Crime News
ಅಪಘಾತ ಪ್ರಕರಣ
ದಿನಾಂಕ 12-11-2018 ರಂದು ಮಡಿಕೇರಿ ತಾಲೋಕಿನ ಹೊದ್ದೂರು ಗ್ರಾಮದ ನಿವಾಸಿಯಾದ ಆನಂದರವರು ತನ್ನ ಪತ್ನಿಯೊಂದಿಗೆ ಸ್ಕೂಟರಿನಲ್ಲಿ ಕಗ್ಗೋಡ್ಲುವಿನಿಂದ ಮನೆಗೆ ಹೋಗುತ್ತಿರುವಾಗ ಹಾಕತ್ತೂರುವಿಗೆ ತಲುಪುವಾಗ ಹಿಂದಿನಿಂದ ಹೋಗುತ್ತಿದ್ದ ಇನ್ನೋವಾ ಕಾರನ್ನು ಅದರ ಚಾಲಕ ಸುರೇಶ ಎಂಬುವವರು ದಾಟಿ ಹೋಗುತ್ತಿದ್ದಾಗ ಎದುರಿನಿಂದ ಮತ್ತೊಂದು ಕಾರು ಬಂದಾಗ ಇನ್ನೋವಾ ಕಾರನ್ನು ಚಾಲಕ ದುಡುಕಿನಿಂದ ರಸ್ತೆಯ ಎಡಬದಿಗೆ ತಿರುಗಿಸಿದಾಗ ಕಾರಿನ ಹಿಂಭಾಗ ಸ್ಕೂಟರ್ ಗೆ ತಗುಲಿ ಇಬ್ಬರೂ ಬಿದ್ದು ಗಾಯಗೊಂಡಿದ್ದು, ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ವ್ಯಕ್ತಿಯ ಆತ್ಮಹತ್ಯೆ
ವಿರಾಜಪೇಟೆ ತಾಲೋಕಿನ ಕುಟ್ಟದ ನಿವಾಸಿಯಾದ ಪಣಿಯರವರ ಕರ್ಪ ಎಂಬುವವರು ಜೀವನದಲ್ಲಿ ಜುಗುಪ್ಸೆಗೊಂಡು ದಿನಾಂಕ 13-11-2018 ರಂದು ತೋಟದಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ಕುಟ್ಟ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಅಪರಿಚಿತ ಮಹಿಳೆಯ ಶವ ಪತ್ತೆ
ದಿನಾಂಕ 13-11-2018 ರಂದು ಸೋಮವಾರಪೇಟೆ ನಗರದ ಮಾರಿಶ್ ಹೊಟೆಲ್ ಬಳಿ ಅಂದಾಜು 60 ವರ್ಷ ಪ್ರಾಯದ ಅಪರಿಚಿತ ಮಹಿಳೆಯ ಶವ ದೊರೆತ್ತಿದ್ದು ಈ ಬಗ್ಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.