Crime News

ವ್ಯಕ್ತಿ ಆತ್ಮಹತ್ಯೆ

ದಿನಾಂಕ 08/11/2018ರಂದು ವಿರಾಜಪೇಟೆ ನಗರದ ಚಿಕ್ಕಪೇಟೆ ನಿವಾಸಿ ಹೆಚ್‌.ಆರ್.ಸದನ್ ಎಂಬವರು ಮನೆಯ ಮಾಡಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ. ಮೃತ ಸದನ್‌ರವರು ಸುಮಾರು 9 ತಿಂಗಳಿನಿಂದ ಹೊಟ್ಟೆನೋವಿನಿಂದ ಬಳಲುತ್ತಿದ್ದು ಈ ಸಂಬಂಧ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣದ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

 ವ್ಯಕ್ತಿ ಆತ್ಮಹತ್ಯೆ

ದಿನಾಂಕ 08/11/2018ರಂದು ಬೆಳಿಗ್ಗೆ ಪೊನ್ನಂಪೇಟೆ ಬಳಿಯ ಬಿಳೂರು ನಿವಾಸಿ ಸಜಿ ಎಂಬವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೃತ ಸಜಿರವರು ವಿಪರೀತ ಮದ್ಯಪಾನದ ಚಟ ಹೊಂದಿದ್ದು ಈ ಬಗ್ಗೆ ಮನೆಯವರು ಆಕ್ಷೇಪಿಸಿದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

ದಿನಾಂಕ 07/11/2018ರಂದು ಸೋಮವಾರಪೇಟೆ ಬಳಿಯ ಹಾನಗಲ್ಲು ಬಾಣೆ ನಿವಾಸಿ ಹೆಚ್‌.ಎಸ್.ವಿಜಯ್ ಎಂಬವರು ಅವರ ಸ್ನೇಹಿತರಾದ ವಿನಯ್‌ ಮತ್ತು ಸುಭಾಷ್ ಎಂಬವರೊಂದಿಗೆ ಮಾತನಾಡುತ್ತಾ ನಿಂತಿರುವಾಗ ಅಲ್ಲಿ ಬಳಿಯಲ್ಲಿ ಕೆಲವರು ಜೋರಾಗಿ ಗಲಾಟೆ ಮಾಡುತ್ತಿದ್ದುದನ್ನು ವಿನಯ್ ಆಕ್ಷೇಪಿಸಿದ್ದು ಈ ಕಾರಣಕ್ಕೆ ಅಲ್ಲಿಗೆ ಬಂದ ಮಧು ಹಾಗೂ ಮಿಥುನ್‌ ಎಂಬವರು ವಿನಯ್‌ನ ಮೇಲೆ ಹಲ್ಲೆ ಮಾಡಿದ್ದು ತಡೆಯಲು ಹೋದ ವಿಜಯ್‌ ಹಾಗೂ ಸುಭಾಷ್‌ರವರ ಮೇಲೂ ಹಲ್ಲೆ ಮಾಡಿರುವುದಾಗಿ ದೂರು ನೀಡಿದ್ದು ಅದೇ ರೀತಿ ವಿನಯ್‌ರವರು ರಕ್ಷಿತ್ ಎಂಬವರ ಮೇಲೆ ಹಲ್ಲೆ ನಡೆಸಿರುವುದಾಗಿ ಪ್ರತಿ ದೂರು ನೀಡಲಾಗಿದ್ದು ಸೋಮವಾರಪೇಟೆ ಪೊಲೀಸರು ಎರಡೂ ದೂರುಗಳನ್ನು ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.