Crime News

ಹಣಕಾಸಿನ ವ್ಯವಹಾರ ವ್ಯಕ್ತಿಯ ಕೊಲೆಗೆ ಯತ್ನ:

ಕುಶಾಲನಗರ ಠಾಣಾ ಸರಹದ್ದಿನ ಕುವೆಂಪು ಬಡಾವಣೆ ನಿವಾಸಿ ಆರ್‍. ಯುವರಾಜ್ ರವರು ಪೈನಾನಷಿಯರ್ ಕೆಲಸ ಮಾಡಿಕೊಂಡಿದ್ದು, ಇವರು ಹಿಂದೆ ಇದೇ ಕೆಲಸವನ್ನು ಪೆರಿಯಸ್ವಾಮಿ ಎಂಬವರರಲ್ಲಿ ಮಾಡಿಕೊಂಡಿದ್ದ ಸಂದರ್ಭದಲ್ಲಿ ಅವರೊಂದಿಗೆ ಮೋಹನ್ ರಾಜ್ ಎಂಬವರು ಸಹ ಕೆಲಸ ಮಾಡಿಕೊಂಡಿದ್ದು, ಹಾಲಿ ಮನಿ ಲ್ಯಾಂಡರ್‍ ಕೆಲಸವನ್ನು ನಿರ್ವನಿಸುತ್ತಿರುವ ವಿಚಾರದಲ್ಲಿ ಮೋಹನ್ ರಾಜ್ ಗೆ ಅಸಮದಾನ ಇದ್ದು ದಿನಾಂಕ 14-11-2018 ರಂದು ಆರ್.ಯುವರಾಜ್ ರವರು ಬೆಳಗ್ಗೆ ಕುಶಾಲನಗರದಿಂದ ಗೋಣಿಕೊಪ್ಪದ ಕಡೆಗೆ ಮೋಟಾರ್‍ಸೈಕಲ್‍ನಲ್ಲಿ ಹೋಗುತ್ತಿದ್ದಾಗ ಮೋಹನ್‍ರಾಜ್ ಕಡೆಯವರು ಟಾಟಸುಮೋ ವಾಹನದಲ್ಲಿ ಬಂದು ದಾರಿ ತಡೆದು ಮೋಟಾರ್ ಸೈಕಲಿಗೆ ಡಿಕ್ಕಿಪಡಿಸಿ ಕೊಲೆಗೆ ಯತ್ನಿಸಿದ್ದು, ಈ ಸಂದಂರ್ಭದಲ್ಲಿ ಆರ್.ಯುವರಾಜ್ ರವರು ಗಾಯಗೊಂಡು ಚಿಕಿತ್ಸೆಗಾಗಿ ಸಿದ್ದಾಪುರ ಆಸ್ಪತ್ರೆಗೆ ದಾಖಲುಗೊಂಡಿದ್ದು, ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ:

ಜೀವನದಲ್ಲಿ ಜುಗುಪ್ಸೆಗೊಂಡ ವ್ಯಕ್ತಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಾಪೋಕ್ಲು ಠಾಣಾ ಸರಹದ್ದಿನ ಬಲಮುರಿ ಗ್ರಾಮದಲ್ಲಿ ನಡೆದಿದೆ. ಬಲಮುರಿ ಗ್ರಾಮದ ನಿವಾಸಿ ಕೆ.ಎಂ. ಪ್ರದೀಪ ಎಂಬವರು ಜೀವನದಲ್ಲಿ ಜುಗುಪ್ಸೆಗೊಂಡು ದಿನಾಂಕ 12-11-2018 ರಂದು ವಿಷ ಸೇವಿಸಿ ಅಸ್ವಸ್ಥಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಿಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸದರಿಯವರು ಮೃತಪಟ್ಟಿದ್ದು ಈ ಸಂಬಂಧ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.

ವಿಷ ಸೇವಿಸಿ ಮಹಿಳೆ ಆತ್ಮಹತ್ಯೆ:

ಮಡಿಕೇರಿ ತಾಲೋಕು ಬಲಮುರಿ ಗ್ರಾಮದ ನಿವಾಸಿ ರಾಜೇಶ್ ಎಂಬವರ ಪತ್ನಿ ಶ್ರೀಮತಿ ರಜನಿ ಎಂಬವರು ಹೊಟ್ಟೆನೋವಿನ ಕಾಯಿಲೆಯಿಂದ ಬಳಲುತ್ತಿದ್ದು, ಇದೇ ವಿಚಾರವಾಗಿ ಜುಗುಪ್ಸೆಕೊಂಡ ಆಕೆ ದಿನಾಂಕ 9-11-2018 ರಂದು ವಿಷ ಸೇವಿಸಿ ಅಸ್ವತ್ಥಗೊಂಡು ಅವರನ್ನು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದು ಈ ಸಂಬಂಧ ನಾಪೋಕ್ಲು ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಬಾಗಿಲು ಮುರಿದು ಚಿನ್ನಾಭರಣ ಕಳ್ಳತನ:

ವ್ಯಕ್ತಿಯೋರ್ವರ ಮನೆಯ ಬಾಗಿಲನ್ನು ಮುರಿದು ನುಗ್ಗಿದ ಕಳ್ಳರು ಚಿನ್ನಾಭರಣ ಮತ್ತು ನಗದು ಹಣವನ್ನು ಕಳ್ಳತನ ಮಾಡಿರುವ ಘಟನೆ ನಾಪೋಕ್ಲು ಠಾಣಾ ಸರಹದ್ದಿನ ಚೆರಿಯಪರಂಬು ರಸ್ತೆ, ಬೇತು ಗ್ರಾಮದಲ್ಲಿ ನಡೆದಿದೆ. ಬೇತು ಗ್ರಾಮದ ನಂದ ಎಂಬವರ ಲೈನು ಮನೆಯಲ್ಲಿ ವಾಸವಾಗಿರುವ ಶ್ರೀಮತಿ ವಾರಿಜಾಕ್ಷಿ ಎಂಬವರು ದಿನಾಂಕ 14-11-2018 ರಂದು ಬೆಳಿಗ್ಗೆ ಎಂದಿನಂತೆ ಕೂಲಿ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಯಾರೋ ಕಳ್ಳತು ಅವರ ಮನೆಯ ಬಾಗಿಲಿನ ಬೀಗವನ್ನು ಮುರಿದು ಒಳ ನುಗ್ಗಿ ಗಾಡ್ರೇಜ್ ಬೀರುವಿನ ಸೇಪ್ಟಿಲಾಕರ್‍ನಲ್ಲಿಟ್ಟಿದ್ದ 1,40,000/- ರೂಲ ಮೌಲ್ಯದ ಚಿನ್ನಾಭರಣ ಹಾಗು 500/- ರೂ. ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಈ ಸಂಬಂಧ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ನೇಣುಬಿಗಿದುಕೊಂಡು ಮಹಿಳೆ ಆತ್ಮಹತ್ಯೆ:

ಕುಟ್ಟ ಠಾಣಾ ಸರಹದ್ದಿನ ತೈಲಾ ಗ್ರಾಮದ ನಿವಾಸಿ ಪಣಿಎರವರ ಬೋಜ ಎಂಬವರ ಪತ್ನಿ   ಪಣಿಎರವರ ಮೀನ ಎಂಬವರು ಜೀವನದಲ್ಲಿ ಜುಗುಪ್ಸೆಗೊಂಡು ದಿನಾಂಕ 13-11-2018 ರಂದು ರಾತ್ರಿ ತಮ್ಮ ವಾಸದ ಮನೆಯಲ್ಲಿ ಕುತ್ತಿಗೆಗೆ ನೇಣುಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಕುಟ್ಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಾರಿ ತಡೆದು ಹಲ್ಲೆ.

ಸೋಮವಾರಪೇಟೆ ಠಾಣೆ ವ್ಯಾಪ್ತಿಯ ಗಾಂಧಿನಗರ ನಿವಾಸಿ ಪ್ರವೀಣ್ ಕುಮಾರ್‍ರವರು ತನ್ನ ಸ್ನೇಹಿತರೊಂದಿಗೆ ದಿನಾಂಕ 14-11-2018 ರಂದು ಕಾರಿನಲ್ಲಿ ಕುಶಾಲನಗರದ ಕಡೆಗೆ ಹೋಗುತ್ತಿದ್ದಾಗ ಬೇಳುರು ಬಾಣೆ ಎಂಬಲ್ಲಿ ಆರೋಪಿಗಳಾದ ಐಗೂರು ಗ್ರಾಮದವರಾದ ಭರತ್, ಜೀವನ್, ರಾಜೇಶ್, ಅಭಿ, ಕವನ್ ಮತ್ತು ಇತರರು ಸೇರಿ ಪಿಕ್‍ಅಪ್, ಬೈಕು ಮತ್ತು ಕಾರಿನಲ್ಲಿ ಬಂದು ದಾರಿ ತಡೆದು ಕಾರಿನಲ್ಲಿ ಜನತಾ ಕಾಲೋನಿಯ ಹರ್ಷಿತ್ ಎಂಬವನ ಬಗ್ಗೆ ವಿಚಾರಿಸಿ ಜಗಳ ತೆಗೆದು ದೊಣ್ಣೆಯಿಂದ ಪ್ರವೀಣ್ ಕುಮಾರ್‍ರವರ ಮೇಲೆ ಹಾಗು ಆತನ ಸ್ನೇಹಿತ ಡೊಮೇನಿಕ್ ಎಂಬವರ ಮೇಲೆ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ಜಾತಿ ನಿಂದನೆ ಮಾಡಿದ್ದು ಅಲ್ಲದೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಿಳೆ ಮೇಲೆ ಹಲ್ಲೆಗೆ ಯತ್ನಿಸಿ ಕೊಲೆ ಬೆದರಿಕೆ:

ಶನಿವಾರಸಂತೆ ಠಾಣಾ ಸರಹದ್ದಿನ ಮೆಣಸ ಗ್ರಾಮದ ನಿವಾಸಿ ಶ್ರೀಮತಿ ಭವಾನಿ ಎಂಬವರು ದಿನಾಂಕ 13-11-2018 ರಂದು ಸಂಜೆ 6-00 ಗಂಟೆಯ ಸಮಯದಲ್ಲಿ ಮನೆಯಲ್ಲಿರುವಾಗ್ಗೆ ಆರೋಪಿ ಮೆಣಸ ಗ್ರಾಮದ ಪರಮೇಶ ಎಂಬವರು ಕೈಯಲ್ಲಿ ಕತ್ತಿಯನ್ನು ಹಿಡಿದುಕೊಂಡು ಬಂದು ತಾನು ಜೈಲಿಗೆ ಹೋಗಲು ನೀವುಗಳು ಕಾರಣ ಎಂದು ಹೇಳಿ ಭವಾನಿಯವರ ಕೈಯನ್ನು ಹಿಡಿದು ಎಳೆದಾಡಿ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಒಡ್ಡಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.