Crime News

ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ:

ಫಿಡ್ಸ್ ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಯೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿರಾಜಪೇಟೆ ನಗರದ ಹತ್ತಿರದ ಕುಕ್ಲೂರು ಗ್ರಾಮದಲ್ಲ ನಡೆದಿದೆ.  ಕುಕ್ಲೂರು ಗ್ರಾಮದ ನಿವಾಸಿ ಶ್ರೀಮತಿ ಕಾಳಿ ಎಂಬವರ ಪತಿ ಮುತ್ತ ಫಿಡ್ಸ್ ಕಾಯಿಲೆಯಿಂದ ಬಳಲುತ್ತಿದ್ದು ಇದೇ ವಿಚಾರವಾಗಿ ಜೀವನಲ್ಲಿ ಜುಗುಪ್ಸೆಗೊಂಡು ದಿನಾಂಕ 7-11-2018 ರಂದು ಯಾವುದೋ ವಿಷ ಸೇವಿಸಿ ಅಸ್ವಸ್ಥಗೊಂಡಿದ್ದು, ಅವರನ್ನು ಚಿಕಿತ್ಸೆಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಚಿಕಿತ್ಸೆ ಫಲಕಾರಿಯಾಗದೇ ಸದರಿಯವರು ಮೃತಪಟ್ಟಿದ್ದು, ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣದಾಖಲಾಗಿದೆ.

ಅಕ್ರಮ ಜೂಜು ಪ್ರಕರಣ ದಾಖಲು:

ಶನಿವಾರಸಂತೆ ಠಾಣಾ ವ್ಯಾಪ್ತಿಯ ಮಾಲಂಬಿ ಗ್ರಾಮದಲ್ಲಿ ದಿನಾಂಕ 6-11-2018 ರಂದು ರಾತ್ರಿ 9-00 ಗಂಟೆಯ ಸಮಯದಲ್ಲಿ ಆರೋಪಿಗಳಾದ ಶಶಿಧರ, ಡಿ.ಎಸ್. ನಟೇಶ, ಹರ್ಷಿತ್, ಯತೀಶ್ ಹಾಗು ಚೆನ್ನಪ್ಪ ಎಂಬವರುಗಳು ಮಾಲಂಬಿ ಗ್ರಾಮದ ಕೂಡುರಸ್ತೆಯ ಯತೀಶ್ ಎಂಬವರ ಖಾಲಿ ಜಾಗಕ್ಕೆ ಹೋಗುವ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಜೂಜಾಡುತ್ತಿದ್ದುದನ್ನು ಪತ್ತೆ ಹೆಚ್ಚಿನ ಶನಿವಾರಸಂತೆ ಪೊಲೀಸ್ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಜರುಗಿಸಿದ್ದಾರೆ.

ನಿಂದನೆ, ಕೊಲೆ ಬೆದರಿಕೆ:

ಸಿದ್ದಾಪುರ ಠಾಣಾ ಸರಹದ್ದಿನ ನೆಲ್ಲಿಹುದಿಕೇರಿ ಪಟ್ಟಣದಲ್ಲಿ ಅದೇ ಗ್ರಾಮದ ನಿವಾಸಿ ಶಿವದಾಸ್  ಎಂಬವರು ಅನಧಿಕೃತವಾಗಿ ಕೋಳಿ ಮಾಂಸದ ಅಂಗಡಿಯನ್ನು ನಡೆಸುತ್ತಿದ್ದು ಇದನ್ನು ನೆಲ್ಲಿಹುದಿಕೇರಿ ಗ್ರಾಮಪಂಚಾಯ್ತಿ ಅಧ್ಯಕ್ಷರಾದ ಶ್ರೀಮತಿ ಎಸ್. ಪದ್ಮಾವತಿಯವರು ಗ್ರಾಮಪಂಚಾಯ್ತಿ ವತಿಯಿಂದ ಅಂಗಡಿಗೆ ಬೀಗ ಹಾಕಿಸಿದ್ದು,  ಶಿವದಾಸ್ ನವರು ಸದರಿ ಅಂಗಡಿಯ ಬೀಗವನ್ನು ತೆದೆದು ಅನಧಿಕೃತವಾಗಿ ಅಂಗಡಿಯನ್ನು ನಡೆಸುತ್ತಿದ್ದು ದಿನಾಂಕ 7-11-2018 ರಂದು ಈ ವಿಚಾರವಾಗಿ ಶ್ರೀಮತಿ ಎಸ್. ಪದ್ಮಾವತಿಯವರು ವಿಚಾರಿಸಲು ಹೋದ ಸಂದರ್ಭದಲ್ಲಿ ಆರೋಪಿ ಶಿವದಾಸ್ ರವರು ಅವಾಚ್ಯವಾಗಿ ಜಾತಿ ನಿಂದನೆ ಮಾಡಿದ್ದು ಅಲ್ಲದೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಒಡ್ಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಗಾಂಜಾ ಬೆಳೆ ಪತ್ತೆ:

ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಹಾಕತ್ತೂರು ಗ್ರಾಮದ ಮಾಯಾಟ್ಟಿ ಎಂಬಲ್ಲಿ ಮುತ್ತಾರ್‍ಮುಡಿ ಗ್ರಾಮದ ನಿವಾಸಿ ಕೊಡಕ್ಕಲ್ ಪ್ರಸನ್ನ ಎಂಬವರು ತಮ್ಮ ಬಾಪ್ತು 2-00 ಏಕರೆ ಜಾಗದಲ್ಲಿ ಶುಂಠಿ ಕೃಷಿಯನ್ನು ಮಾಡಿದ್ದು ಸದರಿ ಶುಂಠಿ ಕೃಷಿಯ ನಡುವೆ 2 ಗಾಂಜಾ ಗಿಡಗಳನ್ನು ಬೆಳೆಸಿರುವ ಮಾಹಿತಿಯನ್ನು ಪಡೆದ ಜಿಲ್ಲಾ ಡಿ.ಸಿ.ಐ.ಬಿ. ಘಟಕ, ದಿನಾಂಕ 7-11-2018 ರಂದು ಸದರಿ ಘಟಕದ ಪೊಲೀಸ್ ನಿರೀಕ್ಷಕರಾದ ಎಂ.ಮಹೇಶ್ ರವರು ಮತ್ತು ಸಿಬ್ಬಂದಿಯವರು ದಾಳಿ ಮಾಡಿ ಆರೋಪಿಯನ್ನು ದಸ್ತಗಿರಿ ಮಾಡಿದ್ದು, ಆರೋಪಿ ವಿರುದ್ದ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಜರುಗಿಸಿದ್ದಾರೆ.