Crime News

ವ್ಯಕ್ತಿಯ ಆತ್ಮಹತ್ಯೆ

ಮಡಿಕೇರಿ ನಗರದ ಶಾಂತಿನಿಕೇತನ ಎಂಬಲ್ಲಿ ವಾಸವಿರುವ ಮಂಜುನಾಥ ರೈ ಎಂಬುವವರು ಮನೋ ರೋಗದಿಂದ ಬಳಲುತ್ತಿದ್ದು ಇದೇ ವಿಚಾರದಲ್ಲಿ ಜೀವನದಲ್ಲಿ ಜುಗುಪ್ಸೆಗೊಂಡು ದಿನಾಂಕ 30-10-2018 ರಂದು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ವ್ಯಕ್ತಿ ಕಾಣೆ

ಮಡಿಕೇರಿ ನಗರದ ರಾಘವೇಂದ್ರ ದೇವಸ್ಥಾನದ ಹತ್ತಿರದ ನಿವಾಸಿ ಮಂಜು ಎಂಬುವವರು ದಿನಾಂಕ 23-10-2018 ರಂದು ಸಂಜೆ ಮನೆಯಿಂದ ಬಟ್ಟೆಗಳನ್ನು ತೆಗೆದುಕೊಂಡು ಹೊರಗಡೆ ಕೆಲಸಕ್ಕೆ ಹೋಗುವುದಾಗಿ ಹೇಳಿ ಹೋದವರು ಕಾಣೆಯಾಗಿದ್ದು ಈ ಬಗ್ಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಗಾಂಜಾ ಮಾರಾಟ ವ್ಯಕ್ತಿಯ ಬಂಧನ

ದಿನಾಂಕ 30-10-2018 ರಂದು ಮಡಿಕೇರಿ ತಾಲೋಕಿನ ಕುಂಜಿಲ ಗ್ರಾಮದ ನಿವಾಸಿಯಾದ ಅಶ್ರಫ್ ಎಂಬುವವರು ತನ್ನ ಬಾಪ್ತು ಟಾಟಾ ಐರಿಸ್ ವಾಹನದಲ್ಲಿ ಗ್ರಾಮದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದವನನ್ನು ಪತ್ತೆಹಚ್ಚಿದ ನಾಪೋಕ್ಲು ಠಾಣೆಯ ಪಿ.ಎಸ್.ಐ ನಂಜುಂಡ ಸ್ವಾಮಿಯವರು ಆತನನ್ನು ಬಂಧಿಸಿ ಸುಮಾರು 220 ಗ್ರಾಂ ನಷ್ಟು ಗಾಂಜಾವನ್ನು ವಶಪಡಿಸಿಕೊಂಡು ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ಹಳೇ ದ್ವೇಷದಿಂದ ವ್ಯಕ್ತಿಯ ನಿಂದನೆ

ದಿನಾಂಕ 29-10-2018 ರಂದು ಸುಂಟಿಕೊಪ್ಪದ ಗದ್ದೆಹಳ್ಳದ ನಿವಾಸಿಯಾದ ರಫಿಕ್ ಎಂಬುವವರು ಹಳೇ ದ್ವೇಷದಿಂದ ಉಸ್ಮಾನ್ ರವರಿಗೆ ಅವಾಚ್ಯ ಶಬ್ದಗಳಿಂದ ಬೈದು, ಸಮೀರ್ ಎಂಬುವವರ ಮನೆಯ ಮುಂದೆ ನಿಲ್ಲಿಸಿದ್ದ ಸ್ಕೂಟರನ್ನು ಒದ್ದು ಬೀಳಿಸಿ ಜಖಂಪಡಿಸಿ, ಮನೆಯ ಬಾಗಿಲನ್ನು ಕತ್ತಿಯಿಂದ ಕಡಿದು ನಷ್ಟಪಡಿಸಿದ್ದು ಈ ಬಗ್ಗೆ ಸಮೀರ್ ರವರು ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಪಾದಚಾರಿಗೆ ಜೀಪು ಡಿಕ್ಕಿ

ದಿನಾಂಕ 30-10-2018 ರಂದು ಕುಶಾಲನಗರದ ಬೈಚನಹಳ್ಳಿಯ ನಿವಾಸಿಯಾದ ರೇವಣ್ಣ ಎಂಬುವವರು ಟಿ.ವಿ.ಎಸ್ ಶೋ ರೂಂ ನ ಹತ್ತಿರ ನಡೆದುಕೊಂಡು ಹೋಗುತ್ತಿರುವಾಗ ಜೀಪನ್ನು ಅದರ ಚಾಲಕ ಬೆಳ್ಳಿಯಪ್ಪನವರು ಅಜಾಗರೂಕತೆಯಿಂದ ಚಾಲನೆ ಮಾಡಿ ಡಿಕ್ಕಿಪಡಿಸಿದ ಪರಿಣಾಮ ರೇವಣ್ಣನವರಿಗೆ ಗಾಯವಾಗಿದ್ದು ಈ ಬಗ್ಗೆ ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಕ್ರಮ ಮರಳು ಸಾಗಾಟಕ್ಕೆ ಯತ್ನ

ದಿನಾಂಕ 30-10-2018 ರಂದು ಬೆಳಗಿನ ಜಾವ ಕುಶಾಲನಗರ ಗ್ರಾಮಾಂತರ ಠಾಣೆಯ ಪಿ.ಎಸ್.ಐ ರವರಾದ ನವೀನ್ ಗೌಡರವರು ಮತ್ತು ಸಿಬ್ಬಂದಿಯವರು ನಂಜರಾಯಪಟ್ಟಣದ ದುಬಾರೆ ಪ್ರವಾಸಿ ತಾಣದ ಬಳಿ ಕಾವೇರಿ ನದಿಯಿಂದ ಅಕ್ರಮವಾಗಿ ಮರಳು ತೆಗೆದು ಅಶೋಕ್ ಲೈಲೆಂಡ್ ಗೂಡ್ಸ್ ವಾಹನ ಮತ್ತು ಪಿಕ್ ಅಪ್ ಜೀಪಿಗೆ ತುಂಬಿಸುತ್ತಿದ್ದ ರಂಗಸಮುದ್ರದ ನಿವಾಸಿಗಳಾದ ಕೆಂಪಣ್ಣ, ಪೊನ್ನಪ್ಪ ಮತ್ತು ನಂಜರಾಯಪಟ್ಟಣದವರಾದ ಮಜೀದ್, ಮಂಜುರವರನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿಕೊಂಡಿರುತ್ತಾರೆ.