Crime News

ಆಟೋ ರಿಕ್ಷಾ ಅಪಘಾತ

ದಿನಾಂಕ 5-11-2018 ರಂದು ಸೋಮವಾರಪೇಟೆ ತಾಲೋಕಿನ ಶಾಂತಳ್ಳಿ ಗ್ರಾಮದ ನಿವಾಸಿಯಾದ ರಾಮಚಂದ್ರ, ಜೋಯಪ್ಪ ಮತ್ತು ಹೂವಯ್ಯನವರು ಆಟೋ ರಿಕ್ಷಾದಲ್ಲಿ ಸೋಮವಾರಪೇಟೆ ನಗರಕ್ಕೆ ಹೋಗುತ್ತಿರುವಾಗ ಯಡೂರು ಗ್ರಾಮದ ಶಾಲೆಯ ಬಳಿ ತಲುಪುವಾಗ ಆಟೋವನ್ನು ಚಾಲಕ ಸುಂದರೇಶ್ ಎಂಬುವವರು ಅಜಾಗರೂಕತೆಯಿಂದ ಚಾಲನೆ ಮಾಡಿ ರಸ್ತೆಯ ಬದಿಗೆ ಮಗುಚಿ ಬಿದ್ದ ಪರಿಣಾಮ ಆಟೋದಲ್ಲಿದ್ದ ಮೂವರಿಗೂ ಗಾಯವಾಗಿದ್ದು ಈ ಬಗ್ಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಕ್ರಮ ಮದ್ಯ ಮಾರಾಟ

ದಿನಾಂಕ 5-11-2018 ರಂದು ಸಿದ್ದಾಪುರ ಠಾಣೆಯ ಪಿ.ಎಸ್.ಐ ರವರಾದ ದಯಾನಂದರವರಿಗೆ ಚನ್ನಯ್ಯನಕೋಟೆ ಗ್ರಾಮದಲ್ಲಿ ಜನಾರ್ಧನ ಎಂಬುವವರು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದಾಗಿ ಸಿಕ್ಕಿದ ಮಾಹಿತಿ ಮೇರೆಗೆ ಸಿಬ್ಬಂದಿಯವರೊಂದಿಗೆ ತೆರಳಿ ದಾಳಿ ನಡೆಸಿದಾಗ ಜನಾರ್ಧನರವರು ಓಡಿ ಹೋಗಿದ್ದು, ಸ್ಥಳದಿಂದ 90 ಎಂ.ಎಲ್ ನ 19 ಪ್ಯಾಕೆಟ್, 180 ಎಂ.ಎಲ್ ನ 8 ಮದ್ಯದ ಪ್ಯಾಕೆಟ್ ಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಪಾದಚಾರಿಗೆ ಬಸ್ಸು ಡಿಕ್ಕಿ

ದಿನಾಂಕ 5-11-2018 ರಂದು ಕುಶಾಲನಗರದ ಬಸವೇಶ್ವರ ಬಡಾವಣೆಯ ನಿವಾಸಿ ಈಶ್ವರ ಎಂಬುವವರು ಕೆ.ಎಸ್.ಆರ್.ಟಿ.ಸಿ ಬಸ್ಸು ನಿಲ್ದಾಣಕ್ಕೆ ಹೋಗುವ ರಸ್ತೆಯಲ್ಲಿ ಹೋಗುತ್ತಿರುವಾಗ ಮೈಸೂರು ಕಡೆಯಿಂದ ಬಂದ ಬಸ್ಸನ್ನು ಅದರ ಚಾಲಕ ಸಂಜಯ್ ಕುಮಾರ್ ವಾಲೆಕರ್ ಎಂಬುವವರು ಅಜಾಗರೂಕತೆಯಿಂದ ಚಾಲನೆ ಮಾಡಿ ಪಾದಚಾರಿಗೆ ಡಿಕ್ಕಿಪಡಿಸಿದ ಪರಿಣಾಮ ಈಶ್ವರ್ ರವರಿಗೆ ಗಾಯವಾಗಿದ್ದು ಈ ಬಗ್ಗೆ ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಪಘಾತ ಪ್ರರಕಣ

ದಿನಾಂಕ 5-11-2018 ರಂದು ಗೋಣಿಕೊಪ್ಪಲುವಿನ ಅರ್ವತ್ತೋಕ್ಲು ಗ್ರಾಮದ ನಿವಾಸಿಯಾದ ಜೀವನ್ ರೈ ಎಂಬುವವರು ಮನೆಯಿಂದ ಕಡಂಗದಲ್ಲಿರುವ ಕ್ಲಬ್ ಮಹೇಂದ್ರಕ್ಕೆ ಕೆಲಸಕ್ಕೆಂದು ಮೋಟಾರು ಸೈಕಲಿನಲ್ಲಿ ಹೋಗುತ್ತಿರುವಾಗ ಬಿಟ್ಟಂಗಾಲ ಗ್ರಾಮದ ಆರ್.ಕೆ.ಎಫ್ ಬಳಿ ತಲುಪುವಾಗ ಮುಂದೆ ವೇಗವಾಗಿ ಹೋಗುತ್ತಿದ್ದ ಜೀಪನ್ನು ಅದರ ಚಾಲಕ ಯಾವುದೇ ಸೂಚನೆ ನೀಡದೇ ಅಂಬಟ್ಟಿ ಗಾಲ್ಫ್ ಕಡೆ ತಿರುಗಿಸಿದಾಗ ಜೀವನ್ ರೈ ಯವರು ನಿಯಂತ್ರಣ ತಪ್ಪಿ ಜೀಪಿನ ಹಿಂಭಾಗಕ್ಕೆ ಡಿಕ್ಕಿ ಪಡಿಸಿದ ಪರಿಣಾಮ ಜೀವನ್ ರೈ ಯವರಿಗೆ ಗಾಯವಾಗಿದ್ದು ಈ ಬಗ್ಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.