Crime News

ಲಾರಿ ಅಪಘಾತ ಗಾಯಗೊಂಡ ಚಾಲಕ:

ದಿನಾಂಕ 30-10-2018 ರಂದು ಕೆಎ-09ಬಿ-9641ರ ಲಾರಿಯಲ್ಲಿ ಡೀಸೆಲ್ ತುಂಬಿಸಿಕೊಂಡು ಮೈಸೂರಿನಿಂದ ಮಡಿಕೇರಿ ಕಡೆಗೆ ಬರುತ್ತಿದ್ದ ಲಾರಿಯು ಕುಶಾಲನಗರ-ಮಡಿಕೇರಿ ರಾಷ್ಟ್ರೀಯ ಹೆದ್ದಾರಿ ಸುಂಟಿಕೊಪ್ಪದ ಬಳಿ ಲಾರಿಯು ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಮಗುಚಿಕೊಂಡ ಪರಿಣಾಮ ಲಾರಿ ಚಾಲಕ ರಮೇಶ್ ರವರು ಗಾಯಗೊಂಡಿದ್ದು, ಈ ಸಂಬಂಧ ಸದರಿ ಲಾರಿಯಲ್ಲಿ ಕ್ಲೀನರ್ ಆಗಿ ಕೆಲಸ ಮಾಡಿಕೊಂಡಿರುವ ಗುರುಪ್ರಸಾದ್ ರವರು ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ,

ಜಾಗಕ್ಕೆ ಅತಿಕ್ರಮ ಪ್ರವೇಶ:

ದಿನಾಂಕ 30/10/2018 ರಂದು ಸಮಯ 03-00 ಪಿ.ಎಂ ಗೆ   ಗೋಣಿಕೊಪ್ಪ ನಗರ ನಿವಾಸಿ ಭಾಗ್ಯಜ್ಯೋತಿ ಎಂಬವರ ಮನೆಯ ಪಕ್ಕದಲ್ಲಿ ವಾಸವಿರುವ ವೆಂಕಟಪ್ಪ ಮತ್ತು ಅವರ ಮಗ ಕಾರ್ತಿಕ್ ರವರು   ಭಾಗ್ಯಜ್ಯೋತಿಯವರ   ತಂದೆ,   ತಾಯಿ ಮೀನಾಕ್ಷಿ ಯವರ ಹೆಸರಿನಲ್ಲಿರುವ   ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಬೇಲಿಯನ್ನು ಕಿತ್ತು ಹಾಕಿ   2 ಕೈಹುಳಿ ಗಿಡಗಳನ್ನು ಕಡಿದು ನಷ್ಟ ಪಡಿಸಿದ್ದು ಇದನ್ನು ಕೇಳಲು ಹೋದ ಭಾಗ್ಯಜ್ಯೋತಿರವರಿಗೆ ಕೊಲೆ ಬೆದರಿಕೆ ಹಾಕಿದ್ದು ಈ ಸಂಬಂಧ ಭಾಗ್ಯಜ್ಯೋತಿ ರವರು ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ದಾರಿ ತಡೆದು ವ್ಯಕ್ತಿ ಮೇಲೆ ಹಲ್ಲೆ:

ವಿರಾಜಪೇಟೆ ನಗರದ ಬೋಗರಗಲ್ಲಿಯಲ್ಲಿ ವಾಸವಾಗಿರುವ ಶಕೀಲ್ ಅಹಮ್ಮದ್ ರವರು ದಿನಾಂಕ 31-10-2018 ರಂದು ತನ್ನ ಎಸ್ಟೀಮ್ ಕಾರು ಸಂಖ್ಯೆ KA-04-Z-3121 ರನ್ನು ಮೊಗರಗಲ್ಲಿಯ ಮುಖ್ಯ ರಸ್ತೆಯ ಬಳಿ ನಿಲ್ಲಿಸಿದ್ದು, ಕಾರು ಲಾಕ್ ಆಗಿದೆಯೋ ಇಲ್ಲವೇ ಎಂಬುದನ್ನು ಪರಿಶೀಲಿಸಿ ವಾಪಾಸ್ಸು ಸಮಯ ರಾತ್ರಿ 08-45 ಗಂಟೆಗೆ ಮನೆಯ ಕಡೆಗೆ ಬರುತ್ತಿರುವಾಗ್ಗೆ ಮೊಗರಗಲ್ಲಿಯ ನಿವಾಸಿಗಳಾದ ಯೂನಿಸ್, ಸಿಕಂದರ್ ಹಾಗು ಮೋಸಿನ್ ಎಂಬವರುಗಳು ಒಂದು ಮೋಟಾರ್ ಸೈಕಲ್ ನಲ್ಲಿ ಬಂದು ಅವರ ಪೈಕಿ ಯೂನಿಸ್ ಎಂಬುವವನು ಜಗಳ ಮಾಡಿ ತನ್ನ ಕೈಯಲ್ಲಿದ್ದ ಕಬ್ಬಿಣದ ರಾಡಿನಿಂದ ಶಕೀಲ್ ಅಹಮ್ಮದ್ ರವರ ತಲೆಯ ಎಡಭಾಗಕ್ಕೆ ಹೊಡೆದು ರಕ್ತ ಗಾಯ ಪಡಿಸಿದ್ದು, ಅಲ್ಲದೆ ಅವರ ಜೊತೆಯಲ್ಲಿದ್ದ ಸಿಕಂದರ್ ಮತ್ತು ಮೋಸಿನ್ ರವರುಗಳು ಸಹ ಶಕೀಲ್ ಅಹಮ್ಮದ್ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಒಡ್ಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.