Crime News

ವ್ಯಕ್ತಿ ಆತ್ಮಹತ್ಯೆ ಪ್ರಕರಣ

ದಿನಾಂಕ 19/11/2018ರಂದು ಸೋಮವಾರಪೇಟೆ ಬಳೀಯ ಚೌಡ್ಲು ನಿವಾಸಿ ದಿವಾಕರ ಎಂಬವರು ದೀರ್ಘ ಕಾಲದ ಮಾನಸಿಕ ಅಸ್ವಸ್ಥತೆಯಿಂದ ಜುಗುಪ್ಸೆಗೊಂಡು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಹಲ್ಲೆ ಪ್ರಕರಣ

ದಿನಾಂಕ 18/11/2018ರಂದು ಮಡಿಕೇರಿ ನಗರದ ಮಲ್ಲಿಕಾರ್ಜುನ ನಗರದ ನಿವಾಸಿ ದಿನೇಶ್‌ ಎಂಬವರ ಮೇಲೆ ಮಲ್ಲಿಕಾರ್ಜುನ ನಗರದ ನಿವಾಸಿಗಳಾದ ಆನಂದ, ಕಾವೇರಿ ಹಾಗೂ ಮಾನಸ ಎಂಬವರು ಕ್ಷುಲ್ಲಕ ಕಾರಣಕ್ಕೆ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿಯ ಶವ ಪತ್ತೆ

ದಿನಾಂಕ 18/11/2018ರಂದು ಭಾಗಮಂಡಲ ಬಳೀಯ ಚೆಟ್ಟಿಮಾನಿ ನಿವಾಸಿ ಶಿವಾಜಿ ಎಂಬವರು ರಾತ್ರಿ ಮನೆಯಲ್ಲಿದ್ದು ಬೆಳಿಗ್ಗೆ ಮನೆಯಲ್ಲಿ ಕಾಣದ ಎಲ್ಲರೂ ಸೇರಿ ಹುಡುಕಾಡಿದಾಗ ಸಮೀಪದ ಕೇಕಡ ರವೀಂದ್ರ ಎಂಬವರ ಕೆರೆಯಲ್ಲಿ ಶಿವಾಜಿರವರ ಶವ ತೇಲುತ್ತಿದ್ದುದು ಪತ್ತೆಯಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಭಾಗಮಂಡಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 ಕೊಲೆ ಯತ್ನ ಪ್ರಕರಣ

ದಿನಾಂಕ 18/11/2018ರಂದು ರಾತ್ರಿ ವೇಳೆ ಮಡಿಕೇರಿ ಬಳಿಯ ಬಿಳಿಗೇರಿ ನಿವಾಸಿ ಮಂಞೀರ ಬೋಪಯ್ಯ ಎಂಬಾತನು ಕ್ಷುಲ್ಲಕ ಕಾರಣಕ್ಕೆ ಆತನ ತಮ್ಮ ಮಂಞೀರ ಕುಟ್ಟಪ್ಪ ಎಂಬಾತನ ಮೇಲೆ ಕತ್ತಿಯಿಂದ ಹಲ್ಲೆ ಮಾಡಿ ಮಾಡಿ ಕೊಲೆ ಯತ್ನ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ, ಮಹಿಳೆ ಸಾವು

ದಿನಾಂಕ 18/11/2018ರಂದು ಬೆಂಗಳೂರು ನಿವಾಸಿಗಳಾದ ಬೆನೆಟ್ ಥೋಮಸ್, ವೈಶಾಲಿ, ಶ್ವೇತಾ, ಜೈಸನ್ ಸ್ಯಾಮ್ಯುಯೆಲ್ ಮತ್ತು ಸುನಿಲ್ ತಿಮ್ಮಯ್ಯ ಎಂಬವರು ಒಂದು ಕಾರಿನಲ್ಲಿ ಪೊನ್ನಂಪೇಟೆಯಲ್ಲಿ ಮದುವೆ ಸಮಾರಂಭ ಮುಗಿಸಿ ಗೋಣಿಕೊಪ್ಪದ ಕಡೆಗೆ ಹೋಗುತ್ತಿರುವಾಗ ಅರುವತೊಕ್ಲು ಗ್ರಾಮದ ಬಳಿ ಕಾರನ್ನು ಚಾಲಿಸುತ್ತಿದ್ದ ಸುನಿಲ್ ತಿಮ್ಮಯ್ಯ ಕಾರನ್ನು ಅತಿ ವೇಗ ಮ್ತತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ಕಾರು ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಮಗುಚಿಕೊಂಡ ಪರಿಣಾಮ ಕಾರಿನಲ್ಲಿದ್ದ ವೈಶಾಲಿ ಎಂಬವರು ಸ್ಥಳದಲ್ಲೇ ಸಾವಿಗೀಡಾಗಿದ್ದು ಉಳಿದವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿ ಆತ್ಮಹತ್ಯೆ

ದಿನಾಂಕ 15/11/2018ರಂದು ಗೋಣಿಕೊಪ್ಪ ಬಳಿಯ ಪಿ.ಹೆಚ್‌.ಎಸ್.ಕಾಲೊನಿ ನಿವಾಸಿ ಮುತ್ತಪ್ಪ ಎಂಬವರು ಮದ್ಯ ಸೇವಿಸಿದ ಅಮಲಿನಲ್ಲಿ ವಿಷ ಸೇವಿಸಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದವರು ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 19/11/2018ರಂದು ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕರಿ ಮೆಣಸು ಕಳವು ಪ್ರಕರಣ

ದಿನಾಂಕ 18/11/2018ರ ರಾತ್ರಿ ವೇಳೆ ಪೊನ್ನಂಪೇಟೆ ಬಳಿಯ ಕೊಟ್ಟಗೇರಿ ನಿವಾಸಿ ಮಾಚಂಗಡ ಅಶೋಕ ಎಂಬವರು ಮದುವೆ ಸಮಾರಂಭಕ್ಕೆಂದು ಪೊನ್ನಂಪೇಟೆಗೆ ಹೋಗಿದ್ದಾಗ ಯಾರೋ ಕಳ್ಳರು ಅವರ ಮನೆ ಬಳಿಯ ಉಗ್ರಾಣದ ಬೀಗ ಒಡೆದು ಒಳ ಪ್ರವೇಶಿಸಿ ಅಲ್ಲಿದ್ದ ಸುಮಾರು ರೂ. ಒಂದು ಲಕ್ಷ ಮೌಲ್ಯದ ಮೂರು ಕ್ವಿಂಟಲ್ ಕರಿ ಮೆಣಸನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿ ಆತ್ಮಹತ್ಯೆ

ದಿನಾಂಕ 18/11/2018ರ ರಾತ್ರಿ ವೇಳೆ ವಿರಾಜಪೇಟೆ ಬಳಿಯ ಬೇಟೋಳಿಯ ರಾಮನಗರ ನಿವಾಸಿ ಸುರೇಶ ಎಂಬವರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ