Crime News

ವ್ಯಕ್ತಿಯ ಆತ್ಮಹತ್ಯೆ

ವಿರಾಜಪೇಟೆ ತಾಲೋಕಿನ ನಿಟ್ಟೂರು ಗ್ರಾಮದ ನಿವಾಸಿಯಾದ ರಾಜು ಎಂಬುವವರು ಜೀವನದಲ್ಲಿ ಜುಗುಪ್ಸೆಗೊಂಡು ದಿನಾಂಕ 16-11-2018 ರಂದು ರಾತ್ರಿ ಮನೆಯ ಒಳಗೆ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಪಘಾತ ಪ್ರಕರಣ

ದಿನಾಂಕ 16-11-2018 ರಂದು ಕಡಗದಾಳು ಗ್ರಾಮದ ನಿವಾಸಿಯಾದ ಸೋಮಣ್ಣ ಅವರ ಸ್ನೇಹಿತ ನಂದಕುಮಾರ್ ರವರೊಂದಿಗೆ ಮೋಟಾರು  ಸೈಕಲಿನಲ್ಲಿ ಕುಶಾಲನಗರದ ದಂಡಿನಪೇಟೆ ಜಂಕ್ಷನ್ ಬಳಿ ಹೋಗುತ್ತಿರುವಾಗ ಆಟೋವನ್ನು ಅದರ ಚಾಲಕ ಅಜಾಗರೂಕತೆಯಿಂದ ಚಾಲನೆ ಮಾಡಿ ಮೋಟಾರು ಸೈಕಲಿಗೆ ಡಿಕ್ಕಿಪಡಿಸಿದ ಪರಿಣಾಮ ಇಬ್ಬರಿಗೂ ಗಾಯವಾಗಿದ್ದು ಈ ಬಗ್ಗೆ ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.