Crime News

ಪಾದಚಾರಿಗೆ ಕಾರು ಡಿಕ್ಕಿ

ದಿನಾಂಕ 13-4-2018 ರಂದು ವಿರಾಜಪೇಟೆ ನಗರದ ಹರಿಕೇರಿಯ ನಿವಾಸಿಯಾದ ಮಂಜುನಾಥ ಎಂಬುವವರು ಕಾಫಿ ಲೋಡಿಂಗ್ ಕೆಲಸ ಮುಗಿಸಿ ರಾತ್ರಿ 10-30 ಗಂಟೆಗೆ ಮನೆಗೆ ನಡೆದುಕೊಂಡು ಹೋಗುತ್ತಿರುವಾಗ ಹಿಂದಿನಿಂದ ಮಾರುತಿ ಕಾರನ್ನು ಅದರ ಚಾಲಕ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ನಡೆದುಕೊಂಡು ಹೊಗುತ್ತಿದ್ದ ಮಂಜುನಾಥರವರಿಗೆ ಡಿಕ್ಕಿಪಡಿಸಿ ನಿಲ್ಲಿಸದೇ ಹೊರಟು ಹೋಗಿದ್ದು, ಮಂಜುನಾಥರವರಿಗೆ ಗಾಯಗಳಾಗಿದ್ದು ಈ ಬಗ್ಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಹೊಡೆದಾಟದಿಂದ ಗಾಯಗೊಂಡಿದ್ದ ಮಹಿಳೆ ಸಾವು

ಹೊಡೆದಾಟದಿಂದ ಗಾಯಗೊಂಡಿದ್ದ ಮಹಿಳೆ ಮೃತಪಟ್ಟ ಘಟನೆ ಸೋಮವಾರಪೇಟೆ ತಾಲೂಕಿನ ಶಿರಂಗಾಲ ಗ್ರಾಮದಲ್ಲಿ ವರದಿಯಾಗಿದೆ. ದಿನಾಂಕ 12-4-2018 ರಂದು ಶಿರಂಗಾಲ ಗ್ರಾಮದ ನಿವಾಸಿಯಾದ ಅಕ್ಕಮ್ಮನವರಿಗೆ ಪಕ್ಕದ ಮನೆಯವರಾದ ಆಶಾ, ರೇಷ್ಮ ಮತ್ತು ನಾಗೇಶರವರು ಸೇರಿಕೊಂಡು ಹಳೇ ದ್ವೇಷದಿಂದ ಕಲ್ಲಿನಿಂದ ತಲೆ ಮತ್ತು ಶರೀರಕ್ಕೆ ಹೊಡೆದು ಗಾಯಗೊಳಿಸಿದ್ದು, ಗಾಯಗೊಂಡಿದ್ದ ಅಕ್ಕಮ್ಮನವರು ಚಿಕಿತ್ಸೆ ಪಡೆಯದೇ ಮನೆಯಲ್ಲೇ ಇದ್ದವರು ದಿನಾಂಕ 13-4-2018 ರಂದು ಮೃತಪಟ್ಟಿರುವುದಾಗಿ  ಮಗ ರಘುರವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಹಲ್ಲೆ ಪ್ರಕರಣ

ದಿನಾಂಕ 11-4-2018 ರಂದು ಸೋಮವಾರಪೆಟೆ ತಾಲೂಕಿನ ಯಲಕನೂರು ಗ್ರಾಮದ ನಿವಾಸಿಯಾದ ಗೀತಾರವರು ಪತಿ ಅಂತುರವರು ತಂದ ಕೋಳಿ ಮಾಂಸವನ್ನು ಸಾರು ಮಾಡಲಿಲ್ಲವೆಂದು ಜಗಳ ತೆಗೆದು ಕತ್ತಿಯಿಂದ ಕಡಿದು ಗಾಯಪಡಿಸಿದ್ದು ಈ ಬಗ್ಗೆ ದಿನಾಂಕ 14-4-2018 ರಂದು ಗೀತಾರವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಹಲ್ಲೆ ಪ್ರಕರಣ

ದಿನಾಂಕ 14-4-2018 ರಂದು ಗೋಣಿಕೊಪ್ಪ ನಗರದ ಬೈಪಾಸ್ ರಸ್ತೆಯಲ್ಲಿ ಅಂಗಡಿ ಇಟ್ಟುಕೊಂಡಿರುವ ರೀತುರಾಜ್ ರವರ ಅಂಗಡಿಗೆ ಈ ಹಿಂದೆ ಅವರ ಕಾರಿನಲ್ಲಿ ಚಾಲಕನಾಗಿದ್ದ ಸಾಯಿಕುಮಾರ್ ಎಂಬುವವರು ಪಿಕ್ಅಪ್ ಜೀಪಿನಲ್ಲಿ ನಾಲ್ಕು ಜನರೊಂದಿಗೆ ಹೋಗಿ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದು, ಈ ಬಗ್ಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Leave a Reply

Your email address will not be published.