Crime News

ಸೆಕ್ಯುರಿಟಿ ಗಾರ್ಡ ಮೇಲೆ ಹಲ್ಲೆ:

ಮಡಿಕೇರಿ ನಗರದ ಎಫ್.ಎಂ.ಸಿ. ಕಾಲೇಜಿನಲ್ಲಿ ಸೆಕ್ಯುರಿಟಿ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಎ.ಎ. ಕಾರ್ಯಪ್ಪ ಎಂಬವರ ಮೇಲೆ ದಿನಾಂಕ 2-11-2018 ರಂದು ಅದೇ ಕಾಲೇಜಿನ ವಿದ್ಯಾರ್ಥಿಗಳಾದ ಎಂ.ಬಿ. ಆಕರ್ಶ್ ಹಾಗು ಮತ್ತೊಬ್ಬ ಸೇರಿ ಕಾಲೇಜು ವಸತಿ ಗೃಹದ ಬಳಿ ದಾರಿ ತಡೆದು ಹಲ್ಲೆ ನಡೆಸಿ ಕೊಲೆ ಬೆದರಿಕೆ ಒಡ್ಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿದ್ಯುತ್ ಅವಘಡದಿಂದ ವ್ಯಕ್ತಿ ಸಾವು:

ಪೆಟ್ರೋಲ್ ಬಂಕ್‍ನಲ್ಲಿ ಗಣಕ ಯಂತ್ರವನ್ನು ಅಳವಡಿಸುತ್ತಿರುವ ಸಂದರ್ಭದಲ್ಲಿ ವಿದ್ಯುತ್ ಹರಿದು ವ್ಯಕ್ತಿಯೋರ್ವ ಮೃತಪಟ್ಟಿರುವ ಘಟನೆ ಸುಂಟಿಕೊಪ್ಪ ಸಮೀಪದ ಗದ್ದೆಹಳ್ಳ ದಲ್ಲಿ ನಡೆದಿದೆ. ಹೆಚ್.ಡಿ.ಕೋಟೆ ಮೂಲಕ ವ್ಯಕ್ತಿ ಕೆ.ಸಿ. ಶಿವಕುಮಾರ್ ಎಂಬವರು Orpak auto machine company (G.V.R company) ಯಲ್ಲಿ ಕೆಲಸ ಮಾಡಿಕೊಂಡಿದ್ದು ದಿನಾಂಕ 2-11-2018 ರಂದು ಅವರ ಕಂಪೆನಿ ವತಿಯಿಂದ ಸುಂಟಿಕೊಪ್ಪ ಸಮೀಪದ ಗದ್ದೆಹಳ್ಳ ದಲ್ಲಿರುವ ಓಂ ಆದಿಪರಾಶಕ್ತಿ ಪೆಟ್ರೋಲಿಯಂ ಏಜೆನ್ಸಿ ಬಂಕ್ ನಲ್ಲಿ ಗಣಕ ಯಂತ್ರವನ್ನು ಅಳವಡಿಸುವ ಸಂದರ್ಭದಲ್ಲಿ ಆಕಸ್ಮಿಕವಾಗಿ ವಿದ್ಯುತ್ ಶಾಕ್ ನಿಂದ ಸದರಿ ಕೆ.ಸಿ. ಶಿವಕುಮಾರ್ ರವರು ಮೃತಪಟ್ಟಿದ್ದು ಈ ಸಂಬಂಧ ಮೃತರ ಸಂಬಂಧಿ ರಂಗಸ್ವಾಮಿ ಎಂಬವರು ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಅಪರಿಚಿತ ಶವಗಳ ಪತ್ತೆ:

ಅರಣ್ಯ ಅಧಿಕಾರಿ ಮತ್ತು ಸಿಬ್ಬಂದಿಗಳು ಗಸ್ತು ಕರ್ತವ್ಯದಲ್ಲಿದ್ದಾಗ ಅಪರಿಚಿತ ಒಂದು ಗಂಡಸಿನ ಮತ್ತು ಒಂದು ಹೆಂಗಸಿನ ಶವಗಳು ಪತ್ತೆಯಾಗಿರುವ ಬಗ್ಗೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ವರದಿಯಾಗಿದೆ. ದಿನಾಂಕ 2-11-2018 ರಂದು  ಶನಿವಾರಸಂತೆ ಠಾಣಾ ವ್ಯಾಪ್ತಿಯ ಮಾಲಂಬಿ ಮೀಸಲು ಅರಣ್ಯ ಪ್ರದೇಶದಲ್ಲಿ ಉಪ ಅರಣ್ಯ ವಲಯಾಧಿಕಾರಿ ಹೆಚ್.ಸಿ. ಗೋವಿಂದರಾಜು ಮತ್ತು ಸಿಬ್ಬಂದಿಗಳು ಗಸ್ತು ಕರ್ತವ್ಯದಲ್ಲಿದ್ದಾಗ ಅವಗಿಗೆ ಮುಳ್ಳರು ಕೆರೆಯ ಮೇಲ್ಭಾಗದ ಮಾಲಂಬಿ ಎಸ್ಟೇಟ್ ಪಕ್ಕದ ಅರಣ್ಯದಲ್ಲಿ ಅಪರಿಚಿತ ಒಂದು ಗಂಡಸಿನ ಶವ ಮತ್ತು ಒಂದು ಹೆಂಗಸಿನ ಶವ ಪತ್ತೆಯಾಗಿದ್ದು, ಅದರ ಸಂಬಂಧ ಸದರಿಯವರು ಶನಿವಾರಸಂತೆ ಠಾಣೆಗೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಸಹಕಾರಿ ಸಂಘಕ್ಕೆ ವಂಚನೆ:

ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕೃಷಿಪತ್ತಿನ ಸಹಕಾರ ಸಂಘದಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕೆಲಸ ಮಾಡಿಕೊಂಡಿದ್ದ ಪಿ.ಸಿ. ಕೃಷ್ನ, ಪರಿವೀಕ್ಷಕರಾದ ಬಿ.ಎಂ. ವೆಂಕಟೇಶ್ ಎಂಬವರು ಮತ್ತು ಇತರೆ ಆಭರಣ ಸಾಲಗಾರರು ಸೇರಿಕೊಂಡು ದಿನಾಂಕ 22-1-2014 ರಿಂದ 20-5-2017ರವರೆಗೆ ಬ್ಯಾಂಕಿನಲ್ಲಿ ನಕಲಿ ಚಿನ್ನವನ್ನು ಅಡವಿಟ್ಟು  ಸುಮಾರು 29,18,250/- ರೂ. ಗಳನ್ನು ವಂಚಿಸಿದ್ದು ಅಲ್ಲದೆ  ಪಿ.ಸಿ. ಕೃಷ್ಣರವರು ದಿನಾಂಕ 31-3-2015 ರಿಂದ28-9-2017ರ ವರೆಗೆ ತನ್ನ ಆಡಳಿತಾವಧಿಯಲ್ಲಿ ಅಕ್ರಮವಾಗಿ ರೂ.24,15,921/-ಗಳನ್ನು ದುರುಪಯೋಗ ಪಡಿಸಿಕೊಂಡು ಒಟ್ಟು 53,34,171/- ಹಣವನ್ನು ಸಂಘಕ್ಕೆ ವಂಚಿಸಿರುವುದಾಗಿ ಎಂ.ಕೆ. ಸುಬ್ರಮಣಿ, ಅಧ್ಯಕ್ಷರು, ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ, ಪಾಲಿಬೆಟ್ಟ ಇವರು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.