Crime News

ಮಹಿಳೆ ಆತ್ಮಹತ್ಯೆ

                    ದಿನಾಂಕ 11/04/2018ರಂದು ವಿರಾಜಪೇಟೆ ಬಳಿಯ ವಿ.ಬಾಡಗ ನಿವಾಸಿ ಪಣಿ ಎರವರ ಪಾಲಿ ಎಂಬವರು ಅವರ ಮಗ ಮಂಜುರವರು ಅಕಾಲಿಕವಾಗಿ ಮರಣ ಹೊಂದಿದ ವಿಚಾರವಾಗಿ ಜುಗುಪ್ಸೆಗೊಂಡು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಮರದಿಂದ ಬಿದ್ದು ವ್ಯಕ್ತಿ ಸಾವು

                   ದಿನಾಂಕ 20/03/2018ರಂದು ಅಭ್ಯತ್‌ಮಂಗಲ ಬಳಿಯ ಗ್ರೀನ್‌ ಫೀಲ್ಡ್ ತೋಟದ ಕಾರ್ಮಿಕ ಶೇಖರ್ ಎಂಬವರು ಮರದಲ್ಲಿ ಕರಿ ಮೆಣಸು ಕುಯ್ಯುತ್ತಿರುವಾಗ ಆಕಸ್ಮಿಕವಾಗಿ ಕೆಳಗೆ ಬಿದ್ದು ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರು ದಿನಾಂಕ 12/04/2018ರಂದು ಚಿಕಿತ್ಸೆ ಫಲಕಾರಿಯಾಗದೆ ಮರಣ ಹೊಂದಿದ್ದುತೋಟದಲ್ಲಿ ಮರ ಹತ್ತಿ ಕೆಲಸ ಮಾಡುತ್ತಿರುವಾಗ ಸೂಕ್ತ ರಕ್ಷಣಾ ವ್ಯವಸ್ಥೆಯನ್ನು ಮಾಡದೆ ತೋಟದ ಆಡಳಿತ ಮಂಡಳಿಯ ಪ್ರಮೋದ್ ಕುರಿಯನ್ ಮತ್ತು ಜಾರ್ಜ್‌ ಎಂಬವರುಗಳು ನಿರ್ಲಕ್ಷ್ಯತೆ ವಹಿಸಿದ್ದರೆಂದು ಆರೋಪಿಸಿ ನೀಡಲಾದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಬಂದೂಕು ಕಳವು

                        ದಿನಾಂಕ 10/04/2018ರಂದು ನಾಪೋಕ್ಲು ಬಳಿಯ ನೆಲಜಿ ನಿವಾಸಿ ಮಣವಟ್ಟಿರ ಕುಶಾಲಪ್ಪ ಎಂಬವರು ಕೆಲಸದ ನಿಮಿತ್ತ ಮೈಸೂರಿಗೆ ಹೋಗಿ ದಿನಾಂಕ 12/04/2018ರಂದು ಮನೆಗೆ ಬಂದು ನೋಡುವಾಗ ಯಾರೋ ಕಳ್ಳರು ಮನೆಯ ಮುಂದಿನ ಬಾಗಿಲಿನ ಬೀಗ ಮುರಿದು ಒಳ ಪ್ರವೇಶಿಸಿ ಮನೆಯ ಮಲಗುವ ಕೋಣೆಯಲ್ಲಿದ್ದ ಸುಮಾರು ರೂ.19,000/- ಬೆಲೆ ಬಾಳುವ ಒಂದು ಎಸ್‌ಬಿಬಿಎಲ್‌ ಬಂದೂಕನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published.