Crime News

ಅಕ್ರಮ ಗಾಂಜಾ ಸೇವನೆ, ಬಂಧನ

ದಿನಾಂಕ 11/11/2018ರಂದು ಸಿದ್ದಾಪುರ ನಗರದ ಪಾಲಿಬೆಟ್ಟ ಜಂಕ್ಷನ್ ಬಳಿ ಅಕ್ರಮವಾಗಿ ಗಾಂಜಾ ಸೇದುತ್ತಿದ್ದ ಇಂಜಿಲಗೆರೆ ನಿವಾಸಿ ಕೆ.ಬಿ.ಪ್ರವೀಣ ಎಂಬಾತನನ್ನು ಸಿದ್ದಾಪುರ ಠಾಣೆಯ ಎಎಸ್‌ಐ ಹೆಚ್‌.ವೈ.ರಾಜುರವರು ಪತ್ತೆ ಹಚ್ಚಿ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

 ಹಲ್ಲೆ ಪ್ರಕರಣ

ದಿನಾಂಕ 11/11/2018ರ ರಾತ್ರಿ ಕುಶಾಲನಗರದ ಕಾಳೆಘಾಟ್ ಬಾರಿನ ಕೆಲಸಗಾರ ರವೀಂದ್ರನಾಥ್ ಎಂಬವರು ವ್ಯಾಪಾರ ಮುಗಿದ ನಂತರ ಹಣವನ್ನು ತೆಗೆದುಕೊಂಡು ಅವರ ಕೊಠಡಿಯಲ್ಲಿದ್ದ ಸಮಯ ಅವರಿಗೆ ಪರಿಚಯವಿದ್ದ ಮಾಚಯ್ಯ ಎಂಬವರು ಇನ್ನೊಬ್ಬನೊಂದಿಗೆ ಬಂದು ರವೀಂದ್ರನಾಥ್‌ರವರೊಂದಿಗೆ ಜಗಳವಾಡಿ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 ರಸ್ತೆ ಅಪಘಾತ

ದಿನಾಂಕ 11/11/2018ರಂದು ಶನಿವಾರಸಂತೆ ಬಳಿಯ ಅಂಕನಹಳ್ಳಿ ನಿವಾಸಿ ದೇವರಾಜಪ್ಪ ಎಂಬವರು ಅವರ ಸ್ಕೂಟರಿನಲ್ಲಿ ಶನಿವಾರಸಂತೆ ನಗರದಿಂದ ಮರಳಿ ಮನೆಗೆ ಹೋಗುತ್ತಿರುವಾಗ ಬೆಳ್ಳಾರಳ್ಳಿ ಬಳಿ ಒಂದು ಪಿಕ್‌ಅಪ್ ಜೀಪನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ದೇವರಾಜಪ್ಪನವರ ಸ್ಕೂಟರಿಗೆ ಡಿಕ್ಕಿಪಡಿಸಿದ ಪರಿಣಾಮ ದೇವರಾಜಪ್ಪನವರಿಗೆ ಗಾಯಗಳಾಗಿರುವದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

ದಿನಾಂಕ 12/11/2018ರಂದು ಸೋಮವಾರಪೇಟೆ ಬಳಿಯ ಐಗೂರು ನಿವಾಸಿ ಪಿ.ಬಿ.ವೆಂಕಪ್ಪ ಎಂಬವರು ಅವರ ಪತ್ನಿ ಸುಕನ್ಯ ಎಂಬವರೊಂದಿಗೆ ಕಾರಿನಲ್ಲಿ ಯಡವಾರೆ ಗ್ರಾಮದ ಅವರ ಭಾವನ ಮನೆಯಿಂದ ಮರಳಿ ಬರುತ್ತಿರುವಾಗ ಯಡವನಾಡು ಜಂಕ್ಷನ್ ಬಳಿ ರವಿ ಎಂಬಾತನು ಕಾರನ್ನು ಅಡ್ಡಗಟ್ಟಿ ನಿಲ್ಲಿಸಿ ವೆಂಕಪ್ಪನವರೊಂದಿಗೆ ವಿನಾ ಕಾರಣ  ಜಗಳವಾಡಿ ಹಲ್ಲೆ ನಡೆಸಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

ದಿನಾಂಕ 12/11/2018ರಂದು ಸೋಮವಾರಪೇಟೆ ಬಳಿಯ ತಲ್ತರೆ ಶೆಟ್ಟಳ್ಳಿ ನಿವಾಸಿ ಈರಪ್ಪ ಎಂಬವರು ಕೆಲಸ ಮುಗಿಸಿ ಮನೆಗೆ ಹೋಗುತ್ತಿರುವಾಗ ಅದೇ ಗ್ರಾಮದ ನಿವಾಸಿ ಪ್ರಜ್ವಲ್ ಎಂಬವರು ದಾರಿ ತಡೆದು ಪಂಚಾಯಿತಿಯ ನೀರು ಬಿಡುವ ವಿಚಾರಕ್ಕೆ ಜಗಳವಾಡಿ ಹಲ್ಲೆ ನಡೆಸಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.