Crime News

ಮಣ್ಣು ಕುಸಿದು ದುರ್ಮರಣ

ದಿನಾಂಕ 06-11-2018 ರಂದು ಮಡಿಕೇರಿ ನಗರದ ರಾಜಸೀಟು ರಸ್ತೆಯ ಪಕ್ಕದಲ್ಲಿ ಸುಬ್ಬಯ್ಯ ಎಂಬುವವರ ನಿರ್ಮಾಣ ಹಂತದ ಕಟ್ಟಡಕ್ಕೆ ಒತ್ತಾಗಿರುವ ಬರೆಗೆ ತಡೆಗೋಡೆಯನ್ನು ನಿರ್ಮಿಸಲು ಚರಂಡಿಯನ್ನು ತೆಗೆಯುತ್ತಿದ್ದಾಗ ಬರೆಯ ಮಣ್ಣು ಕುಸಿದು ಕೆಲಸ ಮಾಡುತ್ತಿದ್ದ ಗೌರಮ್ಮ ಮತ್ತು ಯಶೋಧರವರು ಮೃತಪಟ್ಟಿದ್ದು, ಮಾಸಿಯಬೋವಿ ಮತ್ತು ಪದ್ಮರವರು ಗಾಯಗೊಂಡಿದ್ದು, ಈ ಬಗ್ಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

 ಅನುಮಾನಾಸ್ಪದ ವ್ಯಕ್ತಿಯ ಬಂಧನ

ದಿನಾಂಕ 6-11-2018 ರಂದು ವಿರಾಜಪೇಟೆ ನಗರ ಠಾಣೆಯ ಸುನಿಲ್ ಮತ್ತು ಆನಂದ ಡೊಳ್ಳಿನ್ ಎಂಬುವವರು ಬೆಳಗ್ಗಿ ಜಾವ ಗಸ್ತು ಮಾಡುತ್ತಿರುವಾಗ ನಗರದ ಉಮ್ಮರ್ ಬಿರ್ಯಾನಿ ಗಲ್ಲಿ ರಸ್ತೆಯಲ್ಲಿ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ ನಿತಿನ್ ಎಂಬುವವನನ್ನು ವಶಕ್ಕೆ ತೆಗೆದುಕೊಂಡು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಆತ್ಮಹತ್ಯೆ ಪ್ರಕರಣ

ದಿನಾಂಕ 5-11-2018 ರಂದು ವಿರಾಜಪೇಟೆ ತಾಲೋಕಿನ ನಾಲ್ಕೇರಿ ಗ್ರಾಮದ ನಿವಾಸಿಯಾದ ಪಣಿಯರವರ ಚಿಣ್ಣ ಎಂಬುವವರು ಜೀವನದಲ್ಲಿ ಜುಗುಪ್ಸೆಗೊಂಡು ಮನೆಯ ಪಕ್ಕದಲ್ಲಿದ್ದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ಕುಟ್ಟ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ

ದಿನಾಂಕ 6-11-2018 ರಂದು ವಿರಾಜಪೇಟೆ ನಗರದ ಪಂಜರಪೇಟೆಯ ಸಾರ್ವಜನಿಕ ರಸ್ತೆಯಲ್ಲಿ ಟೆರಿನ್ ಹಾಗೂ ಸೋಮಣ್ಣನವರು ಮದ್ಯಪಾನ ಮಾಡಿ ಸಾರ್ವಜನಿಕರಿಗೆ ತೊಂದರೆ ಉಂಟುಮಾಡುತ್ತಿದ್ದವರನ್ನು ಬಂಧಿಸಿ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.

ಹಲ್ಲೆ ಪ್ರಕರಣ

ದಿನಾಂಕ 6-11-2018 ರಂದು ಸೋಮವಾರಪೇಟೆ ತಾಲೋಕಿನ ಹೊನ್ನವಳ್ಳಿ ಗ್ರಾಮದ ನಿವಾಸಿಯಾದ ವಾಸು ಎಂಬುವವರೊಂದಿಗೆ ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿ ಹರೀಶ ಮತ್ತು ರತ್ನರವರು ಹಲ್ಲೆ ನಡೆಸಿದ್ದು ಈ ಬಗ್ಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಜೂಜಾಟ ಪ್ರಕರಣ

ದಿನಾಂಕ 6-11-2018 ರಂದು ಶನಿವಾರಸಂತೆ ಠಾಣೆಯ ಪಿ.ಎಸ್.ಐ ರವರಿಗೆ ಸಿಕ್ಕಿದ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಬೆಂಬಳೂರು ಸರ್ಕಾರಿ ಶಾಲೆಯ ಹಿಂಭಾಗದ ಮೈದಾನದಲ್ಲಿ ಅಕ್ರಮವಾಗಿ ಇಸ್ಪೀಟು ಎಲೆಗಳಿಂದ ಜೂಜಾಟ ಆಡುತ್ತಿದ್ದ ಸ್ಥಳಕ್ಕೆ ದಾಳಿ ಮಾಡಿ ಆಟವಾಡುತ್ತಿದ್ದ ಗುರು ಪ್ರಸಾದ್, ಕೃಷ್ಣ, ಸುನಿಲ್, ದಯಾಕರ, ಲಕ್ಷ್ಮಯ್ಯ ಎಂಬುವವರನ್ನು ವಶಕ್ಕೆ ಪಡೆದುಕೊಂಡು ಆಟಕ್ಕೆ ಬಳಸಿದ ನಗದು ಹಣ 1,430=00 ರೂವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿರುತ್ತಾರೆ.

ಅಪಘಾತ ಪ್ರಕರಣ

ದಿನಾಂಕ 5-11-2018 ರಂದು ಶನಿವಾರಸಂತೆಯ ಶಿರಂಗಾಲ ಗ್ರಾಮದವರಾದ ಲೀಲಾಧರ ಎಂಬುವವರು ಮೋಟಾರು ಸೈಕಲಿನಲ್ಲಿ ಮನುರವರೊಂದಿಗೆ ಮೆಣಸ ಗ್ರಾಮದಿಂದ ವಾಪಾಸ್ಸು ಮನೆಗೆ ಹೋಗುತ್ತಿರುವಾಗ ಹಂಡ್ಲಿ ಗ್ರಾಮದಲ್ಲಿ ಮೋಟಾರು ಸೈಕಲನ್ನು ರಸ್ತೆ ಬದಿ ನಿಲ್ಲಿಸಿಕೊಂಡಿರುವಾಗ ಹಿಂದಿನಿಂದ ಬಂದ ಕೆ.ಎ-13-ಸಿ-1871 ರ ಕಾರನ್ನು ಅದರ ಚಾಲಕ ಮೋಟಾರು ಸೈಕಲಿಗೆ ಡಿಕ್ಕಿಪಡಿಸಿದ ಪರಿಣಾಮ ಲೀಲಾಧರರವರಿಗೆ ಗಾಯವಾಗಿದ್ದು, ಚಿಕಿತ್ಸೆ ಕೊಡಿಸುವುದಾಗಿ ಕಾರಿನ ಚಾಲಕ ಕರೆದುಕೊಂಡು ಹೋಗಿ ಹಾಸನಕ್ಕೆ ಹೋಗುವ ರಸ್ತೆಯಲ್ಲಿ ಕಟ್ಟಾಯದಿಂದ ಮುಂದೆ ನಿರ್ಜನ ಪ್ರದೇಶದಲ್ಲಿ ಕಾರಿನಿಂದ ಇಳಿಸಿ ಹೋಗಿರುವುದಾಗಿ ಲೀಲಾಧರರವರು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.