Crime News

ವ್ಯಕ್ತಿ ಆತ್ಮಹತ್ಯೆ

ಜೀವನದಲ್ಲಿ ಜುಗುಪ್ಸೆಗೊಂಡು ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಗೋಣಿಕೊಪ್ಪ ಬಳಿಯ ಬಿ.ಶೆಟ್ಟಿಗೇರಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಿವಾಸಿ ಜಗತ್‌ ಎಂಬವರ ತೋಟದ ಕಾರ್ಮಿಕ ಪಣಿ ಎರವರ ಸುಬ್ರಮಣಿ ಯಾನೆ ಬೊಗ್ಗ ಎಂಬಾತನ ತಾಯಿ ಹಾಗೂ ಅಕ್ಕ ಒಂದು ವರ್ಷದ ಹಿಂದೆ ಮೃತಪಟ್ಟಿದ್ದು ಇದರಿಂದಾಗಿ ನೊಂದಿದ್ದ ಸುಬ್ರಮಣಿ ದಿನಾಂಕ 06/11/2018ರಂದು ಅಡಿಕೆ ಕುಯ್ಯಲು ತೋಟಕ್ಕೆ ಹೋಗಿದ್ದು ಮರಳಿ ಬಂದಿರಲಿಲ್ಲ. ದಿನಾಂಕ 09/11/2018ರಂದು ಇತರೆ ಕಾರ್ಮಿಕರು ತೋಟದ ಕೆಲಸಕ್ಕೆ ಹೋಗಿದ್ದಾಗ ಸುಬ್ರಮಣಿಯು ಕಾಡು ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವಿಷ ಸೇವಿಸಿದ್ದ ಮಹಿಳೆ ಸಾವು

ದಿನಾಂಕ 28/10/2018ರಂದು ಕೊಡ್ಲಿಪೇಟೆ ಬಳಿಯ ಎಣ್ಣೆಗದ್ದೆ ನಿವಾಸಿ ಪ್ರೇಮ ಎಂಬ ಮಹಿಳೆಯು ಮದ್ಯಪಾನ ಮಾಡಿದ ಅಮಲಿನಲ್ಲಿ ಕೈತಪ್ಪಿನಿಂದ ಯಾವುದೋ ಕ್ರಿಮಿ ನಾಶಕ ಔಷಧಿಯನ್ನು ಸೇವಿಸಿದ್ದು ಆಕೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 09/11/2018ರಂದು ಪ್ರೇಮಳು ಆಸ್ಪತ್ರೆಯಲ್ಲಿ ಮೃತಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 ವ್ಯಕ್ತಿ ಕಾಣೆ ಪ್ರಕರಣ

ಕುಶಾಲನಗರ ಪಟ್ಟಣದ ಫಿಷ್‌ ಕರಿ ಹೋಟೆಲಿನಲ್ಲಿ ಕೆಲಸ ಮಾಡಿಕೊಂಡಿದ್ದ ಕಾರ್ತಿಕ್ ಎಂಬ ಯುವಕನು ದಿನಾಂಕ 04/11/2018ರಂದು ಯಾರಿಗೂ ಹೇಳದೆ ಎಲ್ಲಿಗೋ ಹೋಗಿದ್ದು ಕಾಣೆಯಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 ವಾಹನ ಅಪಘಾತ

ದಿನಾಂಕ 29/10/2018ರಂದು ಮೈಸೂರಿನ ಹಾರನಹಳ್ಳಿ ನಿವಾಸಿ ರವಿ ಹಾಗೂ ಅವರ ಮಗ ಮಹದೇವ ಎಂಬವರು ಕುಶಾಲನಗರದ ಬಾಪೂಜಿ ಬಡಾವಣೆಯಲ್ಲಿ ರಸ್ತೆಗೆ ಕಾಂಕ್ರೀಟ್ ಹಾಕುವ ಕೆಲಸ ಮಾಡಿಕೊಂಡಿರುವಾಗ ಕಾಂಕ್ರೀಟ್ ಮಿಶ್ರ ಮಾಡುವ ವಾಹನವನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿ ಮಹದೇವರವರ ಕಾಲಿನ ಮೇಲೆ ಹತ್ತಿಸಿದ ಪರಿಣಾಮ ಮಹದೇವರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.