Crime News

ಪಾದಚಾರಿಗೆ ಬೈಕ್ ಡಿಕ್ಕಿ

                    ದಿನಾಂಕ 12/04/2018ರಂದು ಮಡಿಕೇರಿ ನಗರದ ಗಣಪತಿ ಬೀದಿ ನಿವಾಸಿ ಕೀಜರ್ ಅಹಮದ್ ಷರೀಫ್ ಎಂಬವರು ನಗರದ ದಾಸವಾಳ ರಸ್ತೆಯ ಬ್ರಹ್ಮಕುಮಾರಿ ಈಶ್ವರೀಯ ಕೇಂದ್ರದ ಬಳಿ ನಡೆದುಕೊಂಡು ಹೋಗುತ್ತಿರುವಾಗ ಹಿಂದಿನಿಂದ ಕೆಎ-12-ಇ-8744ರ ಮೋಟಾರು ಸೈಕಲನ್ನು ಅದರ ಚಾಲಕ ಶರಣು ಎಂಬಾತ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಕೀಜರ್‌ ಅಹಮದ್‌ರವರಿಗೆ ಡಿಕ್ಕಿಪಡಿಸಿದ ಪರಿಣಾಮ ಕೀಜರ್‌ ಅಹಮದ್‌ರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಲಾರಿಗೆ ಕಾರು ಡಿಕ್ಕಿ

                  ದಿನಾಂಕ 13/04/2018ರಂದು ಬೆಂಗಳೂರು ನಿವಾಸಿ ಶಿವೇಗೌಡ ಎಂಬವರು ಕೆಎ-01-ಎಬಿ-9302 ಲಾರಿಯನ್ನು ಚಾಲಿಸಿಕೊಂಡು ಕುಶಾಲನಗರ ಕಡೆಯಿಂದ ಮಡಿಕೇರಿಗೆ ಬರುತ್ತಿರುವಾಗ ಮಡಿಕೇರಿಯ ಅರಣ್ಯ ಭವನದ ಬಳಿ ಎದುರಿನಿಂದ ಕೆಎ-41-ಎಂ-8076ರ ಕಾರನ್ನು ಅದರ ಚಾಲಕಿ ಕವಿತಾ ಎಂಬಾಕೆ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಶಿವೇಗೌಡರವರ ಕಂಟೈನರ್ ಲಾರಿಗೆ ಡಿಕ್ಕಿಪಡಿಸಿದ ಪರಿಣಾಮ ಚಾಲಕಿ ಕವಿತಾ ಸೇರಿದಂತೆ ಕಾರಿನಲ್ಲಿದ್ದ ಅಶ್ವಥ್ ಮತ್ತು ಅಖಿಲಾ ಎಂಬವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಬಸ್ಸಿಗೆ ಲಾರಿ ಡಿಕ್ಕಿ

                  ದಿನಾಂಕ 13/04/2018ರಂದು ಮಡಿಕೇರಿಯ ಕೆಎಸ್‌ಆರ್‌ಟಿಸಿ ಡಿಪೋದ ಚಾಲಕ ದೇವಯ್ಯ ಎಂಬವರು ಕೆಎ-09-ಎಫ್‌-4770ರ ಬಸ್ಸಿನಲ್ಲಿ ಪ್ರಯಾಣಿಕರನ್ನು ಕರೆದುಕೊಂಡು ಮಂಗಳೂರಿನಿಂದ ಮಡಿಕೇರಿಗೆ ಬರುತ್ತಿರುವಾಗ ಕಾಟಕೇರಿ ಬಳಿ ಎದುರಿನಿಂದ ಕೆಎ-20-ಬಿ-1991ರ ಟ್ಯಾಂಕರನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ದೇವಯ್ಯನವರು ಚಾಲಿಸುತ್ತಿದ್ದ ಬಸ್ಸಿಗೆ ಡಿಕ್ಕಿಪಡಿಸಿದ ಪರಿಣಾಮ ಎರಡೂ ವಾಹನಗಳಿಗೆ ಹಾನಿಯುಂಟಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ವ್ಯಕ್ತಿ ಆತ್ಮಹತ್ಯೆ

                     ದಿನಾಂಕ 12/04/2018ರ ರಾತ್ರಿ ವೇಳೆ ಸೋಮವಾರಪೇಟೆ ಬಳಿಯ ಮಾದಾಪುರದ ಜಂಬೂರು ಬಾಣೆ ನಿವಾಸಿ ಅರುಣ್ ಕುಮಾರ್ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಮನೆಯ ಮಾಡಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ. ಮೃತ ಅರುಣ್ ಕುಮಾರನು ಯಾವುದೋ ಕ್ಷುಲ್ಲಕ ಕಾರಣಕ್ಕೆ ಬೇಸರಗೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

 ಮೋಟಾರು ಸೈಕಲ್ ಕಳವು

               ಕುಶಾಲನಗರ ಪಟ್ಟಣದ ಸೋಮೇಶ್ವರ ರಸ್ತೆಯ ನಿವಾಸಿ ಮೂರ್ತಿ ಎನ್‌.ಎಸ್.ಎಂಬವರು ದಿನಾಂಕ 12/04/2018ರಂದು ಅವರಿಗೆ ಸೇರಿದ ಕೆಎ-12-ಎಂ-2447ರ ಹೀರೋ ಹೋಂಡಾ ಮೋಟಾರು  ಸೈಕಲನ್ನು ಮನೆಯ ಮುಂದೆ ನಿಲ್ಲಿಸಿ ಹೊಳೆ ನರಸೀಪುರಕ್ಕೆ ಹೋಗಿದ್ದು ದಿನಾಂಕ 13/04/2018ರಂದು ಸಂಜೆ ಮರಳಿ ಬಂದು ನೋಡುವಾಗ ಬೈಕನ್ನು ಯಾರೋ ಕಳ್ಳರು ಕಳವು ಮಾಡಿರುವುದು ಕಂಡು ಬಂದಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published.