ ಅಕ್ರಮವಾಗಿ ಇಸ್ಪೀಟು ಎಲೆಗಳಿಂದ ಜೂಜಾಟ ಆಡುತ್ತಿರುವುದಾಗಿ ಸಿಕ್ಕಿದ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ದಾಳಿ ಮಾಡಿ ಆಟವಾಡುತ್ತಿದ್ದ ನೆಲ್ಲಿಹುದಿಕೇರಿಯವರಾದ ಮೋಹನ್ ದಾಸ್, ಶಂಶುದ್ದೀನ್ ಮತ್ತು ರಾಜರರನ್ನು ವಶಕ್ಕೆ ಪಡೆದಕೊಂಡು, ಆಟಕ್ಕೆ ಬಳಸಿದ ನಗದು ಹಣ 4,680 ರೂಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿರುತ್ತಾರೆ.

 ಜೀವನದಲ್ಲಿ ಜುಗುಪ್ಸೆ ಮಹಿಳೆ ಆತ್ಮಹತ್ಯೆ

ವಿರಾಜಪೇಟೆ ತಾಲೂಕಿನ ಮೈತಾಡಿ ಗ್ರಾಮದ ನಿವಾಸಿಯಾದ 80 ವರ್ಷ ಪ್ರಾಯದ ಪಾತೆ ಎಂಬುವವರು ಸುಮಾರು ಒಂದು ವಾರದಿಂದ ಕಾಣೆಯಾಗಿದ್ದು ದಿನಾಂಕ 24-10-2018 ರಂದು ದೇವಣಗೇರಿ ಗ್ರಾಮದ ಮುಕ್ಕಾಟಿರ ವಿನಯ್ ರವರ ತೋಟದಲ್ಲಿರುವ ಕೆರೆಯಲ್ಲಿ ಮೃತದೇಹವು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸದರಿಯವರು ನೋಡಿಕೊಳ್ಳಲು ಯಾರೂ ಇಲ್ಲ ಎಂದು ನೊಂದುಕೊಂಡು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮಗಳು ಪಾರ್ವತಿಯವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.