Crime News

ಮನುಷ್ಯ ಕಾಣೆ ಪ್ರಕರಣ

ಭಾಗಮಂಡಲ ಬಳಿಯ ಪದಕಲ್ಲು ನಿವಾಸಿ ಉದಯಕುಮಾರ ಎಂಬವರು 01/11/2017ರಂದು ಅವರ ಮನೆಯಿಂದ ಎಲ್ಲಿಗೋ ಹೋದವರು ಇದುವರೆಗೂ ಮರಳಿ ಬಾರದೆ ಕಾಣೆಯಾಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಭಾಗಮಂಡಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಡಿದ್ದಾರೆ.

 ಜನರೇಟರ್ ಕಳವು

ಮೈಸೂರು ನಿವಾಸಿ ಆರ್ ವಿನೋದ್ ಎಂಬವರು ಜೂನ್‌ ತಿಂಗಳಿನಲ್ಲಿ ನಾಪೋಕ್ಲು ಬಳಿಯ ನೆಲಜಿ ನಿವಾಸಿ ಎನ್‌.ಸಿ.ನಾಣಯ್ಯ ಎಂಬವರ ಮನೆಯ ವೆಲ್ಡಿಂಗ್ ಕೆಲಸದ ಗುತ್ತಿಗೆ ತೆಗೆದುಕೊಂಡು ಸೆಪ್ಟೆಂಬರ್ ತಿಂಗಳಿನವರೆಗೆ ಕೆಲಸ ಮಾಡಿ ಅವರ ವೆಲ್ಡಿಂಗ್ ಜನರೇಟರನ್ನು ನಾಣಯ್ಯನವರ ಮನೆಯ ಬಳಿಯ ಕಣದಲ್ಲಿ ಇಟ್ಟು ಹೋಗಿದ್ದು ದಿನಾಂಕ 09/11/2018ರಂದು ನಾಣಯ್ಯನವರು ವಿನೋದ್‌ರವರಿಗೆ ಕರೆ ಮಾಡಿ ಕಣದಲ್ಲಿದ್ದ ವೆಲ್ಡಿಂಗ್ ಜನರೇಟರ್ ಕಾಣೆಯಾಗಿದ್ದು ಯಾರೋ ಕಳವು ಮಾಡಿಕೊಂಡು ಹೋಗಿರುವುದಾಗಿ ತಿಳಿಸಿದ್ದು ಕೂಡಲೇ ವಿನೋದ್‌ರವರು ನೆಲಜಿಗೆ ಬಂದು ನೋಡಿದಾಗ ಜನರೇಟರ್ ಕಾಣೆಯಾಗಿದ್ದು ಯಾರೋ ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 ರಸ್ತೆ ಅಪಘಾತ

ದಿನಾಂಕ 15/11/2018ರಂದು ವಿರಾಜಪೇಟೆ ಬಳಿಯ ಹಾತೂರು ನಿವಾಸಿ ಎಂ.ಕೆ.ಚಂಗಪ್ಪ ಎಂಬವರು ಒಂದು ಮಾರುತಿ ಓಮಿನಿ ವ್ಯಾನಿನಲ್ಲಿ ಹಾತೂರಿನಿಂದ ವಿರಾಜಪೇಟೆಗೆ ಬರುತ್ತಿರುವಾಗ ಅಂಬಟ್ಟಿ ಎಂಬಲ್ಲಿ ಎದುರಿನಿಂದ ಬೆಂಗಳೂರಿನ ಭರತ್‌ ಕುಮಾರ್‌ ಎಂಬವರು ಒಂದು ಕಾರನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಚಂಗಪ್ಪನವರ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಎರಡೂ ಕಾರುಗಳಿಗೆ ಹಾನಿಯಾಗಿ ಚಂಗಪ್ಪನವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 ಕೊಲೆ ಬೆದರಿಕೆ

ಸೋಮವಾರಪೇಟೆ ಬಳಿಯ ತಾಕೇರಿ ನಿವಾಸಿ ಶೈನಿ ಎಂಬವರು ಕೆಲವು ತಿಂಗಳಿನಿಂದ ಅವರ ತಾಯಿಯೊಂದಿಗೆ ಹಾನಗಲ್ಲು ಗ್ರಾಮದಲ್ಲಿ ವಾಸಿವಾಗಿದ್ದು ದಿನಾಂಕ 13/11/2018ರಂದು ತಾಕೇರಿಯ ಮನೆಗೆ ತಾಯಿಯೊಂದಿಗೆ ಹೋದಾಗ ಅಲ್ಲಿ ಅವರ ದೊಡ್ಡಪ್ಪ ಮೋಹನ್‌ ಎಂಬವರು ಅಶ್ಲೀಲ ಶಬ್ದಗಳಿಂದ ಬೈದು ಮನೆಗೆ ಬಂದರೆ ಕೊಲೆ ಮಾಡುವುದಾಗಿ ಬೆದರಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ

ದಿನಾಂಕ 15/11/2018ರಂದು ಶನಿವಾರಸಂತೆ ಬಳಿಯ ಕಿತ್ತೂರು ನಿವಾಸಿ ಮಲ್ಲಿಕಾರ್ಜುನ ಎಂಬವರು ಅವರ ಸ್ಕೂಟರಿನಲ್ಲಿ ಪತ್ನಿ ದೀನಾಮಣಿ ಎಂಬವರೊಂದಿಗೆ ಶನಿವಾರಸಂತೆ ಕಡೆಗೆ ಬರುತ್ತಿರುವಾಗ ಬೆಳ್ಳಾರಳ್ಳಿ ಜಂಕ್ಷನ್ ಬಳಿ ಎದುರಿನಿಂದ ಒಂದು ಬೈಕನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಮಲ್ಲಿಕಾರ್ಜುನರವರ ಸ್ಕೂಟರಿಗೆ ಡಿಕ್ಕಿಪಡಿಸಿದ ಪರಿಣಾಮ ಮಲ್ಲಿಕಾರ್ಜುನ ಮತ್ತು ಅವರ ಪತ್ನಿಗೆ ಗಾಯಗಳಾಗಿರುವುದಾಗಿ  ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.