Crime news

ತೋಟಕ್ಕೆ ನುಗ್ಗಿ ಕಾಫಿಗಿಡ ಕಡಿದು ನಷ್ಟ:

ಮಡಿಕೇರಿ ತಾಲೋಕು ಕೊಳಗದಾಳು ಗ್ರಾಮದ ನಿವಾಸಿ ಪಿ.ಬಿ. ರಾಮಪ್ಪ ಎಂಬವರ ಕಾಫಿತೋಟಕ್ಕೆ ದಿನಾಂಕ 22-10-2018 ರಂದು ಅದೇ ಗ್ರಾಮದ ಪಿ.ಬಿ. ನಾಣಯ್ಯ ಮತ್ತು ಇತರೆ ಮೂವರು ಸೇರಿ ಅಕ್ರಮ ಪ್ರವೇಶ ಮಾಡಿ ಕಾಫಿತೋಟದಲ್ಲಿದ್ದ  ಕಾಫಿ ಗಿಡಗಳನ್ನು ಕಡಿದು ಅಂದಾಜು 40,000/- ರೂ. ನಷ್ಟಪಡಿಸಿರುತ್ತಾರೆಂದು ಪಿ.ಬಿ. ರಾಮಪ್ಪನವರು ನೀಡಿದ ದೂರಿನ ಮೇರೆಗೆ ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಹಳೇ ದ್ವೇಷ ಪರಸ್ಪರ ಹಲ್ಲೆ:

ದಿನಾಂಕ 28-10-2018 ರಂದು ಶನಿವಾರಸಂತೆಯ ಯಶಸ್ವಿನಿ ಕಲ್ಯಾಣ ಮಂಟಪದಲ್ಲಿ ನಡೆದ  ಮದುವೆ ಕಾರ್ಯಕ್ರಮಕ್ಕೆ ಶನಿವಾರಸಂತೆ ತ್ಯಾಗರಾಜ ಕಾಲೋನಿ ನಿವಾಸಿಗಳಾದ ಎಂ.ಆರ್. ದಿನೇಶ್  ಮತ್ತು  ಎಸ್‍.ಟಿ. ಕೀರ್ತಿ ಎಂಬವರು ಹೋಗಿದ್ದು  ಹಳೇ ದ್ವೇಷದ ಹಿನ್ನೆಲೆಯಲ್ಲಿ ಅವರಿಬ್ಬರು  ಪರಸ್ಪರ ಜಗಳವಾಡಿಕೊಂಡಿರುವಾಗ್ಗೆ  ಜಗಳವನ್ನು ಬಿಡಿಸಲು ಬಂದ ಗೃತಿನ್ ಹಾಗು ಮಿಲನ್ ರವರ ಮೇಲೆ ಹಲ್ಲೆಯಾಗಿದ್ದು, ಇಬ್ಬರು ನೀಡಿದ ಪ್ರತ್ಯೇಕ ದೂರುಗಳ ಮೇರೆಗೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ದೂರುಗಳು ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.