Crime News

ಆತ್ಮಹತ್ಯೆ ಪ್ರಕರಣ

ಮಡಿಕೇರಿ ನಗರದ ಚಾಂಮುಡೇಶ್ವರಿ ನಗರದ ನಿವಾಸಿ ಮಹೇಂದ್ರ ವರ್ಮಾ @ ಮಹೇಶ್ ಎಂಬುವವರು ಜೀವನದಲ್ಲಿ ಜುಗುಪ್ಸೆಗೊಂಡು ದಿನಾಂಕ 25-10-2018ರಂದು ಮನೆಯಲ್ಲಿ ರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಹಲ್ಲೆ ಪ್ರಕರಣ

ದಿನಾಂಕ 25-10-2018 ರಂದು ಮಡಿಕೇರಿ ತಾಲೋಕಿನ ಮಕ್ಕಂದೂರು ಗ್ರಾಮದ ನಿವಾಸಿಯಾದ ಶಿವಕುಮಾರ್ ರವರು ತಮ್ಮ ಭೀಮಯ್ಯನವರೊಂದಿಗೆ ತೋಟದಲ್ಲಿ ಬಿದ್ದಿದ್ದ ಮರಗಳನ್ನು ತೆರವುಗೊಳಿಸುತ್ತಿರುವಾಗ ಕುಶಾಲಪ್ಪ, ಲೋಕಪ್ಪ ಮತ್ತು ವೈಶಾಕ್ ಎಂಬುವವರು ಜಗಳ ಮಾಡಿ ಹಲ್ಲೆ ನಡೆಸಿದ್ದು ಈ ಬಗ್ಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಆಟೋ ರಿಕ್ಷಾ ಅಪಘಾತ

ದಿನಾಂಕ 26-10-2018 ರಂದು ಕಡಗದಾಳು ಗ್ರಾಮದ ನಿವಾಸಿಯಾದ ಫಾತಿಮಾ ಎಂಬುವವರು ಕಡಗದಾಳುವಿನ ಕ್ಲೋಸ್ ಬರ್ನ್ ಎಂಬಲ್ಲಿಂದ ಮನೆಗೆ ಆಟೋ ರಿಕ್ಷಾದಲ್ಲಿ ಬರುತ್ತಿರುವಾಗ ಆಟೋವನ್ನು ಚಾಲಕ ಮಂಜು ಎಂಬುವವರು ಅಜಾಗರೂಕತೆಯಿಂದ ಚಾಲನೆ ಮಾಡಿ ಬೀಳಿಸಿದ ಪರಿಣಾಮ ಫಾತಿಮಾರವರಿಗೆ ಗಾಯವಾಗಿದ್ದು ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

 ಪಾದಚಾರಿಗೆ ಬೈಕ್ ಡಿಕ್ಕಿ

ದಿನಾಂಕ 26-10-2018 ರಂದು ಮಡಿಕೇರಿ ತಾಲೋಕಿನ ನಾಪೋಕ್ಲುವಿನ ನಿವಾಸಿಯಾದ ಕಾವೇರಮ್ಮ ಎಂಬುವವರು ವಾಯು ವಿಹಾರಕ್ಕೆಂದು ಹೋದವರು ಮನೆಯ ಹತ್ತಿರ ನಡೆದುಕೊಂಡು ಹೋಗುತ್ತಿರುವಾಗ ಇಲಿಯಾಸ್ ಎಂಬುವವರು ಮೋಟಾರು ಸೈಕಲನ್ನು ಅಜಾಗರೂಕತೆಯಿಂದ ಚಾಲನೆ ಮಾಡಿ ಕಾವೇರಮ್ಮನವರಿಗೆ ಡಿಕ್ಕಿಪಡಿಸಿದ ಪರಿಣಾಮ ಗಾಯವಾಗಿದ್ದು ಈ ಬಗ್ಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

ಸೋಮವಾರಪೇಟೆ ನಗರದ ಡಿ ಬ್ಲಾಕ್ ನ ನಿವಾಸಿಯಾದ ಮಹಮ್ಮದ್ ಖಾಸಿಂ ಎಂಬುವವರು ತನ್ನ ಪತ್ನಿಯೊಡನೆ ದಿನಾಂಕ 23-10-2018 ರಂದು ಹಾಸನದಲ್ಲಿರುವ ಮಗಳ ಮನೆಗೆ ಹೋಗಿದ್ದವರು ದಿನಾಂಕ 25-10-2018 ರಂದು ವಾಪಾಸ್ಸು ಬಂದು ನೋಡುವಾಗ  ಮನೆಯ ಮುಂದಿನ ಬಾಗಿಲಿನ ಬೀಗವನ್ನು ಯಾರೋ ಮುರಿದು ಒಳನುಗ್ಗಿ ಬೀರುವಿನಲ್ಲಿಟ್ಟಿದ್ದ ನಗದು ರೂ 15,000 ವನ್ನು ಕಳವು ಮಾಡಿದ್ದು, ಈ ಬಗ್ಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಆತ್ಮಹತ್ಯೆ ಪ್ರಕರಣ

ಮಡಿಕೇರಿ ತಾಲೋಕಿನ ಕಡಗದಾಳು ಗ್ರಾಮದಲ್ಲಿ ವಾಸವಿರುವ ನಾಣುರವರು ಜೀವನದಲ್ಲಿ ಜುಗುಪ್ಸೆಗೊಂಡು ದಿನಾಂಕ 26-10-2018ರಂದು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಹಲ್ಲೆ ಪ್ರಕರಣ

ದಿನಾಂಕ 26-10-2018 ರಂದು ಮಕ್ಕಂದೂರು ಗ್ರಾಮದ ನಿವಾಸಿಯಾದ ಲೋಕಪ್ಪನವರು ಕೆಲಸದ ನಿಮಿತ್ತ ಮಡಿಕೇರಿಗೆ ಹೋಗುವ ಸಲುವಾಗಿ ಮಕ್ಕಂದೂರಿನಲ್ಲಿ ಬಸ್ಸಿಗಾಗಿ ಕಾಯುತ್ತಿರುವಾಗ ಅದೇ ಗ್ರಾಮದವರಾದ ಮೋಹನ್ ಕುಮಾರ್ ಮತ್ತು ಗಗನ್ ರವರು ಹಳೇ ವೈಷಮ್ಯದಿಂದ ಜಗಳ ಮಾಡಿ ಹಲ್ಲೆ ನಡೆಸಿದ್ದು ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.