Crime News

ಹಲ್ಲೆ ಪ್ರಕರಣ

ದಿನಾಂಕ 24/10/2018ರ ಸಂಜೆ ವೇಳೆ ಕುಶಾಲನಗರ ಬಳಿಯ ಹುದುಗೂರು ನಿವಾಸಿ ಜೀವನ್ ಎಂಬವರು ಸೀತ ಕಾಲೋನಿಯಲ್ಲಿರಯವ ಅವರ ದೊಡ್ಡಪ್ಪ ನಾಗರವರ ಮನೆಯಿಂದ ಮರಳಿ ಬರುತ್ತಿರುವಾಗ ಹುದುಗೂರು ಗ್ರಾಮದ ನಿವಾಸಿಗಳಾದ ಗಣೇಶ, ದಿನೇಶ ಮತ್ತು ಮದನ್ ಎಂಬವರು ಸೇರಿಕೊಂಡು ಹಳೆ ದ್ವೇಷದ ಕಾರಣದಿಂದ ಜೀವನ್‌ರವರ ಮೇಲೆ ಹಲ್ಲೆ ಮಾಡಿದ್ದು ತಡೆಯಲು ಬಂದ ನಾಗರವರಿಗೂ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ರಸ್ತೆ ಅಪಘಾತ

ದಿನಾಂಕ 25/10/2018ರಂದು ಶನಿವಾರಸಂತೆ ಬಳಿಯ ಶುಂಠಿ ನಿವಾಸಿ ಯತೀಶ ಎಂಬವರು ಅವರ ಮೋಟಾರು ಸೈಕಲಿನಲ್ಲಿ ಧರ್ಮಪ್ಪ ಎಂಬವರೊಂದಿಗೆ ಸೋಮವಾರಪೇಟೆಯಿಂದ ಮರಳಿ ಊರಿಗೆ ಹೋಗುತ್ತಿರುವಾಗ ಕಿಬ್ಬೆಟ್ಟ ಗ್ರಾಮದ ಬಳಿ ಒಂದು ಕಾರನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಯತೀಶ್‌ರವರು ಚಾಲಿಸುತ್ತಿದ್ದ ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ಯತೀಶ್‌ ಹಾಗೂ ಧರ್ಮಪ್ಪರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ

ಸೋಮವಾರಪೇಟೆ ಬಳಿಯ ಕುಂದಳ್ಳಿ ನಿವಾಸಿ ಚೆನ್ನಪ್ಪ ಎಂಬವರು ದಿನಾಂಕ 13/10/2018ರಿಂದ 25/10/2018 ನಡುವೆ ಕುಂದಳ್ಳಿಯ ಪರಮೇಶ್ವರ್ ಎಂಬವರಿಗೆ ಸೇರಿದ ಕಾಡು ಜಾಗದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ. ಚಿನ್ನಪ್ಪರವರು ಯಾವುದೋ ಕಾರಣಕ್ಕೆ ಜೀವನದಲ್ಲಿ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 ಕಳವು ಪ್ರಕರಣ

ದಿನಾಂಕ 22/10/2018ರ ರಾತ್ರಿ ವೇಳೆ ಮಡಿಕೇರಿ ಬಳಿಯ ಹಾಕತ್ತೂರು ನಿವಾಸಿ ಮಹಮದ್ ಕೋಯ ಎಂಬವರ ಅಂಗಡಿಯ ಹಿಂದಿನ ಬಾಗಿಲು ಮೂಲಕ ಒಳ ನುಗ್ಗಿದ ಯಾರೋ ಕಳ್ಳರು ಹೋಟೆಲಿನಲ್ಲಿದ್ದ ಸುಮಾರು ರೂ. 5-6 ಸಾವಿರ ನಗದು ಹಾಗೂ ಪಕ್ಕದ ರಂಶಾದ್‌ ಎಂಬವರ ಹೋಟೆಲಿನಿಂದ ರೂ.5000 ನಗದು ಹಾಗೂ ಇನ್ನಿತರ ವಸ್ತುಗಳು ಸೇರಿ ಒಟ್ಟು ರೂ. 23,000/- ಮೌಲ್ಯದ ವಸ್ತುಗಳನ್ನು ಕಳವು ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.