Crime News

ಮನೆಗೆ ನುಗ್ಗಿ ನಗ ನಾಣ್ಯ ಕಳವು:

ಸೋಮವಾರಪೇಟೆ ತಾಲೋಕು ಕೂಡ್ಲೂರು ಚೆಟ್ಟಳ್ಳಿ ಗ್ರಾಮದ ನಿವಾಸಿ ಜೋಯಪ್ಪ ಎಂಬವರು ದಿನಾಂಕ 10-11-2018 ರಂದು ಎಂದಿನಂತೆ ಕೂಲಿ ಕೆಲಸಕ್ಕೆ ಹೋದ ಸಂದರ್ಭದಲ್ಲಿ ಅವರ ಮನೆಯ ಮೇಲ್ಛಾವಣಿಯ ಹೆಂಚುಗಳನ್ನು ತೆಗೆಯುವ ಮೂಲಕ ಯಾರೋ ಕಳ್ಳರು ಒಳನುಗ್ಗಿ ಮನೆಯಿಂದ 72,000/- ರೂ. ನಗದು ಮತ್ತು 16 ಗ್ರಾಂ ಚಿನ್ನಾಭರಣವನ್ನು ಕಳ್ಳತನ ಮಾಡಿದ್ದು, ಈ ಸಂಬಂಧ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ  ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ನೇಣುಬಿಗಿದು ವ್ಯಕ್ತಿ ಆತ್ಮಹತ್ಯೆ:

ವ್ಯಕ್ತಿಯೋರ್ವ ಜೀವನದಲ್ಲಿ ಜುಗುಪ್ಸೆಗೊಂಡು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿರಾಜಪೇಟೆ ನಗರ ಠಾಣೆಯಲ್ಲಿ ವರದಿಯಾಗಿದೆ. ವಿರಾಜಪೇಟೆ ನಗರದ ಮಲೆತಿರಿಕೆ ಬೆಟ್ಟದಲ್ಲಿ ವಾಸವಾಗಿರುವ ವಿನೀತ್ ಎಂಬವರ ತಂದೆ 47 ವರ್ಷ ಪ್ರಾಯದ ರಜಿ ಎಂಬವರು ಜೀವನದಲ್ಲಿ ಜುಗುಪ್ಸೆಗೊಂಡು ದಿನಾಂಕ 11-11-2018 ರಂದು ತಮ್ಮ ಮನೆಯಲ್ಲಿ ಕುತ್ತಿಗೆಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಾದಚಾರಿಗಳ ಮೇಲೆ ಕಾರು ಡಿಕ್ಕಿ:

ವಿರಾಜಪೇಟೆ ತಾಲೋಕು ಕೋತೂರುಗ್ರಾಮದ ನಿವಾಸಿ ಕು: ಅಶ್ವಿನಿ ರವರು ದಿನಾಂಕ 10-11-2018 ರಂದು ತನ್ನ ಅಣ್ಣನ ಮಗ ತೀಜನ್ ಹುಷಾರಿಲ್ಲದ ಕಾರಣ ತಮ್ಮ ತಾಯಿ, ಅತ್ತಿಗೆ ಹಾಗು ಮನೆಯವರೊಂದಿಗೆ ಗೋಣಿಕೊಪ್ಪದ ಮುಖ್ಯರಸ್ತೆಯಲ್ಲಿರುವ ಯತೀರಾಜ್ ಕ್ಲೀನಿಕ್‍ಗೆ ಹೋಗಲು ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಗೋಣಿಕೊಪ್ಪದ ಬಸ್ಸು ನಿಲ್ದಾಣದ ಕಡೆಯಿಂದ ಬಂದ ಕಾರನ್ನು ಚಾಲಕ ಟ್ರಾವಿನ್ ಎಂಬವರು ಕಾರನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನಡೆದುಕೊಂಡು ಹೋಗುತ್ತಿದ್ದ ಅಶ್ವಿನಿ, ಸಾವಿತ್ರಿ ಹಾಗು ಲೀನ್ಯಾ ರವರಿಗೆ ಡಿಕ್ಕಿಪಡಿಸಿದ ಅವರುಗಳು ಗಾಯಗೊಂಡು ಮೈಸೂರಿನ ಜೆ.ಎಸ್‍.ಎಸ್‍. ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದು, ಈ ಸಂಬಂಧ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ರಮ ಮರಳು ಸಾಗಟ:

ದಿನಾಂಕ 8-11-2018 ರಂದು ಶನಿವಾರಸಂತೆ ಪೊಲೀಸ್ ಠಾಣಾ ಸರಹದ್ದಿನ ತೋಯಳ್ಳಿ ದುಂಡಳ್ಳಿ ಗ್ರಾಮದಲ್ಲಿ ವ್ಯಕ್ತಿಯೊಬ್ಬರು ತಮ್ಮ ಬಾಪ್ತು ಟ್ರಾಕ್ಟರ್‍ನಲ್ಲಿ ಮರಳನ್ನು ತುಂಬಿಸಿ ಸಾಗಾಟಮಾಡುತ್ತಿದ್ದುದನ್ನು ಪತ್ತೆಹಚ್ಚಿನ ಶನಿವಾರಸಂತೆ ಠಾಣಾಧಿಕಾರಿ ಹೆಚ್.ಎಂ. ಮರೀಸ್ವಾಮಿ ಮತ್ತು ಸಿಬ್ಬಂದಿಗಳು ಮರಳು ತುಂಬಿದ ಟ್ರಾಕ್ಟರ್‍ನ್ನು ವಶಕ್ಕೆ ಪಡೆದುಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.