Crime News

ವ್ಯಕ್ತಿಯ ಆತ್ಮಹತ್ಯೆ

ಶನಿವಾರಸಂತೆಯ ಸುಳುಗಳಲೆ ಕಾಲೋನಿಯ ನಿವಾಸಿ ಕಾಂತರಾಜುರವರು ಖಾಯಿಲೆಯಿಂದ ಬಳಲುತ್ತಿದ್ದು ಇದೇ ವಿಚಾರದಲ್ಲಿ ಜೀವನದಲ್ಲಿ ಜುಗುಪ್ಸೆಗೊಂಡು ದಿನಾಂಕ 26-10-2018 ರಂದು ಮನೆಯಲ್ಲಿ ರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಹಲ್ಲೆ ಪ್ರಕರಣ

ದಿನಾಂಕ 27-10-2018 ರಂದು ಸೋಮವಾರಪೇಟೆ ನಗರದ ಹೌಸಿಂಗ್ ಬೋರ್ಡ್ ನಿವಾಸಿ ರಾಮಪ್ಪನವರು ಇಗ್ಗೋಡ್ಲು ಗ್ರಾಮದಲ್ಲಿರುವ ಗದ್ದೆಯಲ್ಲಿ ಕಂಬವನ್ನು ನೆಟ್ಟು ಬೇಲಿ ಹಾಕುತ್ತಿರುವಾಗ ತಮ್ಮ ಪೂವಯ್ಯನವರಲ್ಲಿ ಕೆಲಸ ಮಾಡಿಕೊಂಡಿರುವ ಕೆಲಸಗಾರ ಜಗಳ ತೆಗೆದು ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ವ್ಯಕ್ತಿ ಕಾಣೆ

ದಿನಾಂಕ 22-10-2018 ರಂದು ಕುಶಾಲನಗರದ ಕೂಡುಮಂಗಳೂರು ಗ್ರಾಮದ ನಿವಾಸಿಯಾದ ಹನುಮಂತ ಮೂರ್ತಿ ಎಂಬುವವರು ಕುಶಾಲನಗಕ್ಕೆ ಹೋಗಿ ಬರುವುದಾಗಿ ಪತ್ನಿಗೆ ತಿಳಿಸಿ ಹೋದವರು ವಾಪಾಸ್ಸು ಮನೆಗೆ ಬಾರದೇ ಕಾಣೆಯಾಗಿದ್ದು ಈ ಬಗ್ಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಬೈಕಿಗೆ ಸ್ಕೂಟರ್ ಡಿಕ್ಕಿ

ದಿನಾಂಕ 26-10-2018 ರಂದು ಕುಶಾಲನಗರ ಪಟ್ಟಣದ ಮ್ಯಾರಿಸ್ ಹೊಟೆಲ್ ಹತ್ತಿರ ಶಿವಲಿಂಗ ಎಂಬುವವರು ಮೋಟಾರು ಸೈಕಲಿನಲ್ಲಿ ಹೋಗುತ್ತಿರುವಾಗ ಸ್ಕೂಟರನ್ನು ಪುನಿತ್ ಎಂಬುವವರು ಅಜಾಗರೂಕತೆಯಿಂದ ಚಾಲನೆ ಮಾಡಿ ಮೋಟಾರು ಸೈಕಲಿಗೆ ಡಿಕ್ಕಿಪಡಿಸಿದ ಪರಿಣಾಮ ಬೈಕಿನ ಚಾಲಕ ಶಿವಲಿಂಗರವರಿಗೆ ಗಾಯವಾಗಿದ್ದು ಈ ಬಗ್ಗೆ ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಹಲ್ಲೆ ಪ್ರಕರಣ

ದಿನಾಂಕ 27-10-2018 ರಂದು ಶನಿವಾರಸಂತೆಯ ದೀಣೆಕೊಪ್ಪ ಗ್ರಾಮದ ನಿವಾಸಿ ಕುಮಾರಪ್ಪ ಎಂಬುವವರು ತೋಟಕ್ಕೆ ಹೋಗುತ್ತಿರುವಾಗ ನದೀಶ್ ಎಂಬುವವರು ಹಳೇ ದ್ವೇಷದಿಂದ ಹಲ್ಲೆ ನಡೆಸಿದ್ದು  ಈ ಬಗ್ಗೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.